ಮತದಾನ ನಮ್ಮ ಹಕ್ಕು ಆಸೆ, ಆಮಿಷಗಳಿಗೆ ಬಲಿಯಾಗಬೇಡಿ

0
9
loading...

ಮುಧೋಳ: ಸೀರೆ, ಪಂಚೆ, ಹಣ, ಹೆಂಡ, ಬಾಡೂಟ ಇತ್ಯಾದಿ ಆಮಿಷಗಳನ್ನೊಡ್ಡಿ ಮತ ಸೆಳೆಯುವ ನಾಟಕಗಳು ರಾಜಾರೋಷವಾಗಿ ನಡೆಯುತ್ತಿರುವುದನ್ನು ನೋಡಿ ಬುದ್ಧಿವಂತರು ರಾಜಕೀಯಕ್ಕೆ ಮುಖ ಮಾಡದಂತಹ ವಾತಾವರಣ ನಿರ್ಮಾಣಗೊಂಡಿದೆ. ರಾಜಕಾರಣ ಎನ್ನುವದು ಅದೊಂದು ಸಮಾಜ ಸೇವೆ. ಆದರೆ ಈಗ ಅದು ಸಂಪೂರ್ಣ ಕಲುಷಿತಗೊಂಡಿದೆ. ರಾಜಕೀಯ ಪ್ರಜ್ಞೆ ಇಲ್ಲದವರು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಒಂದು ದುರಂತವಾಗಿದೆ ಎಂದು ತಾಲೂಕಾ ಕಲಾವಿದರ ಸಂಘದ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಮುಗಳಖೋಡ ಗ್ರಾಮದಲ್ಲಿ “ಲೋಕನಾಯಕಿ” ಸಾಂಸ್ಕøತಿಕ ಸಂಸ್ಥೆ ಅವರು ಏರ್ಪಡಿಸಿದ ಮತದಾನ ಜಾಗೃತಿ ಸಭೆಯಲ್ಲಿ ಮಾತನಾಡುತ್ತ ಮತದಾನ ನಮ್ಮ ಸಾಂವಿಧಾನಕ ಹಕ್ಕು / ರಾಜಕಾರಣವನ್ನು ಪರಿಶುದ್ಧಗೊಳಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಚುನಾವಣೆ ಎನ್ನುವದು ಹಣ ಮತ್ತು ತೋಳ್ಬಲ ಇರುವವರ ಅಖಾಡವಾಗಲು ಅವಕಾಶ ನೀಡಬಾರದು ಎಂದು ಹೇಳಿದ ಅವರು ಯಾವುದೇ ಆಸೆ, ಅಮಿಷಗಳಿಗೆ ಬಲಿಯಾಗದೆ ಸಮಾಜದ ಕಳಕಳಿಯನ್ನು ಗಮನದಲ್ಲಿಟ್ಟು ಶನಿವಾರ ದಿನಾಂಕ 12 ರಂದು ನಡೆಯುವ ವಿಧಾನಸಭೆಯ ಚುನಾವಣೆಯಲ್ಲಿ ಮತದಾನ ಮಾಡಬೇಕು ಎಂದು ವಿನಂತಿಸಿದರು. “ಲೋಕನಾಯಕಿ” ಸಾಂಸ್ಕøತಿಕ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...