ಮತದಾನ ಮಾಡಲು ಸಹಾಯ ಮಾಡಿದ: ಕಾಶಪ್ಪನವರ

0
15
loading...

ಹುನಗುಂದ: ಕಾಂಗ್ರೆಸ ಅಭ್ಯರ್ಥಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಬಾಗಲಕೋಟ ಜಿ.ಪಂ ಅಧ್ಯಕ್ಷೆ ಪತ್ನಿ ವೀಣಾ ಕಾಶಪ್ಪನವರ ತಮ್ಮ ಮಕ್ಕಳೊಂದಿಗೆ ಸ್ವಗ್ರಾಮ ಹಾವರಗಿಯಲ್ಲಿ ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸುವ ವೇಳೆಯಲ್ಲಿ ವಯೋವೃದ್ದ ಮಹಿಳೆಗೆ ಮತದಾನ ಮಾಡುವುದರಲ್ಲಿ ಸಹಾಯ ಮಾಡುವುದರ ಮೂಲಕ ಮಾನವೀಯತೆ ಮರೆದರು. ಇಳಿ ವಯಸ್ಸಿನ ಮಹಿಳೆಯು ತನ್ನ ಹಕ್ಕನ್ನು ಚಲಾಯಿಸಲು ಉತ್ಸಕತೆಯಿಂದ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಚಲಾಯಿಸಿದ್ದು ವಿಶೇಷವಾಗಿತ್ತು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಕರ್ತವ್ಯವಾದ ತಮ್ಮ ನೆಚ್ಚಿನ ನಾಯಕನ ಆಯ್ಕೆಗೆ ಮತ್ತು ರಾಜ್ಯದ ಆಡಳಿತದ ಸೂತ್ರವನ್ನು ಸರಾಗವಾಗಿ ಮುನ್ನೆಡೆಸಲು ಸಮರ್ಥ ವ್ಯಕ್ತಿ ಆಯ್ಕೆ ಮಾಡಲು ಮುಂದಾಗಿರುವುದಂತೂ ವಿಶಿಷ್ಠವಾಗಿತ್ತು.

loading...