ಮತದಾರರ ತೀರ್ಪು ಅಂತಿಮ: ಲಕ್ಷ್ಮಣ ಸವದಿ

0
45
loading...

ಅಥಣಿ 16: ಅಥಣಿ ಮತಕ್ಷೇತ್ರದಲ್ಲಿ ಮೂರು ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿ ಕಳೆದ 15 ವರ್ಷಗಳಿಂದ ತಾಲೂಕಿನ ಅಭಿವೃದ್ಧಿ ಮತ್ತು ತಮ್ಮ ಸೇವೆ ಮಾಡಿದ್ದು, ಮತದಾರರು ನೀಡಿದ ತೀರ್ಪಿಗೆ ನಾನು ಬದ್ಧನಿದ್ದೇನೆ ಎಂದು ಮಾಜಿ ಸಚಿವ ಹಾಗೂ ಅಥಣಿ ಪರಾಜಿತ ಅಭ್ಯರ್ಥಿ ಲಕ್ಷ್ಮಣ ಸವದಿ ಹೇಳಿದರು.ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.

ಮೇ.12 ರಂದು ಅಥಣಿ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನೀಡಿದ ತೀರ್ಪು ಅಂತಿಮವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನು ಶಾಸಕನಾಗಿ ಸೇವೆ ಸಲ್ಲಿಸಲು ಜನ ಒದಗಿಸಿಕೊಟ್ಟ ಅವಕಾಶ ಸಮರ್ಥವಾಗಿ ನಿಭಾಯಿಸಿದ್ದೇನೆ. ಜನರಿದಂಲೇ ಉನ್ನತ ಸ್ಥಾನಮಾನ ಕಂಡುಕೊಂಡಿರುವ ನಾನು ಜನರ ಮಧ್ಯದಲ್ಲಿಯೇ ಇದ್ದು ಜನಸೇವೆ ಮಾಡುತ್ತೇನೆ ಎಂದರು.

loading...