ಮತ ನೀಡಿದ ಮತದಾರರಿಗೆ ಅಭಿನಂದನೆ : ಪಟ್ಟಣ

0
29
loading...

ರಾಮದುರ್ಗ: ತಾಲೂಕಿನಲ್ಲಿ ನಾನು ಮಾಡಿದ ಅಭಿವೃದ್ದಿ ಕಾರ್ಯವನ್ನು ಮೆಚ್ಚಿಕೊಂಡು ನನಗೆ ಮತವನ್ನು ನೀಡಿದ ತಾಲೂಕಿನ ಎಲ್ಲ ಮತದಾರರಿಗೆ ಹಾಗೂ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೆನೆ ಎಂದು ಮಾಜಿ ಶಾಸಕ ಅಶೋಕ ಪಟ್ಟಣ ತಿಳಿಸಿದರು.
ಸ್ಥಳೀಯ ಅವರ ನಿವಾಸನದಲ್ಲಿ ಬುಧವಾರ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಢಿದ ಅವರು, ತಾಲೂಕಿನಲ್ಲಿ ಬಿಜೆಪಿ ಪಕ್ಷ ಅಭ್ಯರ್ಥಿ ಅಯ್ಕೆಯಾಗಕಾದರೆ ಮೋದಿಯವರ ಅಲೆ, ಹಿಂದುತ್ವ ಹಾಗೂ ಮತದಾರರಿಗೆ ಹಣವನ್ನು ಹಂಚಿ ಆಯ್ಕೆಯಾಗಿದ್ದಾರೆ ಹೊರತು ಮಹಾದೇವಪ್ಪನ್ನು ನೋಡಿ ಜನರು ಮತವನ್ನು ನೀಡಿರುವದಿಲ್ಲ. ಬಿಜೆಪಿ ಪಕ್ಷದವರು ಅಷ್ಟೆ ಹಿಂದುಗಳಲ್ಲ ಕಾಂಗ್ರೆಸ್‌ ಪಕ್ಷದಲ್ಲಿರುವ ನಾವು ಕೂಡಾ ಹಿಂದುಗಳು, ನಮಗೆ ಹಿಂದು ವಿರೋಧಿಗಳೆಂದು ಬಿಜೆಪಿಯವರು ಬಿಂಬಿಸುತ್ತರಿವರುದು ಸರಿಯಲ್ಲ. ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಲ್ಲಿ ಕೆಲವೊಂದು ಕಾಮಗಾರಿಗಳು ಕಳಪೆ ಕಾಮಗಾರಿಗಳಾಗಿವೆ ಎಂದು ನಮ್ಮ ಗಮನಕ್ಕೆ ಬಂದಿದ್ದು ಇಂತಹ ಕಾಮಗಾರಿಗಳ ಅನುದಾನವನ್ನು ತಡೆಹಿಡಿಯಲಾಗಿದೆ. ನಾವು ತಂದ ಕೆಲಸ ಕಾರ್ಯಗಳ ಮುಂದು ವರೆಯುತ್ತವೆ. ಹೊಸದಾಗಿ ಆಯ್ಕೆಯಾದ ಶಾಸಕರು ಅಭಿವೃದ್ದಿ ಕೆಲಸದಲ್ಲಿ ತೋಡಗಲಿ ಅದಕ್ಕೆ ನಾನು ಯಾವುದೆ ಕಾರಣಕ್ಕೂ ಅಡ್ಡಿ ಮಾಡುವದಿಲ್ಲ, ಹೊಸ ಕೆಲಸಗಳನ್ನು ತಂದು ತಾಲುಕಿನ ಅಭಿವೃದ್ದಿ ಮಾಡಲಿ ಎಂದರು. ಅಲ್ಪ ಮತಗಳಿಂದ ನಾನು ಈ ಭಾರಿ ಚುನಾವಣೆಯಲ್ಲಿ ಪರಾಭವಗೊಂಡಿದ್ದೇನೆ ಮತದಾರರ ತೀರ್ಪಿಗೆ ತಲೆಬಾಗಲೆಬಾಗುತ್ತೇನೆ. ಆದರೂ ಸಹ ತಾಲೂಕಿನಲ್ಲಿದ್ದು ಕೊಂಡು ಜನರ ಸೇವೆ ಮಾಡುತ್ತಾ ನಮ್ಮ ಕಾರ್ಯಕರ್ತರ ಕಷ್ಟ ಸುಖದಲ್ಲಿ ಭಾಗಿಯಾಗಿ ಪಕ್ಷ ಸಂಘಟನೆ ಒತ್ತು ಕೋಡುತ್ತೇನೆ. ಪುರಸಭೆಯ ಮಾಜಿ ಅಧ್ಯಕ್ಷ ಸುರೇಶ ಪತ್ತೆಪೂರ ಮಾತನಾಡಿ ಪುರಸಭೆಯ ವ್ಯಾಪ್ತಿಯಲ್ಲಿ ನಡೆಯಲಿರುವ ಎಲ್ಲ ಕಾಮಗಾರಿಗಳು ಶಾಸಕರ ಪ್ರಯತ್ನದಿಂದ ಸಾಕಷ್ಟು ಅನುದಾನ ತಂದಿದ್ದಾರೆ ಅವುಗಳು ಮುಂದುವರೆಸಿಕೊಂಡು ಹೋಗುತ್ತೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪರಪ್ಪ ಜಂಗವಾಡ, ಯುಥ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ ಬಂಡಿವಡ್ಡರ, ಪುರಸಭೆಯ ಅಧ್ಯಕ್ಷ ಅಶೋಕ ಸೂಳಿಬಾವಿ, ಸದಸ್ಯ ಯಲ್ಲಪ್ಪ ಇಟಗಿ, ಸೇರಿದಂತೆ ಮುಂತಾದವರು ಸುದ್ದಿ ಗೋಷ್ಠಿಯಲ್ಲಿದ್ದರು.

loading...