ಮಮದಾಪೂರ: ಚೆನ್ನಬಸವ ಪುರಾಣ ಆರಂಭ

0
21
loading...

ಕನ್ನಡಮ್ಮ ಸುದ್ದಿ-ಬೆಟಗೇರಿ: ಶ್ರೀಮದ್ಗ ಕಾಶಿ ಜ್ಞಾನ ಸಿಂಹಾಸನಾಧಿಶ್ವರ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ ಅವರು ಸಮೀಪದ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ಆಯೋಜಿಸಿರುವ ಚೆನ್ನಬಸವ ಪುರಾಣ ಪ್ರವಚನ ಕಾರ್ಯಕ್ರಮವನ್ನು ಇತ್ತೀಚಿಗೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಸ್ಥಳೀಯ ಮೌನ ಮಲ್ಲಿಕಾರ್ಜುನ ಮಠದ ಮೌನ ಮಲ್ಲಿಕಾಜುನ ಮಹಾ ಶಿವಯೋಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿಪ್ಪರಗಿಯ ಶಿವರುದ್ರ ಶರಣರು ಚೆನ್ನಬಸವ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಿತು. ಶಿರಗುಪ್ಪಿಯ ಅಪ್ಪಸಾಹೇಬ ಬಡಿಗೇರ ತಬಲಾ ಸಾಥದೊಂದಿಗೆ ಹಿರೇಕೊಪ್ಪದ ಸಂಕಪ್ಪ ಗುರುಗಳಿಂದ ಸಂಗಿತ ಕಾರ್ಯಕ್ರಮ ಜರುಗಿತು.ಶಿರಕೊಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ, ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮಿಜಿ, ಕಪ್ಪತಗುಡ್ಡದ ನಂದಿವೇರಿಮಠದ ಶಿವಕುಮಾರ ಮಹಾಸ್ವಾಮಿಜಿ, ಚುಳಕಿ ಗವಿಮಠದ ವೀರಸಂಗಯ್ಯ ಮಹಾಸ್ವಾಮಿಜಿ, ಬೆಂಗಳೂರಿನ ಅಶ್ವತಪ್ಪ ಅಜ್ಜನವರು ಸೇರಿದಂತೆ ಜನ ಸಂತ-ಶರಣರು, ಆಧ್ಯಾತ್ಮ ಆಸಕ್ತರು, ಗಣ್ಯರು, ಅಪಾರ ಸಂಖ್ಯೆಯಲ್ಲಿ ಶ್ರೀ ಮಠದ ಭಕ್ತರು, ಇತರರು ಇದ್ದರು. ಮಂಜುನಾಥ ಶರಣರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಶೈಲ ಶರಣರು ವಂದಿಸಿದರು.

loading...