ಮಹಿಳೆಯರಿಗಾಗಿ ಠೇವು ಸಂಗ್ರಹ ಯೋಜನೆ ಜಾರಿಗೆ

0
24
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಯು.ಕೆ ಸೌಹಾರ್ಧ ಸಹಕಾರಿ ಸಂಸ್ಥೆ ಯಲ್ಲಾಪುರದಲ್ಲಿ ಪ್ರಧಾನ ಶಾಖೆ ಹೊಂದಿ 8 ಶಾಖೆಗಳು ಜಿಲ್ಲೆಯಾದ್ಯಂತ ವಿಸ್ತರಿಸಲಾಗಿದೆ. ವಿಶೇಷವಾಗಿ ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲೂ ಶಾಖೆಯೊಂದನ್ನು ಸ್ಥಾಪಿಸುವುದಕ್ಕೆ ಚಿಂತನೆ ನಡೆಸಲಾಗಿದ್ದು, ಈ ವರ್ಷ ವಿಶೇಷವಾಗಿ ಮಹಿಳೆಯರನ್ನು ಪ್ರಧಾನವಾಗಿಟ್ಟುಕೊಂಡು ಅದರಲ್ಲೂ ಅಡಿಕೆ, ಮೀನು, ಗೋಡಂಬಿ ಮುಂತಾದ ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗಾಗಿ ಸ್ವರ್ಣರಿಕರಿಂಗ್ (ಬಂಗಾರ ಆಭರಣ ಯೋಜನೆ) ಠೇವು ಸಂಗ್ರಹ ಯೋಜನೆ ಜಾರಿಗೆ ತಂದು, ಆ ಹಣವನ್ನು ಅವರಿಗೆ ಅಂದಿನ ಮೌಲ್ಯದ ಪ್ರಕಾರ ಬಂಗಾರವನ್ನು ನೀಡಲು ಯೋಚನೆ ನಡೆಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಈ ಸಾಲಿನಲ್ಲಿ 1.77 ಕೋಟಿ ನಿರ್ವಹಣಾ ಲಾಭವನ್ನು ಪಡೆದರೆ, ಸಂಸ್ಥೆ 63 ಲಕ್ಷ ನಿವ್ವಳ ಲಾಭ ಗಳಿಸಿದೆ. 4.12 ಕೋಟಿ ಶೇರು ಬಂಡವಾಳವನ್ನು ಹೊಂದಿದ್ದು, ಸುಮಾರು 10 ಸಾವಿರ ಸದಸಯರನ್ನು ತಲುಪಿದೆ. ಅಲ್ಲದೇ, 68.25 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ. ಮತ್ತು 5.19 ಕೋಟಿ ಹಣವನ್ನು ವಿವಿಧ ನಿಧಿಗಳಲ್ಲಿ ಸ್ಥಾಪಿಸಲಾಗಿದೆ. ಮತ್ತು 58.94 ಕೋಟಿ ಠೇವು ಸಂಗ್ರಹ ಮಾಡಲಾಗಿದೆ. ಅಲ್ಲದೇ 55.93 ಕೋಟಿ ಸಾಲ ನೀಡಲಾಗಿದೆ. ಅಂತೆಯೇ ಶೇ 93.38 ವಸೂಲಾತಿ ಪ್ರಮಾಣದಲ್ಲಿ ಸಾಧಿಸಲಾಗಿದೆ. 11.54 ಕೋಟಿ ಗುಂತಾವಣೆ ನಿಧಿಯನ್ನು ಸ್ಥಾಪಿಸಿದ್ದೇವೆ. 1.4 ಕೋಟಿ ವಿವಿಧ ರೀತಿಯಲ್ಲಿ ಸಾಲ ನಿಧಿಯನ್ನು ತೆಗೆದಿರಿಸಲಾಗಿದೆ. ಅಲ್ಲದೇ 55 ಲಕ್ಷ ರೂ ಕಟ್ಟಡ ನಿಧಿ ಇಡಲಾಗಿದೆ. ನಮ್ಮ ಬ್ಯಾಂಕಿಂಗ್ ವ್ಯವಹಾರ ಸ್ವತಂತ್ರವಾಗಿ ನಡೆಸುವುದಕ್ಕಾಗಿ 3.26 ಕೋಟಿ ಅನುತ್ಪಾದಕ ನಿಧಿ ಸ್ಥಾಪಿಸಲಾಗಿದೆ. 3600 ಜನರಿಗೆ ಸಾಲಗಾರರಿದ್ದು, 5 ಸಾವಿರ ಜನರಿಗೆ ನಮ್ಮ ಸಂಸ್ಥೆಯಿಂದ ಸಾಲ ನೀಡಲಾಗಿದೆ. 1400 ಗ್ರಾಹಕರು ಸಾಲದಿಂದ ಮುಕ್ತರಾಗಿದಾರೆ ಎಂದರು. ಪಿ.ಜಿ.ಹೆಗಡೆ ಕಳಚೆ, ವ್ಯವಸ್ಥಾಪಕ ನಿರ್ದೇಶಕ ಎನ್.ಜಿ.ಕಿರಣ ಉಪಸ್ಥಿತರಿದ್ದರು.

loading...