ಮೀನುಗಾರರ ನಾಪತ್ತೆ: ಮುಂದುವರೆದ ಶೋಧ ಕಾರ್ಯಾಚರಣೆ

0
14
loading...

ಕನ್ನಡಮ್ಮ ಸುದ್ದಿ-ಕಾರವಾರ: ಮಂಗಳವಾರ ಬೆಳಗ್ಗೆ ಹೊನ್ನಾವರದ ಅರೆಬಿಯನ್ ಸಮುದ್ರದಲ್ಲಿ ಕಾಣೆಯಾದ ಮೀನುಗಾರಿಕಾ ಬೋಟ್ ಏಂಜೆಲ್-1 ರ ಇಬ್ಬರು ಸಿಬ್ಬಂದಿಗಳ ಹುಡುಕಾಟ ಬುಧವಾರ ಸಹ ಪೂರ್ತಿಯಾಗಿ ಮುಂದುವರೆದಿದ್ದು ನಾಪತ್ತೆಯಾದ ಮೀನುಗಾರರು ಇವರೆಗೂ ಪತ್ತೆಯಾಗಿಲ್ಲ. ಬುಧವಾರ ಡೋರ್ನಿಯರ್ ವಿಮಾನವನ್ನು ಬಳಸಿಕೊಂಡು ಭಾರತೀಯ ಕೋಸ್ಟ್ ಗಾರ್ಡ್ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಮಂಗಳವಾರದಿಂದ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭಾರತೀಯ ಕೋಸ್ಟ್ ಗಾರ್ಡ್‍ನ ಶಿಪ್‍ಗಳಾದ ಐಸಿಜಿ ಅಮಲ್ ಮತ್ತು ಐಸಿಜಿ ಸಾವಿತ್ರಿಬಾಯಿ ಫುಲೆ ಜೊತೆಗೆ ಇಂದು ಬುಧವಾರ ಐಸಿಜಿ ಸಾಗರಪ್ರಹಾರಿ ಶಿಪ್ ಸಹ ಕೈಜೋಡಿಸಿದೆ. ಡೊರ್ನಿಯರ್ ವಿಮಾನವು ಸಹ ನಾಪತ್ತೆಯಾದ ಅರುಣ ರಾಜ್ ಮತ್ತು ಪುಷ್ಪರಾಜ್ ಎಂಬಿಬ್ಬರ ಮೀನುಗಾರರ ಪತ್ತೆಗೆ ತೀವ್ರ ಶೋಧ ನಡೆಸುತ್ತಿದೆ

loading...