ಮುಂಬಯಿ ಶೇರು 246 ಅಂಕ ಏರಿಕೆ

0
16
loading...

ಮುಂಬಯಿ- ದೇಶೀಯ ಸಾಂಸ್ಥಿಕ ಹೂಡಿಕೆದಾರರು ಮುಂಚೂಣಿ ಶೇರುಗಳ ಖರೀದಿಯಲ್ಲಿ ತೊಡಗಿಕೊಂಡದ್ದು ಅಂಕಗಳ ಹೆಚ್ಚಳಕ್ಕೆ ಕಾರಣವಾಗಿದೆ.
ಮೇ ತಿಂಗಳ ವಾಯಿದೆ ವಹಿವಾಟು ಇತ್ಯರ್ಥವಾಗುವ ಅಂತಿಮ ದಿನವಾದ ಇಂದು ವಹಿವಾಟುದಾರರು ವ್ಯಾಪಕ ಶಾರ್ಟ್ ಕವರಿಂಗ್ ಗೆ ತೊಡಗಿಕೊಂಡದ್ದು ಕೂಡ ಸೆನ್ಸೆಕ್ಸ್ ಏರಿಕೆಗೆ ಕಾರಣವಾಯಿತು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ 259.37 ಅಂಕಗಳ ನಷ್ಟವನ್ನು ಅನುಭವಿಸಿದ್ದ ಸೆನ್ಸೆಕ್ಸ್ ಇಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ 116.38 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 35,022.49 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 32.80 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,647.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಚ್ ಡಿ ಎಫ್ ಸಿ ಬ್ಯಾಂಕ್, ರಿಲಯನ್ಸ, ಟಿಸಿಎಸ್, ಎಚ್ ಡಿ ಎಫ್ ಸಿ, ಭಾರ್ತಿ ಇನ್ ಫ್ರಾಟೆಲ್ ಶೇರುಗಳು ಇಂದು ಹಚ್ಚು ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರು ರುಪಾಯಿ ಇಂದು ಆರು ಪೈಸೆ ಚೇತರಿಕೆಯನ್ನು ಕಂಡು 67.37 ರು. ಮಟ್ಟಕ್ಕೆ ತಲುಪಿತ್ತು.

loading...