ಮುಸ್ಲಿಂಮರು ಕಾಂಗ್ರೆಸ್ ಪಕ್ಷದ ಕೈಗೊಂಬೆಯಲ್ಲ: ಬಾಂಸಾರಿ

0
13
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಹಳಿಯಾಳದ ಕೆಲ ಮುಸ್ಲಿಂ ಮುಖಂಡರುಗಳು ಈ ಬಾರಿ ಚುನಾವಣೆಯಲ್ಲಿಯೂ ಮುಸ್ಲಿಂ ಬಾಂಧವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆಂದು ನೀಡಿರುವ ಹೇಳಿಕೆ ಖಂಡನೀಯ. ಮುಸ್ಲಿಮರು ಕಾಂಗ್ರೆಸ್ ಪಕ್ಷದ ಕೈಗೊಂಬೆಯಲ್ಲ. ಇಂದಿಬ್ಬರು ಹೇಳಿಕೆಗಳನ್ನು ಕೊಡುವುದರ ಮೂಲಕ ಇಡೀ ಮುಸ್ಲಿಂ ಸಮಾಜವನ್ನು ಒಂದು ಪಕ್ಷದ ಪರವಾಗಿ ಎತ್ತಿಕಟ್ಟುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಂತಾಗುತ್ತದೆ. ಆದಾಗ್ಯೂ ಅದು ಅವರವರ ವೈಯಕ್ತಿಕ ವಿಚಾರ. ಯಾರು ಏನೆ ಹೇಳಲಿ ನಾವು ಮಾತ್ರ ಬಿಜೆಪಿ ಪರವಿದ್ದೇವೆ. ಮುಸ್ಲಿಂ ಬಾಂದವರ ಬಗ್ಗೆ ಪ್ರಧಾನಿ ಮೋಧಿಯರು ವಿಶೇಷವಾದ ಜನಪಯೋಗಿ ಕಾರ್ಯಕ್ರಮಗಳನ್ನು ಅನುಷ್ಟಾನಪಡಿಸಿದ್ದು, ಕೇಂದ್ರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಕಾರ್ಯದಲ್ಲಿ ನಾವು ಮಗ್ನರಾಗಿದ್ದೇವೆ ಎಂದು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಬ್ದುಲ್ ವಹಾಬ ಬಾಂಸಾರಿ ಹೇಳಿದರು.
ಅವರು ನಗರದಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ನಾವು ಬಿಜೆಪಿ ಜೊತೆಗಿದ್ದೇವೆ. ಕಾಂಗ್ರೆಸ್ ತನ್ನ ಮತ ರಾಜಕೀಯಕ್ಕಾಗಿ ಇಲ್ಲಿಯವರೆಗೂ ಮುಸ್ಲಿಂರನ್ನು ದುರಪಯೋಗಪಡಿಸಿಕೊಂಡಿದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಭವನಕ್ಕಾಗಿ 2 ಕೋಟಿ ರೂ. ಮಂಜೂರಾದರೂ ಇನ್ನೂ ನಿರ್ಮಾಣವಾಗಿಲ್ಲ. ದಾಂಡೇಲಿಯ ಟೌನ್‍ಶಿಪ್ ಮಜೀಸಿದಿಯ ಶಾದಿಮಹಲ್‍ಗೆ ನರೇಂದ್ರ ಮೋದಿಯವರ ಕೇಂದ್ರ ಸರಕಾರ 20 ಲಕ್ಷ ರೂ. ನೀಡಿದೆ. ಇದನ್ನು ಯಾಕೆ ಯಾರೂ ಹೇಳುತ್ತಿಲ್ಲ ಕೆಲ ಮುಸ್ಲಿಂ ಮಖಂಡರು ದೇಶಪಾಂಡೆಯವರಿದ ಕೇವಲ ವೈಯಕ್ತಿಕ ಲಾಭ ಮಾಡಿಕೊಳ್ಳುತ್ತಿದ್ದಾರೆ. ಸುನೀಲ ಹೆಗಡೆಯವರೇ ನಮ್ಮ ಕ್ಷೇತ್ರದ ಮುಂದಿನ ಶಾಸಕರಾಗುತ್ತಾರೆಂದು ಅಬ್ದುಲ್ ವಹಾಬ ಬಾಂಸಾರಿ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ರಫೀಕ ಹುದ್ದಾರ ಅವರು ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ವಧರ್ಮೀಯರನ್ನೂ ಸಮಾನವಾಗಿ ಕಾಣುತ್ತಿದ್ದು, ಅವರ ಅವಧಿಯಲ್ಲಿ ಮುಸ್ಲಿಂರಿಗೆ ಅನುಕೂಲವಾಗುವ ಸಾÀಕಷ್ಠು ಕೆಲಸಗಳಗಿವೆ.

ಮುಸ್ಲಿಂ ಮುಖಂಡೆ ಹಸೀನಾ ಮಕಾನ್ದಾರ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರದಲ್ಲಿ ತ್ರಿವಳಿ ತಲಾಖ್ ತೀರ್ಪ ನಮ್ಮ ಮುಸ್ಲಿಂ ಮಹಿಳೆಯರಿಗೆ ನಿಜಕ್ಕೂ ನ್ಯಾಯಕೊಡಿಸಿದೆ. ಬೇಟಿ ಬಚಾವೋ ಯೋಜನೆಯಡಿ ಶಿಕ್ಷಣಕ್ಕೆ ಮೋದಿ ಸರಕಾರ ಸಹಾಯ ಮಾಡಿದೆ. ಶಾದಿಬಾಗ್ಯ ಯೋಜನೆಯಡಿ ಮುಸ್ಲಿಂ ಯುವತಿಗೆ 50 ಸಾವಿರ ರೂ.ಗಳ ಆರ್ಥಿಕ ನೆರವು ನೀಡಲಾಗುತ್ತಿದೆ. ಹಾಗಾಗಿ ನರೇಂದ್ರ ಮೋದಿ ಸಾಕಾರ ಮುಸ್ಲಿಂರಿಗೆ ಯಾವ ಅನ್ಯಾಯವನ್ನೂ ಮಾಡುತ್ತಿಲ್ಲ. ಬದಲಾಗಿ ಸಾಕಷ್ಠು ಕಾಳಜಿ ತೋರಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅಬ್ದುಲ್ ಸತ್ತಾರ ಧಾರವಾಢಕರ, ಅಬ್ದುಲ್‍ವಹಾಬ್ ಖಾನ್, ಯಾಸಿನ್ ಜುಂಜವಾಡಕರ, ಶಬ್ಬೀರ ಕಿತ್ತೂರ, ಅಬ್ದುಲ್ ಖಾದರ ಡೇನೇಬಾಗ, ಅಲಿಂ ಶೇಖ, ಜೊಸೆಪ್ ಫರ್ನಾಂಡೀಸ್ ಮುಂತಾದವರಿದ್ದರು.

loading...