ಮೂಡಬಿದಿರೆ ಸಂಸ್ಥೆಯ ವಿದ್ಯಾರ್ಥಿಗಳಿಂದ ಮತದಾನ

0
6
loading...

ಕುಕನೂರು :ಪಟ್ಟಣದ ಗವಿಸಿದ್ದೇಶ್ವರ ಶಾಲೆಯಲ್ಲಿ ಪ್ರಾರಂಭವಾಗಿರುವ ಮೂಡಬಿದಿರೆ ಕೊಚಿಂಗ್‌ ಕ್ಲಾಸಸ್‌ ಧಾರವಾಡ ಸಂಸ್ಥೇಯ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಕಾರ್ಯಕ್ರಮ ಗುರುವಾರ ಜರುಗಿತು.
ಸಂಸ್ಥೇಯ ವಿದ್ಯಾರ್ಥಿಗಳು ಪಟ್ಟಣದ ವೀರಭದ್ರಪ್ಪ ವೃತ್ತದ ಮುಖಾಂತರ ಕನಕದಾಸ ವೃತ್ತ ಹಾಗೂ ಅಂಬೇಡ್ಕರ್‌ ವೃತ್ತದ ಮುಖಾಂತರ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಾ ಮತದಾನದ ಕುರಿತು ಘೋಷಣೆಗಳನ್ನು ಕೂಗಿ ಮತದಾರರಿಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಶಿಬಿರದ ಅಧ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ, ನಿರ್ದೆಶಕರಾದ ಮಂಜುನಾಥ ಬಳಿಗಾರ, ಗವಿಸಿದ್ದೇಶ್ವರ ಕಂಪ್ಯೋಟರ್‌ ಶಿಕ್ಷಣ ಸಂಸ್ಥೇಯ ನಿರ್ದೇಶಕ ಶಿವಶಾಂತ ಕುರ್ತಕೋಟಿ, ಶಿಕ್ಷಕರಾದ ಶಾಂತವೀರ ಬನ್ನಿಕೊಪ್ಪ, ಬದ್ರಿನಾಥ, ಅಭಿದಾ ಫರ್ವಿನ್‌, ರುದ್ರಪ್ಪ ಭಂಡಾರಿ, ಕಾಳಪ್ಪ ಭೂವಿ, ಶ್ವೇತಾ, ಶರಣಯ್ಯ ಗದಗೇರಿ ಸೇರಿದಂತೆ ಮತ್ತೀತರರು ಇದ್ದರು.

loading...