ಮೂಲಭೂತ ಸೌಕರ್ಯ ನಿರ್ಲಕ್ಷ್ಯ: ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

0
19
loading...

ಯಲಬುರ್ಗಾ: ತಮ್ಮ ವಾರ್ಡಿನಲ್ಲಿ ಸರಿಯಾದ ಮೂಲಭೂತ ಸೌಕರ್ಯವಿಲ್ಲದೆ ವಾರ್ಡಿಗೆ ನಿರ್ಲಕ್ಷ ಮಾಡಿದ್ದು,ಈ ಭಾರಿಯ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧಾರಿಸಲಾಗಿದೆ ಎಂದು ತಾಲೂಕಿನ ಬಳೂಟಗಿ ಗ್ರಾಮದ 4ನೇ ವಾರ್ಡಿನ ಜನರು ಗುರುವಾರ ಪ್ರತಿಭಟಿಸಿ ಧರಣಿ ಕುಳಿತ್ತಿದ್ದಾರೆ.
ಯಮನೂರಪ್ಪ ಬೇವಿನಮರದ ಮಾತನಾಡಿ, ಬಳೂಟಗಿ ಗ್ರಾಮದ 4ನೇ ವಾರ್ಡಿನಲ್ಲಿ ಛಲವಾದಿ ಸಮಾಜದವರು ವಾಸಿಸುತ್ತಿದ್ದು,ಇಲ್ಲಿ ನಮಗೆ ಸರಿಯಾದ ಮೂಲಭೂತ ಸೌಕರ್ಯ ಕೊರತೆ ಇದೆ.ಈ ವಾರ್ಡಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು,ಈ ಬಗ್ಗೆ ಸಾಕಷ್ಟು ಭಾರಿ ಸಂಬಂಧಿಸಿದವರಿಗೆ
ನಮ್ಮ ಓಣಿಯಲ್ಲಿ ಶುದ್ದ ನೀರಿನ ಘಟಕ ನಿರ್ಮಾಣ ಮಾಡುವಂತೆ ಮನವಿ ಸಲ್ಲಿದರು ಇಲ್ಲಿವರೆಗೂ ಯಾವುದೇ ಸ್ಪಂದಿಸಿಲ್ಲ,ಇದರಿಂದ ನಮ್ಮವರಿಗೆ ತುಂಬಾ ತೊಂದರೆಯಾಗಿದೆ.ಅಲ್ಲದೇ ಇಲ್ಲಿ ಅಂಗನವಾಡಿ ಕೇಂದ್ರವನ್ನು ತೆರೆಯುವಂತೆ ಸಹ ಮನವಿ ನೀಡಿದರು ಸಹ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅಲ್ಲದೇ ನಮ್ಮ ಓಣಿಯ ಸಾರ್ವನಿಕರು ತುಂಬಾ ಕಡು ಬಡವರಿದ್ದು,ಅವರೆಲ್ಲರು ಜೋಪಾಡಿಯಲ್ಲಿ,ಮತ್ತು ಬಿದ್ದು ಹೋದಾ ಹಳೆ ಮನೆಯಲ್ಲಿ ವಾಸವಾಗಿರುತ್ತಾರೆ.ಅವರಿಗೆ ಮನೆಯಿಲ್ಲ. ಇದಕ್ಕೂ ಸ್ಪಂದಿಸಿಲ್ಲ.ಓಣಿಯಲ್ಲಿರುವ ಮೈಲಾರಲಿಂಗೇಶ್ವರ ದೇವಸ್ಥಾನ ಇದ್ದು, ಕಟ್ಟಡ ಪುರ್ಣಗೊಂಡಿಲ್ಲ.ಅಲ್ಲದೇ ಚುನಾವಣೆ ಸಂದರ್ಭದಲ್ಲಿ ನಮ್ಮ ಓಣಿಯ ಜನರು ಮತ ಚಲಾವಣೆಗೆ ಬೇರೆ ಕಡೆ ಹೋಗಿ ಮತ ಹಾಕಿ ಬರಬೇಕು. ಅದ್ದರಿಂದ ನಮ್ಮ ಓಣಿಯಲ್ಲಿಯೇ ಒಂದು ಮತದಾರರ ಭೂತ ಕೇಂದ್ರವನ್ನು ಸ್ಥಾಪಿಸಬೇಕು. ನಮ್ಮ ಸಮಾಜದ ಅಂಗವಿಲಕರಿಗೆ ಸರಿಯಾದ ಸರಕಾರಿ ಸೌಕರ್ಯವಿಲ್ಲದೆ ವಂಚಿತರಾಗಿದ್ದಾರೆ.ಮತ್ತು ಯುವಕರಿಗೆ, ಯುವತಿಗೆ ಉದ್ಯೋಗವಿಲ್ಲದೆ ನಿರುದ್ಯೋಗವಾಗಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸಿಕೊಡಬೇಕು. ಅಲ್ಲದೇ ನಮ್ಮ ಓಣಿಯಲ್ಲಿ ಸ್ವಚ್ಚತೆಯಿಲ್ಲದೆ ಇಡೀ ಪ್ರದೇಶ ಗೆಬ್ಬೆದ್ದು ನಾರುತ್ತಿದ್ದು,ಕೂಡಲೇ ಸ್ವಚ್ಚತೆ ಅಧ್ಯತೆ ನೀಡಬೇಕು.
ನಮ್ಮ ಓಣಿಯ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗಬೇಕಾದರೆ ಇಲ್ಲಿ ಸರಕಾರಿ ಶಾಲೆ ತೆರೆಯಬೇಕು.ಪಶುಭಾಗ್ಯ ಯೋಜನೆಯಲ್ಲಿ ನಮ್ಮ ಸಮಾಜದವರಿಗೆ ತುಂಬಾ ಅನ್ಯಾಯವಾಗಿದೆ.ಅದನ್ನು ಸರಿಪಡಿಸಬೇಕು.ಸುಮಾರು ವರ್ಷದಿಂದಲೂ ನಮ್ಮ ಸಮಾಜದವರಿಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೂಡಾ ಅನ್ಯಾಯವಾಗುತ್ತಾ ಬಂದಿದೆ.ಈ ಯೋಜನೆಯಲ್ಲಿ ಯಾರಿಗೆ ಸೌಲಭ್ಯ ಸಿಕ್ಕಿಲ್ಲ.ಒಟ್ಟಿನಲ್ಲಿ ನಮ್ಮ ಛಲವಾದಿ ಓಣಿಯ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು,ಈ ಎಲ್ಲಾ ಸೌಲಭ್ಯವನ್ನು ಕೂಡಲೇ ಒದಗಿಸಬೇಕು,ಇಲ್ಲದಿದ್ದರೆ ನಮ್ಮ ವಾರ್ಡಿನಲ್ಲಿ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧಾರಿಸಲಾಗಿದೆ ಎಂದರು.
ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಬಳೂಟಗಿ ಗ್ರಾಮದ 4ನೇ ವಾರ್ಡಿನ ಛಲವಾದಿ ಓಣಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚುನಾವಣೆಯ ಬಹಿಷ್ಕರಿ,ಧರಣಿ ಕುಳಿತ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದರು.ತಾಪಂ ಎಡಿಎ ಹನಮಂತಗೌಡ ಪಾಟೀಲ್‌,ಕಂದಾಯ ಅಧಿಕಾರಿ ಶ್ರೀನಿವಾಸ,ಗ್ರಾಮ ಲೆಕ್ಕಾಧಿಕಾರಿ ರಾಜಶೇಖರ ಹಿರೇಮಠ ಭೇಟಿ ನೀಡಿ,ಸಮಸ್ಯೆಗಳಿಗೆ ಭರವಸೆ ನೀಡಿದರು ಕೂಡಾ ಓಣಿಯ ಸಾರ್ವಜನಿಕರು ಈ ಎಲ್ಲಾ ಸಮಸ್ಯೆಗಳು ಆಶ್ವಾಸನೆಯಾಗಬಾರದು,ನಮಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ,ಧರಣಿಯಲ್ಲಿ ಭಾಗವಹಿಸಿದರು.
ಧರಣಿಯಲ್ಲಿ ಹುಚ್ಚಿರಪ್ಪ ಬೇವಿನಮರದ, ನಿಂಗಪ್ಪ ಹಿರೇಮನಿ, ಲಕ್ಷ್ಮಣ್ಣ ಬೇವಿನಮರದ, ಮಲ್ಲಪ್ಪ ಹಿರೇಮನಿ, ಹನಮಂತಪ್ಪ ಹಿರೇಮನಿ, ಮರಿಯಪ್ಪ ಬೇವಿನಮರದ, ಗುರುಸಿದ್ದಪ್ಪ ಬೇವಿನಮರದ, ಶರಣಪ್ಪ ನಿಡಗುಂದಿ, ಹುಲಿಗೆಮ್ಮ ಬೇವಿನಮರದ, ಈರಮ್ಮ ಬೇವಿನಮರದ, ಈರಪ್ಪ ಮುರಡಿ, ಗಂಗಪ್ಪ ಮುರಡಿ, ಗಂಗಮ್ಮ ಬೇವಿನಮರದ, ಹಲಿಗೇಮ್ಮ ಬೇವಿನಮರದ, ಭರಮಮ್ಮ ಬೇವಿನಮರದ ಸೇರಿದಂತೆ ಛಲವಾದಿ ಓಣಿಯ ಸಾರ್ವಜನಿಕರು ಭಾಗವಹಿಸಿದ್ದರು.

loading...