ಮೇ. 12 ರಂದು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿ: ಮೋದಿ

0
17
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ಸೇರಿದ್ದ ಲಕ್ಷಾಂತರ ಜನರಿಗೆ ಮೊದಿಯ ಭಾಷಣದ ಹೊಂಕಾರವಾದರೆ, ನೆರೆದ ಲಕ್ಷಾಂತರ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು, ಇದರಿಂದ ಆಡಳಿತ ಪಕ್ಷ ಕಾಂಗ್ರೆಸ್‌ ಪಕ್ಷಕ್ಕೆ ನಡುಕ ಆರಂಭವಾದಂತಾಗಿದೆ.
ನಗರದ ಹೊರವಲಯದ ರಿಲಿಯಾನ್ಸ್‌ ಪೇಟ್ರೋಲ್‌ ಬಂಕ್‌ ಬಳಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೃಹತ್‌ ಬಹಿರಂಗ ಸಭೆಯಲ್ಲಿ ಬಿಸಿಲು ನಾಡು ಕೊಪ್ಪಳದ ಜನತೆಗೆ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, 52 ನಿಮಿಷಗಳ ನಿರರ್ಗಳ ಭಾಷಣ ಮಾಡಿದರು.
ಆರಂಭದಲ್ಲಿ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಪವಾಡ, ಜೈನ ಬಸದಿಗಳ ನಾಡು, ಮತ್ತು ಈ ಭೂಮಿಯಲ್ಲಿ ಜನಿಸಿದ ಎಲ್ಲಾ ಮಹಿನಿಯರಿಗೆ ನನ್ನ ಪ್ರಣಾಮಗಳು ಎಂದು ತಿಳಿಸುತ್ತಾ ಪ್ರತಿಪಕ್ಷಗಳ ವಿರುದ್ದ ಟೀಕಾಪ್ರಹಾರ ಹಾಗೂ ಈ ಭಾಗದ ಶರಣರ ಮತ್ತು ಹನುಮನ ಜನ್ಮಸ್ಥಳ ಎಂದು ಭಾಷಣದಲ್ಲಿ ಉದ್ಗಾರ ಮಾಡುತ್ತಿದ್ದಂತೆಯೇ ನೇರೆದಿದ್ದ ಲಕ್ಷಾಂತರ ಅಭಿಮಾನಿಗಳ ಮೋದಿ ಮೋದಿ ಮೋದಿ ಎಂಬ ಜೈಕಾರ ಮುಗಿಲು ಮುಟ್ಟಿತ್ತು.
ಮೇ.12ರಂದು ತಕ್ಕ ಪಾಠ ಕಲಿಸಿ : ಜಿಲ್ಲೆಗೆ ಕೃಷ್ಣಾಸ ಬಿ ಸ್ಕಿಂ ನೀಡುವುದಾಗಿ ಕಳೆದ ಚುನಾವಣೆ ವೇಳೆ ಸಿದ್ದರಾಮಯ್ಯ ಭರವಸೆ ನೀಡಿದ್ದರು.
ಅದನ್ನು ಈಡೇರಿಸಿದ್ದಾರಾ’ ಎಂದು ಪ್ರಶ್ನಿಸಿದ ಮೋದಿ, ‘ಕೊಟ್ಟ ಮಾತಿನಂತೆ ಸಿ.ಎಂ ನಡೆದುಕೊಂಡಿದ್ದಾರೋ ಇಲ್ಲವೋ ಜೋರಾಗಿ ಹೇಳಿ’ ಎಂದು ಕೇಳಿದರು. ಆಗ ಇಲ್ಲ ಎಂಬ ಉತ್ತರ ಒಕ್ಕೊರಲಿನಿಂದ ಕೇಳಿಬಂದಿತು. ಹಾಗಿದ್ದರೆ ಸುಳ್ಳು ಹೇಳುವ ವ್ಯಕ್ತಿಗೆ ಸುಮ್ಮನೇ ಯಾಕೆ ಇರುತ್ತಿರು ಮೇ.12ರಂದು ತಕ್ಕ ಪಾಠ ಕಲಿಸಿ ಎಂದರು. ಸುಡು ಬಿಸಿಲು ಲೆಕ್ಕಿಸದೇ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಬೆಂಬಲಿಗರು ಹಾಕಿದ ಪೆಂಡಾಲು ಅಲ್ಲದೇ ರಸ್ತೆ ಇಕ್ಕಲುಗಳಲ್ಲಿ ನಿಂತು ಭಾಷಣ ಆಲಿಸಿದರು. ಆದರೆ ನೀರಿಕ್ಷೆ ಮೀರಿ ಜನಸಂಖ್ಯೆ ಆಗಮಿಸಿದ್ದರು ಮೋದಿ, ಅಮಿತ್‌ ಶಾ, ಯಡಿಯೂರಪ್ಪ ಅವರ ಕಟೌಟ್‌ ಹಿಡಿದು, ಕೇಸರಿ ಟೋಪಿ, ಧ್ವಜ ಹಿಡಿದವರ ಜತೆ ಮೋದಿ ಮುಖವಾಡಗಳು ಕಾಣಿಸಿಕೊಂಡವು.
ಕಾಂಗ್ರೆಸ್‌ ಮುಖವಾಡ ಕಳಚಿ : ಈಬಾರಿ ರಾಜ್ಯದ ಭವಿಷ್ಯವನ್ನು ಬರೆಯುವ ಯುವಕರು ಮಹಿಳೆಯರು ನಿರ್ಧರಿಸಬೇಕು. ಮನೆ-ಮನೆಗೆ ಬೇಟಿ ನೀಡಿ ಕಾಂಗ್ರೆಸ್‌ ಮುಖವಾಡ ಕಳಚಬೇಕು. ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗಬೇಕು ಎಂದು ಮೋದಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಚುನಾವಣೆ ಗೆಲ್ಲಬೇಕು ಮತ್ತು ಗೆದ್ದೇಗೆಲ್ಲುತ್ತೇವೆ. ಆದರೆ, ಇದಕ್ಕಿಂತ ಮುಖ್ಯವಾಗಿ ನಾವು ಮತಗಟ್ಟೆಗಳನ್ನು ಗೆಲ್ಲಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಕೇಂದ್ರದ ಜನ್‌ಧನ್‌, ಬೇಟಿ ಬಚಾವೋ ಬೇಟಿ ಫಡಾವೋ, ಉಜ್ವಲ್‌ ಯೋಜನೆ, ರೈತರಿಗೆ ನೀಡಿದ ಫಸಲ್‌ ಬೀಮಾ ಯೋಜನೆ, ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಭಾಗ್ಯಲಕ್ಷ್ಮೀ, ಬಾಲ ಸಂಜಿವಿನಿ, ಹತ್ತಾರು ಯೋಜನೆಗಳನ್ನು ಮನೆ-ಮನೆಗೆ ತೋರಿಸಿ ಎಂದು ಹೇಳಿದರು.
ಮಲ್ಲಮ್ಮನ ಕೊಂಡಾಡಿದ ಪ್ರಧಾನಿ : ಶೌಚಾಲಯಕ್ಕಾಗಿ ಹೊರಾಟ ನಡೆಸಿದ ವಿದ್ಯಾರ್ಥಿ ಕೊಪ್ಪಳದ ಮಲ್ಲಮ್ಮನ್ನು ಭಾಷಣದುದ್ದಕ್ಕೂ ಕೋಂಡಾಡಿದರು. ಚಿಕ್ಕ ವಯಸ್ಸಿನಲ್ಲಿಯೇ ಶೌಚಾಲಯ ಕ್ರಾಂತಿಗೆ ಮುಂದಾದ ಇಂತಹ ವಿದ್ಯಾರ್ಥಿಯ ಸಾಧನೆಯನ್ನು ದೇಶ ಮೆಚ್ಚಿಕೊಂಡಿದೆ. ನಾವು ಸ್ವಚ್ಚ ಭಾರತ ಅಭಿಯಾನ ಶುರುಮಾಡಿದಾಗ ಕೆಲವರು ಇದನ್ನು ಅಪಹಾಸ್ಯ ಮಾಡಿದರು, ಆದರೆ ಇಂದು ಶೇ 80 ರಷ್ಟು ಸಾಧನೆಯಾಗಿದೆ ಎಂದರು.

loading...