ಮೇ 27 ರಂದು ಪ್ರತಿಭಾ ಪುರಸ್ಕಾರ

0
30
loading...

ಗದಗ : ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಮೇ 27 ರಂದು ಎಸ್ಎಸ್‍ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಎರ್ಪಡಿಸಿದೆ.
ಎಸ್.ಎಸ್.ಎಲ್.ಸಿಯಲ್ಲಿ ಶೇ. 75ಕ್ಕಿಂತ ಹೆಚ್ಚು ಹಾಗೂ ಪಿಯುಸಿ ದ್ವಿತೀಯ ವರ್ಷದಲ್ಲಿ ಶೇ. 65 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪಿಯುಸಿ ದ್ವಿತೀಯ ವರ್ಷದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸೇರಿದಂತೆ ಮೊದಲ ಮೂರು ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಅರ್ಹ ವಿದ್ಯಾರ್ಥಿಗಳು ಮೇ. 19 ರೊಳಗಾಗಿ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ವಿಜಯ ನಗರ ಬಡಾವಣೆ, ಎಚ್.ವ್ಹಿ. ಕುರಡಗಿ ಪ್ರೌಢ ಶಾಲೆ ಹತ್ತಿರ, ಗಂಗಿಮಡಿ ಕ್ರಾಸ್, ಗದಗ ಈ ವಿಳಾಸಕ್ಕೆ ಅಥವಾ ಎಸ್.ಎಸ್.ಎಲ್.ಸಿ. ವಿಭಾಗದ ವಿದ್ಯಾರ್ಥಿಗಳು ಸಿ.ಎಂ.ಪತ್ತಾರ (9449487796), ಡಿ.ಎಸ್. ಬಡಿಗೇರ (9481523535) ಚಿದನಾಂದ ಎಸ್. ಬಡಿಗೇರ (9886137136), ರವಿ ಟಿ. ಅರ್ಕಸಾಲಿ (9980662971) ಡಾ. ಗಿರೀಶ ಬಡಿಗೇರ (9343200061) ಹಾಗೂ ಪಿ.ಯು.ಸಿ. ವಿಭಾಗದ ವಿದ್ಯಾರ್ಥಿಗಳು ಕೆ.ಎಸ್. ಬಡಿಗೇರ (9482176166) ಶ್ರೀನಿವಾಸ ಬಡಿಗೇರ (7760626401) ವಿಜಯಕುಮಾರ ರಾಜನಾಳ (9341804366) ಕಿರಣ ಕಮ್ಮಾರ (8147320467) ರುದ್ರೇಶ ಬಡಿಗೇರ (9916765934) ಇವರಿಗೆ ಖುದ್ದಾಗಿ ಸಂರ್ಪಕಿಸಿ ದೃಢಿಕರಣ ಅಂಕ ಪಟ್ಟಿ ಎರಡು ಪೋಟೊ ಹಾಗೂ ಸ್ಥಳೀಯ ವಿಳಾಸ, ಮೊಬೈಲ್ ನಂಬರ ಸಲ್ಲಿಸಲು ಸಂಘದ ಅಧ್ಯಕ್ಷ ಆರ್.ಡಿ. ಕಡ್ಲಿಕೊಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕಮ್ಮಾರ ತಿಳಿಸಿದ್ದಾರೆ.

loading...