ಮೋದಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ರಾಯರೆಡ್ಡಿ

0
11
loading...

ಯಲಬುರ್ಗಾ: ದೇಶದಲ್ಲಿ ಭ್ರಷ್ಟರಿಗೆ ರಕ್ಷಣೆ ನೀಡುವ ಬಿಜೆಪಿ ಸರ್ಕಾರವಾಗಿದ್ದು,ಪ್ರಧಾನಿ ನರೇಂದ್ರ ಮೋದಿ ಅವರದು ಸುಳ್ಳಿನ ಸರ್ಕಾರವಾಗಿದೆ ಎಂದು ಸಚಿವ ಹಾಗೂ ಕಾಂಗ್ರೇಸ್‌ ಪಕ್ಷದ ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಆರೋಪಿಸಿದರು.
ಬುಧವಾರ ಯಲಬುರ್ಗಾ ಪಟ್ಟಣದಲ್ಲಿ ಕಾಂಗ್ರೇಸ್‌ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಕೇಂದ್ರ ಸರಕಾರದ ಖಂಡಿಸಿ,ಸೈಕಲ್‌ ಜಾಥ ಸಭೆಯಲ್ಲಿ ಮಾತನಾಡುತ್ತಿದ್ದ ಅವರು,ದೇಶದಲ್ಲಿ ಆಡಳಿತಕ್ಕೆ ಬಂದು ನಾಲ್ಕು ವರ್ಷವಾದರೂ ಯಾವುದೇ ಜನಪರ ಯೋಜನೆಗಳು ಜಾರಿಗೊಳಿಸದೆ ರೈತರಿಗೆ,ಕೂಲಿ ಕಾರ್ಮಿಕರಿಗೆ,ಯುವ ಜನತೆಗೆ ಸುಳ್ಳು ಭರವಸೆಗಳನ್ನು ನೀಡುತ್ತಾ ಸಾಗುತ್ತಿದ್ದಾರೆ.ಇಂಥ ಸರಕಾರವನ್ನು ನಮ್ಮ ರಾಜ್ಯದಿಂದ ಧಿಕ್ಕರಿಸೋಣ.ಭಾರತೀಯರಿಗೆ ಮಾತಿನ ಮೋಡಿ ಮಾಡಿ ನುಡಿದಂತೆ ನಡೆಯದೆ ಭ್ರಷ್ಟರ ಮೇಲೆ ಅಭಯಿಟ್ಟು,ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಹೋಗಿ ಬಂದವರನ್ನು ತಮ್ಮ ಮಗ್ಗುಲಲ್ಲಿ ಕುರಿಸಿಕೊಂಡು ಭ್ರಷ್ಠಚಾರದ ಬಗ್ಗೆ ಮಾತನಾಡುವ ನೈತಿಕತೆ ಪ್ರಧಾನಿ ನರೇಂದ್ರ ಮೋದಿಗೆ ಎಲ್ಲಿದೆ ಎಂದಾ ಅವರು,ಉದ್ಯಮಿಗಳ ಸಾವಿರಾರು ಕೋಟಿ ರೂ.ಸಾಲ ಮನ್ನಾ ಮಾಡಿದ ಮೋದಿವರಗೆ ರೈತರ ಸಾಲ ಮನ್ನಾ ಮಾಡದೆ ಮೊಸಳೆ ಕಣ್ಣಿರು ಸುರಿಸುತ್ತಿದ್ದಾರೆ ಎಂದರು.
ಕೊಪ್ಪಳ ಮಾಜಿ ಸಂಸದ ಕೆ.ಶಿವರಾಮೇಗೌಡ, ಹಿರಿಯ ಮುಖಂಡ ಶ್ರೀಪಾದಪ್ಪ ಅಧಿಕಾರಿ ಮಾತನಾಡಿದರು. ಇದಕ್ಕೂ ಮೊದಲು ಇಲ್ಲಿಯ ಮೊಗ್ಗಿ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಸೈಕಲ್‌ ರ್ಯಾಲಿ,ಕನ್ನಡ ಕ್ರೀಯಾ ಸಮಿತಿ ವೃತ್ತ, ಕನಕದಾಸ ವೃತ್ತ ಸೇರಿದಂತೆ ಮತ್ತತರರ ಕಡೆಗಳಲ್ಲಿ ಸಂಚರಿಸಿ,ನಂತರ ವೀರರಾಣಿ ಕಿತ್ತೂರ ಚೆನ್ನಮ್ಮ ವೃತ್ತ ಬಳಿ ಬಹಿರಂಗ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಬ್ಲಾಕ ಕಾಂಗ್ರೇಸ ಅಧ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಪಾಟೀಲ್‌, ಮುಖಂಡರಾದ ಯಂಕಣ್ಣ ಯರಾಶಿ, ಡಾ.ಶರಣಪ್ಪ ಕೊಪ್ಪಳ, ಬಿ.ಎಂ.ಶಿರೂರು, ರಾಮಣ್ಣ ಸಾಲಭಾವಿ,ಸಂಗಣ್ಣ ಟೆಂಗಿನಕಾಯಿ,ಮೌಲಾಹುಸೇನ್‌ ಬುಲ್ಡಿಯಾರ,ಶರಣಪ್ಪ ಗಾಂಜಿ,ಆನಂದ ಉಳ್ಳಾಗಡ್ಡಿ, ರಹಿಮಾನಸಾಬ ನಾಯಕ, ಜಯಶ್ರೀ ಕಂದಕೂರು, ಜಯಶ್ರೀ ಅರಕೇರಿ, ಭಾಗಿರಥಿ ಜೋಗಿನ, ಶರಣಮ್ಮ ಪೂಜಾರ, ಸಿದ್ದಪ್ಪ ಕಟ್ಟಿಮನಿ,ಮಲ್ಲು ಜಕ್ಕಲಿ,ಗೌಸುಸಾಬ ಕನಕಗಿರಿ,ಮೈಬೂಬಸಾಬ ಕನಕಗಿರಿ ಸೇರಿದಂತೆ ಕಾಂಗ್ರೇಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

loading...