ಮೋದಿ, ಅಮಿತ್ ಶಾ ರಿಂದ ಸೇಡಿನ ರಾಜಕಾರಣ, ಸಿಬಿಐನಿಂದ ಸರ್ಚ್ ವಾರೆಂಟ್ ಸಾಧ್ಯತೆ – ಡಿಕೆ ಬ್ರದರ್ಸ್

0
16
loading...

ಬೆಂಗಳೂರು- ಪ್ರಧಾನಿ ಮೋದಿ ಹಾಗು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಮ್ಮ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದ್ದು, ನಮ್ಮ 11 ಮಂದಿಯ ವಿರುದ್ಧ ಯಾವುದೇ ಕ್ಷಣದಲ್ಲಿ ಸಿಬಿಐನಿಂದ ಸರ್ಚ್‌ ವಾರಂಟ್‌ ಹೊರಡಿಸಬಹುದು ಎಂದು ಕಾಂಗ್ರೆಸ್‌ ನಾಯಕರಾದ ಡಿ.ಕೆ .ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ತುರ್ತು ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ. ಸದಾಶಿವ ನಗರದ ನಿವಾಸದಲ್ಲಿ ಇಂದು ಬೆಳಗ್ಗೆ ನಡೆಸಿದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಸಹೋದರರು, ಮೋದಿ, ಶಾ ಸೇಡಿನ ರಾಜಕಾರಣ ನಡೆಸುತ್ತಿದ್ದಾರೆ. ನಂಜಿನ ರಾಜಕಾರಣ ಮಾಡುತ್ತಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ನಮ್ಮ 11 ಜನರ ಮೇಲೆ ಸಿಬಿಐ,ಇಡಿ ಮತ್ತು ಐಟಿ ಮೂಲಕ ಪ್ರಕರಣ ದಾಖಲಿಸಿ ಸರ್ಚ್‌ ವಾರೆಂಟ್‌ ಜಾರಿ ಮಾಡಲು ಸಿದ್ದತೆ ನಡೆಸಿದ್ದಾರೆ ಎಂದರು. ನಮಗೆ ಮೂರ್‍ನಾಲ್ಕು ತಿಂಗಳುಗಳಿಂದ ಅನೇಕ ಮಾಹಿತಿಗಳು ಬಂದಿವೆ. ಎಲ್ಲೆಲ್ಲಿ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ನಮಗೆ ಗೌಪ್ಯತೆ ತಿಳಿಸಿದ್ದಾರೆ. ಅವರ ಹೆಸರು ಹೊರಗೆ ಹಾಕಲು ಇಷ್ಟಪಡುವುದಿಲ್ಲ ಅವರು ನಮಗೆ ಕೆಲ ಮಾಹಿತಿಗಳನ್ನು ಕೊಟ್ಟಿದ್ದಾರೆ ಎಂದರು. ನಮ್ಮ ಕುಟುಂಬವನ್ನು ಬೆದರಿಸಿ ಬಗ್ಗಿಸಬಹುದು ಎಂದುಕೊಂಡರೆ ನಾವು ಜಗ್ಗುವವರಲ್ಲ. ನಾವು ಎಲ್ಲದಕ್ಕೂ ಸಿದ್ದರಿದ್ದೇವೆ. ನಾವು ಎಂದು ತಪ್ಪು ಮಾಡಿದವರಲ್ಲ, ಕಾನೂನು ಮೀರಿ ರಾಜಕಾರಣ ಮಾಡಿದವರಲ್ಲ, ಅಕ್ರಮಗಳನ್ನು ಮಾಡಿಲ್ಲ. ಸುಳ್ಳು ಪ್ರಕರಣ ದಾಖಲಿಸಿ ನಮ್ಮ ಧ್ವನಿ ಅಡಗಿಸಬಹುದು ಎಂದು ತಿಳಿದಿದ್ದರೆ ಅದು ಅದು ನಿಮ್ಮ ಭ್ರಮೆ ಎಂದು ಡಿಕೆ ಸಹೋದರರು ಹೇಳಿದ್ದಾರೆ.

loading...