ಯಲಬುರ್ಗಾ: ರಿಲ್ಯಾಕ್ಸ್ ಮೂಡ್‍ನಲ್ಲಿ ಅಭ್ಯರ್ಥಿಗಳು

0
24
loading...

ಯಲಬುರ್ಗಾ: ಕಳೇದ ಒಂದು ತಿಂಗಳಿಂದಲೂ ನಿರಂತರವಾಗಿ ವಿಧಾನಸಭಾ ಚುನಾವಣೆಯ ತವಕದಲ್ಲಿದ್ದ ಕಾಂಗ್ರೇಸ್,ಬಿಜೆಪಿ,ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ಬಿಡುವಿಲ್ಲದೆ ತಮ್ಮ ತಮ್ಮ ಪಕ್ಷದ ಪರವಾಗಿ ಭರ್ಜರಿ ಪ್ರಚಾರ,ಸಭೆ, ಕಾರ್ಯಕರ್ತರ ಸಭೆ ಸೇರಿದಂತೆ ವಿವಿಧ ಕಾರ್ಯಕ್ರಮದ ಭರಟೆಯಲ್ಲಿದ್ದ ಈ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ನಿನ್ನೆ ನಡೆದ ಮತದಾನದ ಬಳಿಕ ಇವತ್ತು ರವಿವಾರ ಎಂದಿನಂತೆ ತಮ್ಮ ವೈಯಕ್ತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ರಿಲ್ಯಾಕ್ಸ್ ಮೂಡ್ ನಲ್ಲಿದ್ದು ಕಂಡು ಬಂತು.

ಚುನಾವಣೆಯ ಪ್ರಚಾರದಲ್ಲಿ ತೊಡಗಿ ಬಿಜಿಯಾಗಿದ್ದ ಈ ಮೂರು ಪಕ್ಷದ ನಾಯಕರು ತಮ್ಮ ದಿನಚರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಂತೋಷವನ್ನು ಹಂಚಿಕೊಳ್ಳುವ ಮೂಲಕ ರಿಲ್ಯಾಕ್ಸನಲ್ಲಿದ್ದಾರೆ.ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಬಸವರಾಜ ರಾಯರೆಡ್ಡಿ,ಬಿಜೆಪಿ ಪಕ್ಷದ ಅಭ್ಯರ್ಥಿ ಹಾಲಪ್ಪ ಆಚಾರ,ಜೆಡಿಎಸ್ ಪಕ್ಷದ ಅಭ್ಯರ್ಥಿ ವೀರನಗೌಡ ಪೋಲೀಸ್ ಪಾಟೀಲ್ ಇವರು ತಮ್ಮ ಮಾಮೂಲಿನಂತೆ ಬೆಳಿಗ್ಗೆ ವಾಯು ವಿಹಾರ,ಸ್ನೇಹಿತರ ಜತೆ ಸುತ್ತಾಟ,ಕಾರ್ಯಕರ್ತರೊಂದಿಗೆ ಸಮಾಲೋಚನೆ,ತಮ್ಮ ಹೊಲ ಗದ್ದೆಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ದೃಶ್ಯವಂತೂ ಕಂಡು ಬಂದವು.
ನಿನ್ನೆ ಯಲಬುರ್ಗಾ ಪಟ್ಟಣದಲ್ಲಿ ಮತದಾನ ಮಾಡಲೆಂದು ಮತಕೇಂದ್ರಕ್ಕೆ ಆಗಮಿಸಿದ್ದ ವಯೋವೃದ್ದೆ ಮಹಿಳೆ ರುದ್ರಮ್ಮ ಹಡಪದ ಮತಕೇಂದ್ರದಲ್ಲಿ ಕುಸಿದು ಬಿದ್ದು ಮೃತ ಪಟ್ಟ ಹಿನ್ನಲೆಯಲ್ಲಿ ಅವರ ಮನೆಗೆ ರವಿವಾರ ತೆರಳಿದ ಬಿಜೆಪಿ ಪಕ್ಷದ ಅಭ್ಯರ್ಥಿ ಹಾಲಪ್ಪ ಆಚಾರ ಮೃತ ಕುಟುಂಬಕ್ಕೆ ಧೈರ್ಯ ತುಂಬಿ ಬಂದರು.ನಂತರ ತಮ್ಮ ಸ್ವಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರ,ಮುಖಂಡರೊಂದಿಗೆ ಸಭೆ ಭಾಗವಹಿಸಿ,ತಮ್ಮ ಸಂತೋಷವನ್ನು ಹಂಚಿಕೊಂಡರು.

loading...