ರಕ್ತ ಬಂಧುತ್ವಕ್ಕಿಂತ ಗುರು ಬಂಧುತ್ವ ಶ್ರೇಷ್ಠ

0
18
loading...

ರಬಕವಿ-ಬನಹಟ್ಟಿ: ಭಾರತೀಯ ಗುರು ಶಿಷ್ಯ ಪರಂಪರೆ ವಿಶ್ವದಲ್ಲಿಯೇ ಶ್ರೇಷ್ಠವಾದುದು. ರಕ್ತ ಬಂಧುತ್ವಕ್ಕಿಂತ ಗುರು ಬಂಧುತ್ವ ಶ್ರೇಷ್ಠವಾದುದು. ಜೀವನದಲ್ಲಿ ಗುರು ನಿಜವಾದ ಬಂಧು ಅವರನ್ನು ಸ್ಮರಿಸುವ ಮತ್ತು ಗೌರವಿಸುವ ಕಾರ್ಯ ಶ್ರೇಷ್ಠವಾದುದು ಎಂದು ರಬಕವಿ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ನುಡಿದರು.
ಅವರು ಭಾನುವಾರ ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಮಹಾವಿದ್ಯಾಲಯದ 1998-2001ನೇ ಸಾಲಿನ ಬಿ.ಕಾಂ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನಾ ಮತ್ತು ಸ್ನೇಹ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಗುರುಗಳನ್ನು ಸನ್ಮಾನಿಸುವುದರ ಜೊತೆಗೆ ಅವರ ಶುಭ ಹಾರೈಕೆಗಳನ್ನು ಪಡೆದುಕೊಳ್ಳಬೇಕು. ಜೀವನದಲ್ಲಿ ಕೇವಲ ವ್ಯವಹಾರ ಮುಖ್ಯವಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪರಸ್ಪರ ಪ್ರೀತಿ, ವಿಶ್ವಾಸ, ಸ್ನೇಹ, ಸಹಕಾರ ಮತ್ತು ಸೌಹಾರ್ದತೆ ಮುಖ್ಯವಾದುದು. ಅದೇ ರೀತಿಯಾಗಿ ಜೀವನದಲ್ಲಿ ಕೇವಲ ಹಣ ಅಕಾರ ಮುಖ್ಯವಲ್ಲ, ಪ್ರೀತಿ ವಿಶ್ವಾಸವೂ ಕೂಡಾ ಮುಖ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ವ್ಯಕ್ತತ್ವನ್ನು ರೂಪಿಸಿಕೊಳ್ಳುವುದರ ಜೊತೆಗೆ ಸಮಾಜ ಸೇವೆಗೂ ಮುಂದಾಗಬೇಕು. ಜೀವನದಲ್ಲಿ ಉತ್ತಮ ಸ್ನೇಹಿತರನ್ನು ಸಂಪಾದಿಸಿಕೊಳ್ಳುವುದು ಕೂಡಾ ಮಹತ್ವದ್ದಾಗಿದೆ ಎಂದು ಗುರುಸಿದ್ಧೇಶ್ವರ ಸ್ವಾಮೀಜಿ ನುಡಿದರು.
ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ.ಎಸ್.ಬಿ.ಮಟೋಳ್ಳಿ ಮಾತನಾಡಿ, ಇಂದಿನ ಆಧುನಿಕ ದಿನಗಳಲ್ಲಿಯೂ ಕೂಡಾ ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುಗಳನ್ನು ಒಂದೆಡೆಗೆ ಸೇರಿಸಿ ಅವರನ್ನು ಸನ್ಮಾನಿಸುವುದು ಶ್ರೇಷ್ಠವಾದ ಕಾರ್ಯ ಎಂದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್, ಪ್ರೊ.ಮಂಜುನಾಥ ಬೆನ್ನೂರ ಮತ್ತು ವಿದ್ಯಾರ್ಥಿಗಳು ಮಾತನಾಡಿದರು. ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ.ಎಸ್.ಎಸ್.ಹೂಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ಪ್ರೊ.ವೈ.ಡಿ ಬಾಗಿ, ಚಿದಾನಂದ ಅಬಕಾರ, ಎಸ್. ಎಂ. ಜುಂಜಪ್ಪನವರ, ಶಂಕರ ನಾವಿ, ಬಸವರಾಜ ತಳವಾರ, ಎಂ. ಕೆ. ಭೂತಿ, ರಮೇಶ ಹೂಗಾರ, ಈಶ್ವರ ತೆಲಸಂಗ, ಮಲ್ಲಿಕಾರ್ಜುನ ಉಮದಿ ಸೇರಿದಂತೆ ಅನೇಕರು ಇದ್ದರು.

ಕಾರ್ಯಕ್ರಮದಲ್ಲಿ ಗಿರೀಶ ಕಾಬರಾ, ಮಹಾದೇವ ಕುಚನೂರ, ಪ್ರಶಾಂತ ಕೊಳಕಿ, ನಿಲೇಶ ದೇಸಾಯಿ, ಈರಣ್ಣ ಬಿಳ್ಳೂರ, ಬಸು ತೆಲಸಂಗ, ಗಾಯತ್ರಿ ಕರಲಟ್ಟಿ ಸೇರಿದಂತೆ ಅನೇಕರು ಇದ್ದರು. ರಾಮಚಂದ್ರ ಚೌವಾಣ ಸ್ವಾಗತಿಸಿದರು. ಮಲ್ಲಿಕಾರ್ಜುನ ಸಜ್ಜನವರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿವಾನಂದ ಗಾಯಕವಾಡ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ವಿವೇಕಾನಂದ ನಿಂಬರಗಿ ಕಾರ್ಯಕ್ರಮ ನಿರೂಪಿಸಿದರು. ಈರಣ್ಣ ಬಿಳ್ಳೂರ ವಂದಿಸಿದರು.

loading...