ರಜೆಯ ಮಜಾ ಬಿಡಿ; ಮಕ್ಕಳೇ ಶಾಲೆಗೆ ಬನ್ನಿ

0
40
loading...

ಮುತ್ತು.ಕಮ್ಮಾರ

ರಾಮದುರ್ಗ: “ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಅವರನ್ನೆ ಆಸ್ತಿಯನ್ನಾಗಿ ಮಾಡಿ ಎಂಬ ಕವಿವಾಣಿಯಂತೆ”ಮುದ್ದು ಮಕ್ಕಳೆ ರಜಾದಿನಗಳಲ್ಲಿ ಆಟ ಪಾಠ ಮೊಜು ಮಸ್ತಿ ಅಜ್ಜ ಅಮ್ಮಂದಿರೊಂದಿಗೆ ಆಟ ಆಟ ಆಡ್ತಾ ರಜಾ ದಿನಗಳು ಹೇಗೆ ಕಳೆದವು ಎಂಬುದೆ ಗೊತ್ತಾಗಲಿಲ್ಲ ಅಷ್ಟೊತ್ತಿಗೆ ಮತ್ತೆ ಶಾಲೆ ಪ್ರಾರಂಭವಾಯಿತು. ರಜಾ ದಿನಗಳಲ್ಲಿ ಮಾಡಿದ ತುಂಟಾಟವನ್ನು ಬಿಟ್ಟು ನಿಮ್ಮ ಶೈಕ್ಷಣಿಕ ವರ್ಷವನ್ನು ಪ್ರಾರಂಭ ಮಾಡಿಕೊಳ್ಳಿ, ನಿಮ್ಮ ನಿಮ್ಮ ನೆಚ್ಚಿನ ಶಿಕ್ಷಕರನ್ನು ನೊಡುತ್ತಾ ಆನಂದದಿಂದ ಹೋಗಿ ಶಾಲೆಯ ಇಂದು ಅಲಕಾಂರದಿಂದ ಕೋಡಿರುತ್ತದೆ ಶಾಲೆ ಆರಂಭವಾಗಿದೆ ನಗುನುತಾ ಬನ್ನಿ…!
ಸರ್ಕಾರಿ ಶಾಲೆಗಳಲ್ಲಿ ಬಹುತೇಕ ಶಿಕ್ಷಕರು ಅವರೆ ಇರುತ್ತಾರೆ. ಆದರೆ ಖಾಸಗಿ ಶಾಲೆಗಳಲ್ಲಿ ಬಹುತೇಕ ಶಿಕ್ಷಕರು ಶಾಲೆ ಬಿಟ್ಟು ಹೋಗಿರುತ್ತಾರೆ. ನಮ್ಮ ನೆಚ್ಚಿನ ಶಿಕ್ಷಕರು,ಮೆಡಮಗಳು ಇಲ್ಲ ಎಂದು ಕೊರಗುತ್ತಾ ಇರಬೇಡಿ. ಆದರೆ ಅವರಿಗೆ ಒಳ್ಳೆಯ ವಿದ್ಯಾರ್ಥಿಗಳನ್ನು ಬಿಟ್ಟು ಬಂದ್ವಿ ಎಂಬ ಸಧಾ ನೆನಪುಗಳು ಕಣ್ಣಮುಂದೆ ಬರುತ್ತವೆ. ಮಕ್ಕಳೆ ಕಳೆದು ಹೊಗಿರುವುದನ್ನು ಮರೆತು ಮುಂದೆ ಸಾಧನೆ ಮಾಡಬೇಕು ಎಂದ ಗುರಿ ಧ್ಯೆಯದೊಂದಿಗೆ ನಿಮ್ಮ ಶೆಕ್ಷಣಿಕ ವರ್ಷವನ್ನು ಶುರು ಮಾಡಿಕೊಳ್ಳಬೇಕು.

ಶಾಲೆಯ ಅಂದ ಮರುಳಾಗಿ ಶಾಲೆಗೆ ಸೇರಿಸಬೇಡಿ ಪಾಲಕರೆ.
ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಾಲಾ ಸೋಲಾ ಮಾಡಿ ಪ್ರತಿಷ್ಠಿತ ಕೆಳಿದಷ್ಟು ಫೀ ನೀಡಿ ಶಾಲೆಗೆ ಸೇರಿಸುತ್ತಾರೆ, ಆದರೆ ಪಾಲಕರು ಮಾತುಗಳಿಗೆ ಮರುಳಾಗಿ ಶಾಲೆಗೆ ಸೇರಿಸಬಾರದು, ಶಿಕ್ಷಣ ಕ್ಷೇತ್ರವು ಇಂದು ವ್ಯಾಪಾರಿಕರಣದ ಒಂದು ದಂದೆಯಾಗಿದೆ ಎಂದರೆ ತಪ್ಪಿಲ್ಲ, ಶಾಲೆಯಲ್ಲಿ ಯಾವ ರೀತಿಯಾಗಿ ಭೋಧನೆ ಮಾಡುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಾಗಿದರೆ ಮಾತ್ರಾ ಮಕ್ಕಳ ಭವಿಸ್ಯ ಸುಂದರವಾಗುತ್ತದೆ.

ಶಾಲೆಯಲ್ಲಿ ಸುಸಂಸ್ಕ್ರತ ಭೋಧನೆಯ ಪಾಠ:
ಇಂದು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಪಾಶ್ಚಿಮಾತ್ಯ ಶಿಕ್ಷಣದಿಂದ ಭಾರತೀಯ ಸಂಸ್ಕøತಿಯ ಮೇಲೆ ತುಂಬಾ ಪರಿಣಾಮ ಭಿರುತ್ತಿದೆ. ಶಾಲಾ ಸಂಸ್ಕøತಿಯು ಶಾಲೆಯಲ್ಲಿ ಕಾರ್ಯ ನಿರ್ವಸುವವರ ವರ್ತನೆ, ಆಲೋಚನೆ,ಭಾವನೆಗಳು ನಿರಿಕ್ಷೀತ ರೀತಿಯಲ್ಲಿ ನಡೆದಾಗ ವ್ಯಕ್ತಿಯು ಅವಶ್ಯಕವಾದ ಸಂಸ್ಕøತಿವಂತರಾಗಿ ಬೆಳೆಯುತ್ತಾರೆ. ಸೃಜನ ಶೀಲ ಚಿಂತನೆ,

ಮಕ್ಕಳೊಂದಿಗೆ ಅತಿಯಾದ ಪ್ರತಿ, ಭೇಧ ಭಾವ ಮಾಡಬಾರದು. ಪಾಲಕರು ಕೇಳಿದಾಗ ದುಡ್ಡು ನೀಡಿ ಅವರಿಗೆ ಪ್ಯಾಷನ್ ಯುಗಕ್ಕೆ ಮರುಳಾಗಿ ತಮ್ಮ ಶಿಕ್ಷಣದಿಂದ ಮಕ್ಕಳು ವಂಚಿತರಾಗುತ್ತಾರೆ. ಶಿಕ್ಷಕರು ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ವದಗಿಸಬೇಕು ಅಂದಾಗ ಮಾತ್ರ ಶಿಕ್ಷಣದಲ್ಲಿ ಸುಧಾರಣೆ ಮಾಡಿದಂತಾಗುತ್ತದೆ.
ಮಕ್ಕಳಗೆ ಸಾಮಾಜೀಕ ಜಾಲತಾಣ ಬಳಕೆ ಬೇಡ:

ಸರ್ಕಾರ 13 ವರ್ಷದ ಮಕ್ಕಳಿಗೆ ಸಾಮಾಜೀಕ ತಾಣವನ್ನು ಬಳಕೆ ಮಾಡಬಾರದು ಎಂದು ನಿಷೇದ ಮಾಡಿದೆ,ಅದರೆ ಇದು ಎಷ್ಟರ ಮಟ್ಟಿಗೆ ಸಕಾರಗೊಳ್ಳುತ್ತದೆ ಎಂಬುದು ಗೊತ್ತಿಲ್ಲ. ಪ್ರತಿಯೊಬ್ಬ ಪಾಲಕರು ಮನೆಯಲ್ಲಿ ಎಲ್ಲರ ಕೈಯಲ್ಲಿ ಸ್ಮಾರ್ಟ ಪೋನ್ ಹಿಡಿದುಕೊಂಡು ಕುಳಿತುಕೊಂಡಿರುವದರಿಂದ ಮಕ್ಕಳ ಮೇಲೆ ದುಶ್ಚಪರಿಣಾಮ ಬೀರುತ್ತದೆ ಆದ್ದರಿಂದ ಮನೆಯಲ್ಲ ಪಾಲಕರು ಟಿ.ವ್ಹಿ.ಸೇರಿದಂತೆ ಅನೇಕ ಸಮಾಜಿಕ ಜಾಲ ತಾಣಗಳನ್ನು ಉಪಯೋಗಿಸಬಾರದು.
ಪಾಲಕರೆ ಗಮನಿಸಿ ?

ಮಕ್ಕಳ ಮೇಲೆ ಒತ್ತಡ ನಿತ್ಯ ಶಾಲೆ,ಟೂಶನ್‍ದಿಂದ ಮಕ್ಕಳ ಮಾನಸಿಕ ನೆಮ್ಮದಿ ಇಲ್ಲದಂತಾಗುತ್ತದೆ.
ಶಾಲೆಯಲ್ಲಿ ಮಕ್ಕಳು ಕಲಿತ ಶಿಕ್ಷಣಕಿಂತ ಹೆಚ್ಚಿನ ಸಮಯ ತಮ್ಮ ಮಕ್ಕಳ ಹೆಚ್ಚಿನ ಸಮಯ ತಮ್ಮೊಂದಿಗೆ ಇರುತ್ತಾರೆ, ಮಕ್ಕಳು ಏನು ಮಾಡುತ್ತಾರೆ ಎಂದು ಪ್ರತಿ ನಿತ್ಯ ಗಮನಿಸಬೇಕು, ಅವರದೆ ಆದ ವಾರ್ಷಿಕ ವೇಳಾ ಪಟ್ಟಿ ತಯಾರಿ ಮಾಡಿಕೊಂಡು ಅಂಟಿಸಬೇಕು. ಮತ್ತು ಮಕ್ಕಳು ಅದರಂತೆ ಶಿಕ್ಷಣ ಪದ್ದತಿ ಅಳವಡಿಸಿಕೊಂಡಿದ್ದಾರೆ ಇಲ್ಲವೆ ಎಂಬುದನ್ನು ಗಮನಹರಿಸಬೇಕು.

ಶಾಲೆಯಲ್ಲಿ ಹಾಗೂ ಗುರು ಹಿರಿಯರಿಗೆ ಗೌರವ ಕೊಡುತ್ತಾರೆ ಇಲ್ಲವೂ ಎಂಬದು ಮನೆಯಿಂದ ಪ್ರಾರಂಭವಾಗಬೇಕು.
ಮಕ್ಕಳ ಆರೋಗ್ಯದ ಕಡೆ ಗಮನ ವಿರಲಿ!
ಪ್ರತಿ ನಿತ್ಯ ಅಧ್ಯಯನ, ಅತಿಯಾದ ಭಾರವಾದ ಪುಸ್ತಕಗಳನ್ನು ಹೊತ್ತುಕೊಂಡು ಹೋಗುವುದರಿಂದ ದೈಹಿಕವಾಗಿ ಕುಗ್ಗುತ್ತಾರೆ, ಬ್ಯಾಗನಲ್ಲಿ ಅವಶ್ಯಕ ಪುಸ್ತಕಗಳನ್ನು ಹಾಕಬೇಕೆ, ಪ್ರತಿನಿತ್ಯ ಒಳ್ಳೆಯ ಆಹಾರ ಡಬ್ಬಿಯಲ್ಲಿ ಹಾಕಿ ಕಳಿಸಬೇಕು. ಸಮಯಕ್ಕೆ ಸರಿಯಾಗಿ ನಿದ್ದೆ, ಪಾಲಕರು ಬೋರಾದ ಸಮಯದಲ್ಲಿ ಮಕ್ಕಲೊಂದಿಗೆ ಸಮಾಲೋಚನೆಯಲ್ಲಿ ತೊಡಗಿ ಆದ್ದರಿಂದ ಅವರ ಬೌಧ್ದಿಕ ಮಟ್ಟವನ್ನು ಹೆಚ್ಚಿಸಲು ಸಹಾಯಕಾರಿಯಾಗುತ್ತದೆ.

ಈ ನಿಮ್ಮ ಶೈಕ್ಷಣಿಕ ವರ್ಷ ಚನ್ನಾಗಿ ಸಾಗಲಿ, ಅಂದುಕೊಂಡ ಗುರಿಯನ್ನು ಮುಟ್ಟಬೇಕು ಅಂದಾಗ ಮಾತ್ರ ಸಾಧ್ಯವಾಗುತ್ತದೆ.

loading...