ರಮೇಶ್‌ರ ಸೇವಾ ಕಾರ್ಯಗಳಿಗೆ ಜನಾಶೀರ್ವಾದ ಕೋರಿಕೆ

0
16
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಜೆಡಿಎಸ್‌ ಪಕ್ಷದ ವತಿಯಿಂದ ಹಳಿಯಾಳ-ದಾಂಡೇಲಿ-ಜೋಯಿಡಾ ತಾಲೂಕುಗಳನ್ನೊಳಗೊಂಡ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕೆ.ಆರ್‌. ರಮೇಶ್‌ ಅವರು ಕಳೆದ ಒಂದು ದಶಕದಿಂದ ಹಲವಾರು ಸಮಾಜಸೇವಾ ಕಾರ್ಯಗಳನ್ನು ಮಾಡಿದ್ದು ಸ್ಥಳೀಯವಾಗಿ ಯಾವುದೇ ಜನಪ್ರತಿನಿಧಿ ಇಲ್ಲದಿದ್ದರೂ ಸಹ ರಮೇಶ್‌ ರವರ ಸೇವೆ ಜನಪರವಾಗಿ ಜನಪ್ರೀಯವಾಗಿದೆ ಎಂದು ಜೆಡಿಎಸ್‌ ಪದಾಧಿಕಾರಿಗಳು ಹೇಳಿದರು.
ಪಕ್ಷದ ಪ್ರಚಾರ ನಿಮಿತ್ಯ ಹಳಿಯಾಳ-ದಾಂಡೇಲಿ-ಜೋಯಿಡಾ ತಾಲೂಕುಗಳಲ್ಲಿ ಪ್ರಚಾರ ಮಾಡಿದ ರಮೇಶ್‌ ರವರ ಅಭಿಮಾನಿಗಳಾದ ಚುನಾವಣಾ ಕಾರ್ಯದರ್ಶಿ ಅನಿಲ ನಾಯ್ಕ, ಪ್ರಶಾಂತ ಮುಳೆ, ನಾರಾಯಣ ದಡ್ಡಿ, ಸಲೀಂ ಅಂಗಡಿಕರ, ಪುಂಡ್ಲೀಕ ನರೇಂದ್ರ, ಮಹೇಶ ಗೌಡಾ, ಪುಂಡ್ಲೀಕ ರೇಡೆಕರ ಮೊದಲಾದವರು ಅಭ್ಯರ್ಥಿ ಪರ ಪ್ರಚಾರ ಮಾಡಿದರು.
ಕೆ.ಆರ್‌. ರಮೇಶ್‌ ರವರು ಕರುನಾಡ ಸುವರ್ಣ ವೇದಿಕೆ ವತಿಯಿಂದ ಜನತೆಗೆ ಹತ್ತು-ಹಲವಾರು ಸೇವಾ ಚಟುವಟಿಕೆಗಳನ್ನು ಮಾಡಿದ್ದಾರೆ. ಸ್ತ್ರೀಶಕ್ತಿ ಸಂಘಗಳಿಗೆ ಊನ್ಯ ಬಡ್ಡಿ ದರದಲ್ಲಿ ಸಾಲ. ಹಲವಾರು ಗ್ರಾಮಗಳಲ್ಲಿರುವ ದೇವಸ್ಥಾನಗಳ ಜೀರ್ನೋದ್ಧಾರಕ್ಕಾಗಿ ಧನ ಸಹಾಯ. ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸರಕಾರಿ ಶುಲ್ಕ ಭರಣ. ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕ ಸಹಾಯ. ಸುಮಾರು 22 ಸಾವಿರ ಮಕ್ಕಳಿಗೆ ಸಮವಸ್ತ್ರ ಹಗೂ ಬಡ ಜನರಿಗೆ ಬಟ್ಟೆ ವಿತರಣೆ. ಸ್ವಯಂ ಉದ್ಯೋಗಕ್ಕಾಗಿ ಕ್ಷೇತ್ರದ 95 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ. ಕ್ಷೇತ್ರದಲ್ಲಿನ ಹಲವಾರು ಮಕ್ಕಳ ಶಸ್ತ್ರ ಚಿಕಿತ್ಸೆಗೆ ನೆರವು. ಕ್ಷೇತ್ರದಲ್ಲಿನ ಯುವಕ ಸಂಘಗಳಿಗೆ ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಧನ ಸಹಾಯ. ಕ್ಷೇತ್ರದಲ್ಲಿನ ಹಲವಾರು ಗ್ರಾಮಗಳಿಗೆ ಕುಡಿಯುವ ನೀರಿನ ಬರ ನೀಗಿಸಲು ಬೋರವೆಲ್‌ ಕೊರಸಿರುವದು. ಕ್ಷೇತ್ರದಲ್ಲಿನ ಹಲವಾರು ಗ್ರಾಮಗಳಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಧನ ಸಹಾಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಸಹ ಈ ಸಮಾಜಸೇವೆ ಮುಂದುವರಿಯಲಿದೆ ಎಂದು ಹೇಳಿ ಮತಯಾಚಿಸಿದರು.
-: ಜೋಯಿಡಾ ತಾಲೂಕಿನಲ್ಲಿ ಪ್ರಚಾರ :-
ಜೋಯಿಡಾ, ಕುಂಬಾರವಾಡಾ, ಅಣಶಿ, ಉಳವಿ ಭಾಗಗಳಲ್ಲಿ ಸಂಚರಿಸಿ ಜೆಡಿಎಸ್‌ ಅಭ್ಯರ್ಥಿ ಕೆ.ಆರ್‌. ರಮೇಶ್‌ ಮತದಾರರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜೋಯಿಡಾ ತಾಲೂಕಾಧ್ಯಕ್ಷ ಕೃಷ್ಣಾ ದುಗ್ಗಾಣಿ ಮಾತನಾಡುತ್ತಾ ಜೋಯಿಡಾ ತಾಲೂಕಿನಲ್ಲಿರುವ ಜನರು, ಕೃಷಿಕರು, ಜನಸಾಮಾನ್ಯರಿಗಿಂತ ಮುಖಂಡರು ಹಾಗೂ ಜನಪ್ರತಿನಿಧಿಗಳ ವೈಯಕ್ತಿಕ ಅಭಿವೃದ್ಧಿಯೇ ಹೆಚ್ಚಾಗಿದೆ. ಇದನ್ನು ಜೋಯಿಡಾ ತಾಲೂಕಿನ ಸರ್ವ ಜನತೆ ಗಮನಿಸುತ್ತಿದ್ದಾರೆ. ತಾಲೂಕಿಗೆ ಆದ ಅನ್ಯಾಯವನ್ನು ಚುನಾವಣೆಯಲ್ಲಿ ಜೆಡಿಎಸ್‌ಗೆ ಮತ ನೀಡುವ ಮೂಲಕ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಹೇಳಿದರು.
ಅಭ್ಯರ್ಥಿ ಕೆ.ಆರ್‌. ರಮೇಶ್‌ ಅವರು ಮಾತನಾಡುತ್ತಾ ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ಕೇವಲ 20 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಸರ್ವಜನರ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಕಾರ್ಯಗಳನ್ನು ಮಾಡಿದ್ದಾರೆ. ಅವರು ಮತ್ತೆ ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುತ್ತಾರೆ. ಜೋಯಿಡಾ ತಾಲೂಕಿನ ಜನತೆಯ ಸಮಗ್ರ ಅಭಿವೃದ್ಧಿಗಾಗಿ ಅವರು ವಿಶೇಷ ಕಾಳಜಿ ವಹಿಸುವಂತೆ ಕೋರಲಾಗುವುದು ಎಂದರು.
ಕ್ಷೇತ್ರಾಧ್ಯಕ್ಷ ನಾಗೇಂದ್ರ ಜಿವೋಜಿ, ದಾಂಡೇಲಿ ನಗರ ಅಧ್ಯಕ್ಷ ರಿಯಾಜ್‌ ಸೈಯದ್‌, ನಗರಸಭಾ ಸದಸ್ಯ ರೋಷನ್‌ ಬಾವಾಜಿ ಮೊದಲಾದವರಿದ್ದರು.

loading...