ರವಿಕಾಂತ ಭರ್ಜರಿ ಗೆಲವು ಸಾಧಿಸಲಿದ್ದಾರೆ: ಡಾ. ಸಾರ್ವಭೌಮ

0
9
loading...

ಕನ್ನಡಮ್ಮ ಸುದ್ದಿ-ಇಂಡಿ: ಇಂಡಿ ಮತಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮಗಳಿಗೆ ವಿಧಾನಸಭಾ ಚುನಾವಣೆಯ ಪ್ರಚಾರ ನಿಮಿತ್ತವಾಗಿ ಭೇಟಿ ನೀಡಿದಾಗ ಅಲ್ಲಿಯ ಮತದಾರ ಭವ್ಯ ಮೆರವಣಿಗೆಯೂ ಕಂಡು ಆಶ್ಚರ್ಯವಾಗಿದೆ. ಆದ್ದರಿಂದ ಪಕ್ಷೇತರ ಅಭ್ಯರ್ಥಿ ರವಿಕಾಂತ ಪಾಟೀಲ ಅವರು ಈ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಲಿದ್ದಾರೆ ಎಂದು ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಹೇಳಿದರು.
ಅವರು ತಮ್ಮ ಪಕ್ಷದ ಕಾರ್ಯಾಲಯದಲ್ಲಿ ಆಯೋಜಿಸಿರುವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಮಾಜಿ ಶಾಸಕರಾದ ಹಾಗೂ ಪಕ್ಷೇತರ ಅಭ್ಯರ್ಥಿಯಾದ ರವಿಕಾಂತ ಪಾಟೀಲರ ಕಡೆಗೆ ಮತದಾರ ಹೆಚ್ಚಿನ ಒಲವು ತೋರಿಸುತ್ತಿದ್ದು. ಇದರಿಂದ ಸುಮಾರು 75 ಸಾವಿರ ಮತಗಳಿಂದ ಆಯ್ಕೆಯಾಗಲಿದ್ದಾರೆ ಅಲ್ಲದೇ ಹಲವಾರು ಗ್ರಾಮಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್‌, ಜೆಡಿಎಸ್‌ ಹಲವಾರು ಕಾರ್ಯಕರ್ತರು ಈಗ ಪಕ್ಷೇತರ ಅಭ್ಯರ್ಥಿಯವರ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದರಿಂದ ನಮಗೆ ಗೊತ್ತಾಗುತ್ತದೆ. ರವಿಕಾಂತ ಪಾಟೀಲ ಅವರು ಹೆಚ್ಚು ಮತಗಳ ಅಂತರದಿಂದ ಜಯ ಸಾಧಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇನೋರ್ವ ಮಾಜಿ ಶಾಸಕ ಎನ್‌, ಎಸ್‌. ಖೇಡ ಮಾತನಾಡಿ ನಾನು ಹಿಂದೆ 1985 ರಲ್ಲಿ ಜನತಾ ಪಾರ್ಟೀಯಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅಲ್ಲದೇ ಮುಂದೆ ನಾನು ಯಾವುದೇ ಪಕ್ಷದ ಸೇರ್ಪಡೆಯಾಗದೆ ಸ್ಥಗಿತ ಉಳಿದಿದ್ದೆ. ಆದರೆ ಮಾಜಿ ಶಾಸಕರಾದ ಪಕ್ಷೇತರ ಅಭ್ಯರ್ಥಿಯಾದ ರವಿಕಾಂತ ಪಾಟೀಲ ಅವರು ಒಳ್ಳೆಯ ನಿಷ್ಠಾವಂತ ರಾಜಕಾರಣಿ ಎಂದು ಗೊತ್ತಾದ ಬಳಿಕ ಅವರನ್ನು ಆಯ್ಕೆ ಮಾಡಲು ನಾನು ಮತ್ತು ಇನೋರ್ವ ಮಾಜಿ ಶಾಸಕರಾದ ಡಾ.ಸಾರ್ವಭೌಮ ಬಗಲಿ ಇವರನ್ನು ಕೂಡಿ ಇವರನ್ನು ಆಯ್ಕೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲು ಕೆಲವನ್ನು ಮಡುತ್ತಿದ್ದೇವೆ. ಆದರೆ ಪ್ರತಿಯೊಂದು ಗ್ರಾಮಗಳಿಗೆ ಹೋದರೆ ಅಲ್ಲಿ ಅಭೂರ್ತ ಪೂರ್ವ ಸ್ವಾಗತವನ್ನು ಮಾಡುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಯುವಕರ ದಂಡು ಇರುತ್ತದೆ ಎಂದು ತಿಳಿದುಕೊಂಡಿದ್ದೇನೆ ಆದರೆ ಈಗ ರವಿಕಾಂತ ಪಾಟೀಲರ ಕಂಡರೆ ಯುವಕರೇ ಹೆಚ್ಚು ಬರುತ್ತಿದ್ದಾರೆ. ಇದು ಒಂದು ವಿಶೇಷವಾಗಿದೆ. ಆದ್ದರಿಂದ ಇವರು ಹೆಚ್ಚಿನ ಮತಗಳ ಅಂತರದಿಂದ ಆಯ್ಕೆಯಾಗುತ್ತಾರೆ ಎಂದು ಹೇಳಿದ ಅವರು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರಿಗೆ ಹಿಂದೆ ನಾವೇ ಶಾಸಕರಾಗಿ ಮಾಡಿ ಅವರು ಸಚಿವರಾಗಿದ್ದು ನಮೀಂದ ಅನ್ನುವುದು ಮರೆತಿದ್ದಾರೆ. ಆದರೆ ಅವರು ತಮಗೆ ಬೇಕಾದ ಜನರಿಗೆ ಟಿಕೇಟನ್ನು ಕೊಟ್ಟು ಸೋಲಿಸುವುದೇ ಅವರ ಕೆಲಸ ಎಂದು ಅವರ ವಿರುದ್ಧ ವಾಗ್ದಾಳಿ ಮಾಡಿದರು.
ನಾಗರಳ್ಳಿ ಗ್ರಾಮದ ಕೆಲವು ರವಿಕಾಂತ ಪಾಟೀಲ ಅವರ ಪಕ್ಷಕ್ಕೆ ಸೇರ್ಪಡೆಯಾದರು: ಸಂಜೀವ ಪಠಾಣೆ, ಭೀಮಾಶಂಕರ ಸಿಂಗೆ, ಯಲ್ಲಗೊಂಡ ಪೂಜಾರಿ, ಮಳಪ್ಪ ಪೂಜಾರಿ, ಮಹಾದೇವ ಕನ್ನೂರ, ಪರುಶುರಾಮ ಪಾಠಾಣೆ, ಬಸವರಾಜ ಕುಂಬಾರ, ಸೋಮಯ್ಯ ಹಿರೇಮಠ, ಲಕ್ಷ್ಮಣ ಪಾಠಾಣೆ, ಅಯ್ಯಪ್ಪ ಮಾದರ, ವಿಠ್ಠಲ ಪೂಜಾರಿ, ಮುಸ್ತಾಕ ಲೋಣಿ, ಶಿವಲಿಂಗಪ್ಪ ಕಕ್ಕಳಮೇಲಿ, ಮಹಾದೇವ ಹರಿಜನ ಸೇರ್ಪಡೆಯಾದರು.
ಈ ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಿರಾಜ ಪಾಟೀಲ, ವ್ಹಿ.ಎಚ್‌. ಬಿರಾದಾರ, ಬಸವರಾಜ ದೇವರ, ಶ್ರೀಮಂತ ಬಾರಿಕಾರಿ, ಅಯೂಬ ನಾಟೀಕಾರ, ಪ್ರಶಾಂತ ಗೌಳಿ, ಶಿವಾನಂದ ಕುಂಬಾರ, ತಮ್ಮಣ್ಣ ಬೊಂದರ್ಡೆ,ರಾಜಶೇಖರ ಹೊಟಗಿ ಸೇರಿದಂತೆ ಮತ್ತಿತ್ತರು ಇದ್ದರು.

loading...