ರಾಜಕೀಯ ಲಾಭಕ್ಕಾಗಿ ಧರ್ಮ ಒಡೆವ ನೀತಿ ಅನುಸರಿಸುತ್ತಿದ್ದಾರೆ: ಅನಂತಕುಮಾರ

0
12
loading...

ಬೀಳಗಿ: ಸಿದ್ದರಾಮಯ್ಯನವರು ಬ್ರಿಟಿಷ್‍ರಂತೆ ರಾಜಕೀಯ ಲಾಭಕ್ಕಾಗಿ ವೀರಶೈವ ಲಿಂಗಾಯತ ಧರ್ಮವನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕ್ರಾಸ್ ಬಳಿ ಇರುವ ಬಿಜೆಪಿ ಕಾರ್ಯಲಯದ ಆವರಣದಲ್ಲಿ ಬೀಳಗಿ ವಿಧಾನ ಸಭ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುರುಗೇಶ್ ನಿರಾಣಿ ಪರ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಮಾಜವಾದಿ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ರೂ.70 ಲಕ್ಷ ಹೊಬ್ಲೇಟ್ ವಾಚ್ ಕಟ್ಟಿಕೊಂಡು ಮಜಾವಾದಿಯಾಗಿದ್ದಾರೆ. ಸಿಎಂ ಅವರು 24 ಗಂಟೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ-ಪಾಸ್ತಿ ವಿವರದಲ್ಲಿ ಹೊಬ್ಲೇಟ್ ವಾಚ್ ಬೆಲೆ ನಮೊದು ಆಗಿರುವ ಕುರಿತು ಸಾರ್ವಜನಿಕರಿಗೆ ತಿಳಿಸಲು ಒತ್ತಾಯಿಸಿದರು. ಸಿದ್ದರಾಮಯ್ಯನವರು ಮೀಟರ್ ಬಡ್ಡಿ ಯಡಿಯೂರಪ್ಪ ಜೀರೋ ಬಡ್ಡಿ ಎಂದು ವ್ಯಂಗ್ಯವಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಬಾಗಲಕೋಟ, ಕುಡಚಿ ರೈಲು ಮಾರ್ಗಕ್ಕೆ ಭೂಮಿ ಕಳೆದು ಕೊಂಡ ಸಂತ್ರಸ್ಥರಿಗೆ ರೂ.12 ಲಕ್ಷ ಪರಿಹಾರ ಧನವನ್ನು ನೀಡ್ಡಿದ್ದು ಸಿದ್ದರಾಮಯ್ಯ ಮತ್ತು ಜೆಟಿಯವರು ಆಶ್ರಯ ನಿವೇಶನಗಳಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ರೂ.6 ಲಕ್ಷ ನೀಡಿ ಅನ್ಯಾಯ ಮಾಡಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿ ಮುರುಗೇಶ್ ನಿರಾಣಿ ಮಾತನಾಡಿ ಮತಕ್ಷೇತ್ರದ ಎಲ್ಲೆಡೆ ನನಗೆ ಅಭೂತಪೂರ್ವ ಬೆಂಬಲ ದೊರಕುತ್ತಿದ್ದು ಮೇ.12 ರಂದು ಜರಗುವ ಚುನಾವಣೆಯಲ್ಲಿ 25 ಸಾವಿರ ಮತಗಳ ಅಂತರದಿಂದ ಜಯಸಾಧಿಸುವದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಪ ಸದಸ್ಯ ಎಚ್ ಆರ್ ನಿರಾಣಿ, ಅಡಿಕೆ ಉದ್ಯಮಿ ಪ್ರಸನ್ ಕುಮಾರ್, ಮಾಜಿ ಶಾಸಕರಾದ ಪಿ.ಎಚ್.ಪೂಜಾರ್, ನಾರಾಯಣ ಸಾ ಭಾಂಡಗೆ, ಸಂಗಪ್ಪ ಕಟಗೇರಿ, ಮಹಾಂತೇಶ ಕೋಲಕಾರ್, ಎಂ ಎಮ ಶಂಭೋಜಿ, ಕೆ.ವ್ಹಿ.ಪಾಟೀಲ್, ಶ್ರೀಶೈಲ್ ಯಂಕಂಚಿಮಠ, ಅನೀಲ್ ದೇಶಪಾಂಡೆ, ಕಾವೇರಿ ರಾಠೋಡ್, ಆನಂದ ಇಂಗಳಗಾವಿ ಸೇರಿದಂತೆ ಅನೇಕರು ಇದ್ದರು.

loading...