ರಾಜ್ಯಪಾಲರ ಕ್ರಮ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

0
39
loading...

ಕನ್ನಡಮ್ಮ ಸುದ್ದಿ-ಬೆಳಗಾವಿ 17:ಸರಕಾರ ರಚಿಸಲು ಚುನಾವಣೆಯಲ್ಲಿ ಬಹುಮತವಿರುವ ಪಕ್ಷಗಳಿಗೆ ಅವಕಾಶ ನೀಡದೆ ರಾಜ್ಯಪಾಲ ವಾಜುಬಾಯ್‍ವಾಲಾ ಅವರು ಕಾನೂನು ಬಾಹಿರವಾಗಿ ರಾಜ್ಯ ಭವನದ ಅಧಿಕಾರದ ದುರಪಯೋಗ ಮಾಡಿಕೊಂಡಿದ್ದಾರೆ ಮತ್ತು ಬಿಜೆಪಿ ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಗುರುವಾರ ಮುಂಜಾನೆ ನಗರದಲ್ಲಿ ಕಾಂಗ್ರೆಸ್ ಕಛೇರಿ ಮುಂದೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲ ಮತ್ತು ಬಿಜೆಪಿ ಪಕ್ಷದ ವಿರುದ್ದ ಆಕ್ರೋಶ ವ್ಯಕ್ತ ಪಡೆಸಿದರು. ಮುಖ್ಯಮಂತ್ರಿಯಾಗಿ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದಂತೆ
ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಇಳಿದರು.ಈ ಸಂಧರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾದ್ಯಕ್ಷ ವಿನಯ ನಾವಲಗಟ್ಟಿ ಬಿಜೆಪಿ ನಾಯಕರು ಸಂವಿಧಾನ ವಿರೋದ ಕೆಲಸ ಮಾಡುತ್ತಿದ್ದಾರೆ.ಸರಕಾರ ರಚಿಸಲು ಬಹುಮತ ಇಲ್ಲದೆ ಇದ್ದರು ಬಿಜೆಪಿಗೆ ರಾಜ್ಯಪಾಲರು ಅವಕಾಶ ನೀಡಿರುವುದು ಅಸಂವಿಧಾನಾತ್ಮಕವಾದ ನಿಲವು,ರಾಜ್ಯಪಾಲ ವಾಲಾ ಅವರು ಸಂವಿಧಾನ ಬದ್ದ ಕೆಲಸ ಮಾಡದೆ ಶಾಸಕರ ಖರೀದಿ ಕುದುರೆ ವ್ಯಾಪಾÀರಕ್ಕೆ ಅವರೆ ಬೆಂಬಲ ನೀಡುತ್ತಿದ್ದರೆ ಎಂದು ರಾಜ್ಯಪಾಲರ ಕ್ರಮ ಖಂಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಂಕರಗೌಡ ಪಾಟೀಲ,ಚಬಣ್ಣಾ ಉಳ್ಳಾಗಡಿ,ಅಡಿವೇಶ ಉಟಗಿ,ಶ್ರೀಕಾಂತ ಮದುಬನ್ನವರ,ಸಿ ಸಿ ಪಾಟೀಲ,ಗೋಸಮನಿ ಜಲಿಕೋಪ,ಸಧಾಂ ನಧಾಪ್,ಸಂತೋಷ ಕಾಕತಿ,ರಾಜು ಪಾಟೀಲ ಮುಂತಾದವರು ಉಪಸ್ಥಿತರಿದ್ದರು.