ರಾಮಣ್ಣ ಗೆಲುವು : ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

0
16
loading...

ಮುಂಡರಗಿ: ರಾಮಣ್ಣ ಲಮಾಣಿ ಅವರ ಕ್ಷೇತ್ರದ ಜನರೊಂದಿಗಿನ ಒಡನಾಟವನ್ನು ಮೆಚ್ಚಿಕೊಂಡ ಮತದಾರರು ಅವರನ್ನು ಅತೀ ಹೆಚ್ಚು ಬಹುಮತದಿಂದ ಗೆಲ್ಲಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹೇಮಗಿರೀಶ ಹಾವಿನಾಳ ಹೇಳಿದರು.
ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಮಕ್ತುಂಪೂರ ಗ್ರಾಮದಲ್ಲಿ ಹಾವಿನಾಳ ಅಭಿಮಾನಿ ಸಂಘ ಹಾಗೂ ಬಿಜೆಪಿ ಕಾರ್ಯಕರ್ತರು ಬುಧವಾರ ಏರ್ಪಡಿಸಿದ್ದ ವಿಜಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಮಣ್ಣ ಅವರು ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿದ್ದಾರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ. ರಾಜ್ಯದ ಜನರು ಬಿಜೆಪಿಯತ್ತ ಒಲವು ತೋರಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಯಾವುದೆ ರೀತಿಯ ಕುತಂತ್ರ ಮಾಡಿದರೂ ಅವರಿಂದ ಸರ್ಕಾರ ರಚನೆ ರಚನೆ ಮಾಡುವುದಕ್ಕೆ ಸಾಧ್ಯವಾಗುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮುಂಡರಗಿ ಮಂಡಳ ಅಧ್ಯಕ್ಷ ದೇವಪ್ಪ ಕಂಬಳಿ ಮಾತನಾಡಿ, ಶಿರಹಟ್ಟಿ ಮತಕ್ಷೇತ್ರದ ಜನರು ರಾಮಣ್ಣ ಅವರನ್ನು ಅತೀ ಹೆಚ್ಚು ಬಹುಮತದಿಂದ ಗೆಲ್ಲಿಸಿದ್ದು, ಅವರ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಸವೋತೋಮುಖ ಅಭಿವೃದ್ಧಿಗೆ ರಾಮಣ್ಣ ಲಮಾಣಿ ಅವರು ಶ್ರಮಿಸಲಿದ್ದಾರೆ ಎಂದು ತಿಳಿಸಿದರು.
ಗ್ರಾಮದ ಹಿರಿಯರಾದ ಉಮೇಶ ಲಕ್ಕುಂಡಿ, ಸಿದ್ದಪ್ಪ ಪೂಜಾರ, ಬಾಳಪ್ಪ ಗೌಡ್ರ, ದೇವಪ್ಪ ಇಟಗಿ, ನಾಗರಾಜ ಮುರಡಿ, ಮಹೇಶ ನಾಗರಹಳ್ಳಿ, ಭೀಮಪ್ಪ ವಾಲಿಕಾರ, ಮಾರುತಿ ನಾಗರಹಳ್ಳಿ, ಶಿವಪ್ಪ ತಿಪ್ಪಣ್ಣವರ, ಮುದಿಯಪ್ಪ ಲಕ್ಕುಂಡಿ, ಯಮನೂರಪ್ಪ ಉಪ್ಪಾರ, ಅಂದಪ್ಪ ವಾಲಿಕಾರ, ಮೈಬುಬ್ ರಾಟಿ, ರಾಮಣ್ಣ ಗೌಡ್ರ, ಮಂಜಪ್ಪ ಪಾಟೀಲ, ಶರಣಪ್ಪ ಗೊಂಡಬಾಳ, ಜಲಾನೀ ಮಕಾಂದಾರ, ಹನುಮಂತಪ್ಪ ಅಯ್ಯಪ್ಪನವರ, ಇತರರು ಇದ್ದರು.

loading...