ರಾಮದುರ್ಗ: ಮತ ಲೆಕ್ಕಾಚಾರದಲ್ಲಿ ಮಗ್ನರಾದ ಅಭ್ಯರ್ಥಿಗಳು

0
36
loading...

ರಾಮದುರ್ಗ: ಚುನಾವಣೆಯಲ್ಲಿ ಮುಗಿದ ಮಾರನೆಯ ದಿನ ರಾಮದುರ್ಗ ವಿಧಾನಸಭಾ ಕ್ಷೇತ್ರದ ಕದನದಲ್ಲಿ ಇರುವ ಅಭ್ಯರ್ಥಿಗಳು, ಕಾರ್ಯಕರ್ತರೊಂದಿಗೆ ಚರ್ಚೆ ಮಾಡುತ್ತಾ ಭಾನುವಾರ ಅತ್ಯಂತ ರಿಲ್ಯಾಕ್ಸ್ ಖುಷಿ ಖುಷಿಯಾಗಿ ಎಲ್ಲ ಅಭ್ಯರ್ಥಿಗಳು ಕಾಲ ಕಳೆಯುತ್ತಿರುವ ದೃಶ್ಯ ಕಂಡು ಬಂದಿತು.
ಚುನಾವಣೆಯ ಪ್ರಚಾರ ಸಭೆ, ಮತದಾರರ ಮನೆಮನೆಗೆ ಭೇಟಿ, ಬಹಿರಂಗ ಸಭೆಗಳು ಸೇರಿದಂತೆ ಅನೇಕ ಚುನಾವಣೆ ಕಾರ್ಯಚಟುವಟಿಕೆಗಳಲ್ಲಿ ತಲ್ಲಿನರಾಗಿದ್ದ ಅಭ್ಯರ್ಥಿಗಳು ಭಾನುವಾರ ತಮ್ಮ ವೈಯಕ್ತಿಕ ಕಾರ್ಯಗಳಲ್ಲಿ ಭಾಗಿಯಾಗಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಅಶೋಕ ಪಟ್ಟಣ ಅವರು ಭಾನುವಾರ ಬೆಳಿಗ್ಗೆ ಪತ್ರಿಕೆ ಓದುದವರಲ್ಲಿ ಬ್ಯುಸಿಯಾಗಿದ್ದರು. ನಂತರ ಮನೆಗೆ ಬರುವ ಕಾರ್ಯಕರ್ತರೊಂದಿಗೆ ಸ್ವಲ್ಪ ಹರಟೆ ಹಾಗೂ ಮತಗಳ ಲೆಕ್ಕಾಚಾರದಲ್ಲಿ ತೊಡಗಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಅಭಿವೃದ್ದಿಗಾಗಿ ಸುಮಾರು 2600 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಂಡು ತಾಲೂಕಿನ ಸಮಗ್ರ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಿರುವೆ. ನಾನು ಮಾಡಿದ ಅಭಿವೃದ್ದಿ ಕಾರ್ಯಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿ ಮಾಡಿದ ಜನಪರ ಕಾರ್ಯಕ್ರಮಗಳನ್ನು ತಾಲೂಕಿನಲ್ಲಿ ಸಮರ್ಪಕವಾಗಿ ಬಳಸಿಕೊಂಡಿದ್ದೇನೆ ಎಂದರು.
ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರು ತಮ್ಮ ಅವಿಭಕ್ತ ಕುಟುಂಬದಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪನರ ನಾಯಕತ್ವ ಅವರು ಮುಖ್ಯಮಂತ್ರಿಯಾದ ಅವದಿಯಲ್ಲಿ ತಾಲೂಕಿಗೆ ನೀಡದ ಅಭಿವೃದ್ದಿ ಕಾರ್ಯಗಳು ಕೇಂದ್ರ ಸರ್ಕಾರದ ಸಾಧನೆ ಹಾಗೂ ಪ್ರಧಾನಿ ಮೋದಿಯವರ ಅಲೆ ಕಾರ್ಯಕರ್ತ ದುಡಿಮೆಯಿಂದ ಈ ಭಾರಿ ನನ್ನ ಗೆಲವು ಶತ ಸಿದ್ದ ಎಂದರು.
ಜೆಡಿಎಸ್ ಅಭ್ಯರ್ಥಿ ಎಂ.ಜಾವೇದಸಾಬ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆದರು. ಪಕ್ಷೇತರ ಅಭ್ಯರ್ಥಿ (ಬಿಜೆಪಿ ಬಂಡಾಯ) ರಮೇಶ ಪಂಚಕಟ್ಟಿಮಠ ಅವರು ತಮ್ಮ ದಾನೇಶ್ವರ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್‍ನ ಕಾರ್ಯದಲ್ಲಿ ಮಗ್ನರಾಗಿದ್ದು ತಮ್ಮ ದೈನಂದಿನ ಕಾರ್ಯಚಟುವಟಿಕೆಯಲ್ಲಿ ಎಂದಿನಂತೆ ಕಾರ್ಯನಿರತರಾಗಿದ್ದಾರೆ.

loading...