ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮನ್ನಾ ಮಾಡುವೆ: ಯಡಿಯೂರಪ್ಪ

0
8
loading...

ಹಿರೇಕೆರೂರ: ನಾನು ಅಧಿಕಾರಕ್ಕೆ ಬಂದು 24 ಗಂಟೆಗಳ ಒಳಗಾಗಿ ರೈತರ ರಾಷ್ಟ್ರೀಕೃತ ಬ್ಯಾಂಕ್‌ ಗಳ ಹಾಗೂ ಸಹಕಾರಿ ಸಂಘದÀ ಸಾಲ ಮನ್ನಾ ಮಾಡುತ್ತೇನೆ ಇಲ್ಲವಾದರೆ 25 ನೇ ಗಂಟೆಗೆ ನಾನು ರಾಜೀನಾಮೆ ನೀಡುತ್ತೇನೆ. ಹಾವೇರಿಜಿಲ್ಲೆ ನೀರಾವರಿ ಯೋಜನೆಗಳಿಗೆ 7.5 ಸಾವಿರ ಕೋಟಿ ಹಣವನ್ನು ನೀಡುತ್ತೇನೆ. ಸಣ್ಣ, ನೀರಾವರಿ, ಕೃಷಿ, ಬೆಳೆಗಳಿಗೆ ಬೆಂಬಲ ಬೆಲೆ, ರೈತರ ಪಂಪ್‌ ಸೆಟ್ಟ್‌ಗಳಿಗೆ 10 ಗಂಟೆ ವಿದ್ಯುತ್‌, ಇನ್ನೂ ಹಲವಾರು ಯೋಜನೆಗಳನ್ನು ರೂಪಿಸಿದ್ದು ಗೋ ಹತ್ಯ ನಿಷೇದ ಮಾಡೇ ಮಾಡುತ್ತೇನೆ ಈ ಬಾರಿ ಯು.ಬಿ.ಬಣಕಾರನ್ನು ತಾಲೂಕಿನ ಜನತೆ ಮತ್ತೆ ಗೆಲ್ಲಿಸುವ ಮೂಲಕ ಆರ್ಶೀವಾದ ಮಾಡಿ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿನಂತಿಸಿದರು.
ಪಟ್ಟಣದಲ್ಲಿ ತಾಲೂಕ ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಯು.ಬಿ ಬಣಕಾರ ಪ್ರಚಾರ ಕಾರ್ಯಕ್ರಮ ಹಾಗೂ ರೋಡ್‌ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಾಮುಂಡೇಶ್ವರಿ ಹಾಗೂ ಬದಾಮಿ ಎರಡು ವಿಧಾನ ಸಭಾಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಸೋಲುವ ಮೂಲಕ ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿಯಾಗುವ ಮೂಲಕ ಮನೆ ಹೋಗುವುದು ನಿಶ್ಚಿತ ಎಂದು. ಸಿದ್ದರಾಮಯ್ಯ ಒಬ್ಬ ತೆಲೆತಿರುಕ ಮುಖ್ಯಮಂತ್ರಿ. ರಾಷ್ಟ್ರ ಮೆಚ್ಚಿದ ಪ್ರಧಾನಿ ವಿರುದ್ದವೆ ಮಾನನಷ್ಠ ಮೊಕದ್ದಮೆ ಹೂಡಿದ್ದು ಅವರ ಬುದ್ದಿ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ಪ್ರಧಾನಿ ಮೋದಿ ಅವರು ಕಾಂಗ್ರೆಸ್‌ ಮುಕ್ತ ಭಾರತ ಮಾಡುವ ಗುರಿಯನ್ನು ಹೊಂದಿದ್ದು ಎಲ್ಲರೂ ಸೇರಿ ಆ ಕನಸ್ಸನ್ನು ನನಸ್ಸು ಮಾಡಬೇಕಿದೆ.
ಶಾಸಕ ಯು.ಬಿ.ಬಣಕಾರ ಮಾತನಾಡಿ, ತಾಲೂಕಿನಲ್ಲಿ ಬಿಜೆಪಿ ಅಲೆ ಇದ್ದು ಈ ಹಿಂದಿನ ಬಿ.ಎಸ್‌.ಯಡಿಯೂರಪ್ಪನವರ ಸರಕಾರ ನೀಡಿದ ಕೊಡುಗೆಯನ್ನು. ತಾಲೂಕಿನ ಜನತೆ ಮರೆತಿಲ್ಲ. ನರೇಂದ್ರ ಮೋದಿ ಅವರ ನೇತೃತ್ವದಕೇಂದ್ರ ಸರಕಾರ ದೇಶದ ಜನತೆಗೆ ಹಲವಾರು ಯೋಜನೆಗಳನ್ನು ನೀಡುವ ಮೂಲಕ ದೇಶದ ಅಭಿವೃದ್ಧಿ ಮಾಡುತ್ತಿದಾರೆ ಎಂದರು.
ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ, ಸಂಸದ ಶಿವಕುಮಾರ ಉದಾಸಿ, ಹೇಮಣ್ಣ ಮುದಿರೆಡ್ಡೆರ, ಬಂಗಾರಪ್ಪ ಇಕ್ಕೇರಿ, ಡಿ.ಎಂ.ಸಾಲಿ, ಸುಮಿತ್ರಾ ಪಾಟೀಲ್‌.ಎನ್‌.ಎಂ.ಈಟೇರ, ಶಿವರಾಜ ಹರಿಜನ, ಅನ್ನಪೂರ್ಣ ಬಣಕಾರ. ಎಸ್‌.ಎಸ್‌.ಪಾಟೀಲ, ಎಸ್‌.ಆರ್‌.ಅಂಗಡಿ, ಲಿಂಗರಾಜ ಚಪ್ಪರದಳ್ಳಿ, ಮಹೇಶ ಗುಬ್ಬಿ. ಸುಜಾತ ಕೊಟಗಿಮನಿ. ಷಣ್ಮಖಯ್ಯ ಮಳಿಮಠ, ಪಕ್ಷೆದ ಮುಖಂಡರಿದ್ದರು.

loading...