ರೈತಪರ ಯೋಜನೆ ಮೆಚ್ಚಿ ಬಿಜೆಪಿಗೆ ಸೇರ್ಪಡೆ

0
15
loading...

ಮುಂಡರಗಿ: ರೈತಪರ ಅನೇಕ ಯೋಜನೆಗಳನ್ನು ಜಾರಿ ತರುವುದರ ಕುರಿತು ಬಿಜೆಪಿಯು ಪ್ರಣಾಳಿಕೆಯಲ್ಲಿ ತಿಳಿಸಿದೆ. ಅವುಗಳನ್ನು ಮೆಚ್ಚಿಕೊಂಡು ನೂರಾರು ರೈತರು ಬಿಜೆಪಿಗೆ ಸೇರ್ಪಡೆಯಾಗಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದೇವೆ ಎಂದು ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ ಹೇಳಿದರು.
ಪಟ್ಟಣದ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ತಾಲೂಕಿನ ನೂರಾರು ರೈತರು ಬಿಜೆಪಿ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಅವರು ಮಾತನಾಡಿದರು. 1ಲಕ್ಷದ ವರೆಗಿನ ರೈತರ ಬೆಳೆ ಸಾಲ ಮನ್ನಾ, ನೀರಾವರಿ ಪಂಪ್‌ಸೆಟ್‌ಗೆ ಪ್ರತಿನಿತ್ಯ 10 ತಾಸು ತ್ರೀಪೇಸ್‌ ವಿದ್ಯುತ್‌ ಪೂರೈಕೆ, 1.5ಲಕ್ಷ ಕೋಟಿ ನೀರಾವರಿ ಕ್ಷೇತ್ರಕ್ಕೆ ಮೀಸಲು. ಇಂತಹ ಹತ್ತು ಹಲವಾರು ರೈತಪರ ಯೋಜನೆ ಜಾರಿ ತರುವುದರ ಬಗೆಗೆ ಪ್ರಣಾಳಿಕೆಯಲ್ಲಿ ತಿಳಿಸಿದ್ದು ನಮಗೇಲ್ಲ ಆತ್ಮಸ್ಥೈರ್ಯ ಹೆಚ್ಚಿಸಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹೇಮಗಿರೀಶ ಹಾವಿನಾಳ ಮಾತನಾಡಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ 24ತಾಸುಗಳಲ್ಲಿ ರೈತರ 1ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುತ್ತೇನೆ ಇಲ್ಲವಾದರೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ, ಇಂತಹ ವ್ಯಕ್ತಿತ್ವವನ್ನು ಹೊಂದಿರುವಂತ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸಬೇಕು. ಜಿಲ್ಲೆಯ ಎಲ್ಲ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ರೈತರು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಮಾವಿ, ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕುರಿ, ರೈತರಾದ ಚಂದ್ರಕಾಂತ ಉಳ್ಳಾಗಡ್ಡಿ, ಮಹಾಂತೇಶ ತಳಕಲ್‌, ಫಕೀರಪ್ಪ ಘಟ್ಟಿರಡ್ಡಿಹಾಳ, ಶಿವಲಿಂಗಪ್ಪ ಕೊಪ್ಪಳ, ಬಸವರಾಜ ಪೂಜಾರ, ಕಸ್ತೂರೆವ್ವ ಅರಕೇರಿ ಅನ್ನಪೂರ್ಣ ಪೆದ್ದರ, ಸೈನಾಜ್‌ ಕುಕನೂರ, ಶಮಶಾದ್‌ಬೇಗಂ ಜಲಣ್ಣವರ, ಗೌಸಬೀ ಪಣಿಬಂದ್‌, ಯಮನಮ್ಮ ಹಳ್ಳಿಕೇರಿ, ಮಮತಾಜ್‌ ಮಕಾಂದಾರ, ರೇಣುಕಾ ಬೇಂದ್ರೆ, ಸರೋಜಾ ಬಡಿಗೇರ, ಸಂಗೀತಾ ಬಡಿಗೇರ, ಶಾಂತವ್ವ ಇಟಗಿ, ಸಿದ್ದವ್ವ ಪಾರಪ್ಪನವರ, ಸುವರ್ಣ ತಳಗಡೆ, ಸೇರಿದಂತೆ 200ಕ್ಕೂ ಹೆಚ್ಚು ರೈತರು ಬಿಜೆಪಿಗೆ ಸೇರ್ಪಡೆಯಾದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಆನಂದಗೌಡ ಪಾಟೀಲ, ಎಸ್‌.ವಿ.ಪಾಟೀಲ, ಶಿವನಗೌಡ ಗೌಡ್ರ, ವಿಜಯಕುಮಾರ ಶಿಳ್ಳೀನ್‌, ಪ್ರಶಾಂತ ಗುಡದಪ್ಪನವರ, ಶ್ರೀನಿವಾಸ ಅಬ್ಬಿಗೇರಿ, ಪ್ರಭು ಅಬ್ಬಿಗೇರಿ, ಲಿಂಗರಾಜಗೌಡ ಪಾಟೀಲ, ಮುದಕಪ್ಪ ಕುಂಬಾರ, ಯಲ್ಲಪ್ಪ ಗಣಾಚಾರಿ, ಮಹಾಂತೇಶ ಕೊರಡಕೇರಿ, ನಾಗರಾಜ ಗುಡಿಮನಿ, ರಮೇಶ ದ್ಯಾವಣ್ಣವರ, ಇತರರು ಇದ್ದರು.

loading...