ರೈತರ ಬೆಳೆ ಸಾಲ ಸಾಲಮನ್ನಾ ಸ್ವಾಗತರ್ಹ: ಪಾಟೀಲ

0
13
loading...

ಹಾನಗಲ್ಲ: ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಬೆಳೆಸಾಲಮತ್ತು ನೇಕಾರರ ಒಂದು ಲಕ್ಷ ವರೆಗಿನ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿರುವ ನೂತನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನಿರ್ಧಾರವನ್ನು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಸ್ವಾಗತಿಸಿದೆ.
ಈ ಕುರಿತು ತಾಲೂಕಾಧ್ಯಕ್ಷ ಮರಿಗೌಡ ಪಾಟೀಲ ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರದ ರೈತರ ಸಾಲಮನ್ನಾ ನಿರ್ಧಾರ ಸ್ವಾಗತಾರ್ಹ. ಇದರೊಂದಿಗೆ ರೈತರು ಸಂಕಷ್ಟದಿಂದ ಹೊರಬರಬೇಕಾದಲ್ಲಿ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಶಾಸಕರಾಗಿ ಆಯ್ಕೆಯಾದಲ್ಲಿ ತಾಲೂಕನ್ನು ಸಂಪೂರ್ಣ ನೀರಾವರಿ ಕ್ಷೇತ್ರವನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದ ಸಿ.ಎಂ. ಉದಾಸಿ ಈ ನಿಟ್ಟಿನಲ್ಲಿ ಕೂಡಲೇ ಕ್ರಮಕೈಗೊಳ್ಳಬೇಕು. ಇದರೊಂದಿಗೆ ಕಳೆದ ಬಾರಿಯ ಬೆಳೆವಿಮೆ ವಿತಯರಣೆಯಲ್ಲಿ ವಿಮಾ ಕಂಪನಿ ಮತ್ತು ಅಧಿಕಾರಿಗಳ ತಪ್ಪಿನಿಂದಾಗಿ 4 ಸಾವಿರ ರೈತರಿಗೆ ವಿಮೆ ಸಿಗದೇ ಅನ್ಯಾಯವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಕೊಡಿಸುವುದಾಗಿ ಸಿ.ಎಂ. ಉದಾಸಿ ನೀಡಿದ ಭರಸವೆಯಂತೆ ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ವಿಮೆಹಣ ಕೊಡಿಸುವಂತೆ ಒತ್ತಾಯಿಸಿದ್ದಾರೆ.

loading...