ರೈತರ ಸಾಲಾಮನ್ನಾ ಮಾಡುವಂತೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

0
16
loading...

ಮುಂಡರಗಿ: ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರವು ರಾಜ್ಯದ ರೈತರ ಬೆಳೆ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಮುಂಡರಗಿ ಹಾಗೂ ಡಂಬಳ ಮಂಡಳ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‍ಗೆ ಮನವಿ ಸಲ್ಲಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹೇಮಗಿರೀಶ ಹಾವಿನಾಳ ಮಾತನಾಡಿ, ಚುನಾವಣೆಗೂ ಮುನ್ನ ಎಚ್.ಡಿ.ಕುಮಾರಸ್ವಾಮಿ ಅವರು ನಾನು ಮುಖ್ಯಮಂತ್ರಿಯಾಗಿ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುತ್ತೇನೆ ಎಂದಿದ್ದರೂ ಆದರೆ, ಈಗ ನಾವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಧ್ಯ ರೈತರ ಸಾಲವನ್ನು ಮನ್ನಾ ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಿರುವುದು ಬೇಸರದ ಸಂಗತಿ ಎಂದರು. ಮುಖಂಡ ದೇವಪ್ಪ ಇಟಗಿ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಕೊಟ್ಟ ಮಾತಿಗೆ ತಪ್ಪಿ ವಚನ ಭ್ರಷ್ಟರಾಗಿದ್ದಾರೆ. ಸರಿಯಾದ ಮಳೆ ಬೆಳೆ ಇಲ್ಲದೇ ರೈತರು ಪ್ರತಿನಿತ್ಯ ಕಷ್ಟದಲ್ಲಿ, ದಿನಗಳೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ನೆರವಾಗದೆ ನಮ್ಮ ಅಧಿಕಾರದ ಆಸೆಗೆ ಮುಖ್ಯಮಂತ್ರಿ ಖುರ್ಚಿ ಏರಿದ್ದಾರೆ ಎಂದು ಆರೋಪಿಸಿದರು.
ಯುವ ಮುಖಂಡ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ ಒಂದು ಗಂಟೆಯೊಳಗೆ 1 ಲಕ್ಷದವರೆಗಿನ ರೈತ ಬೆಳೆಸಾಲವನ್ನು ಮನ್ನಾ ಮಾಡುವ ಕಡತಗಳಿಗೆ ಸಹಿ ಹಾಕಿದ್ದರು. ವಿಪರ್ಯಾಸ ಆಗ ಬಿಜೆಪಿಗೆ ಬಹುಮತವಿಲ್ಲದೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದರು. ಜೆಡಿಎಸ್ ಪಕ್ಷವು ಕಾಂಗ್ರೆಸ್‍ನೊಂದಿಗೆ ಮೈತ್ರಿ ನಡೆಸಿ ಬಹುಮತ ಸಾಭೀತು ಪಡಿಸಿ ಅಧಿಕಾರಕ್ಕೆ ಬಂದರೂ ಸಿಎಂ ಕುಮಾರಸ್ವಾಮಿಯವರು ರೈತ ಸಾಲಮನ್ನಾ ಮಾಡುವಲ್ಲಿ ಹಿಂದೆಟು ಹಾಕುತ್ತಿರುವುದು ರೈತರ ದುರ್ದೈವ ಎಂದು ಹೇಳಿದರು.

ಶೀರಸ್ತೇದಾರ್ ರಮೇಶ ಬಾಳೆಹೊಸೂರ ಮನವಿ ಸ್ವೀಕರಿಸಿದರು. ಬಿಜೆಪಿ ಮುಂಡರಗಿ ಮಂಡಳ ಅಧ್ಯಕ್ಷ ದೇವಪ್ಪ ಕಂಬಳಿ, ಮುಖಂಡರಾದ ಕರಬಸಪ್ಪ ಹಂಚಿನಾಳ, ರವೀಂದ್ರ ಉಪ್ಪಿನಬೆಟಗೇರಿ, ಶಿವನಗೌಡ ಗೌಡ್ರ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಬಸವರಾಜ ಸಂಗನಾಳ, ಪಿ.ಎಲ್.ಸಂಕಣ್ಣವರ, ಬಸವರಾಜ ಬಿಳಿಮಗ್ಗದ, ನಾಗರಾಜ ಮುರಡಿ, ಯಲ್ಲಪ್ಪ ಗಣಾಚಾರಿ, ಬಸವರಾಜ ರಾಮೇನಹಳ್ಳಿ, ಪರುಶುರಾಮ ಕರಡಿಕೊಳ್ಳ, ರವಿ ಕರಿಗಾರ, ದೇವಪ್ಪ ಅಳವಂಡಿ, ಮಹಾಂತೇಶ ಕೊರಡಕೇರಿ, ವೀರೇಶ ಸಜ್ಜನರ, ನಿಂಗನಗೌಡ ಪಾಟೀಲ, ಟಿ.ಬಿ.ದಂಡಿನ, ಎಚ್.ಎಂ.ಹೊಸಗಾಣಗೇರ, ಮೈಲಾರಪ್ಪ ಕಲಕೇರಿ, ಬಿ.ಎಸ್.ಸಸಿಮಠ, ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಇದ್ದರು.

loading...