ರೈತ, ನೇಕಾರರ ಋಣ ಮುಕ್ತಗೊಳಿಸಿದ ಸಿಎಂ: ಬಿ.ಬಿ. ಚಿಮ್ಮನಕಟ್ಟಿ

0
9
loading...

ಗುಳೇದಗುಡ್ಡ: ದೀನದಲಿತರು, ರೈತರು, ನೇಕಾರರ, ಬಡವರ ಏಳಿಗೆಗಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮವನ್ನು ಹಾಕಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ದೇಶದ ಉತ್ತಮ ಮುಖ್ಯಮಂತ್ರಿಗಳು. ನೇಕಾರರ, ರೈತರ ಸಾಲಮನ್ನಾ ಮಾಡುವ ಮೂಲಕ ನೇಕಾರರು, ರೈತರನ್ನು ಋಣ ಮುಕ್ತಗೊಳಿಸಿದ ನಾಯಕ ಸಿದ್ದರಾಮಯ್ಯನವರು. ಅಭಿವೃದ್ಧಿಯ ಹರಿಕಾರ ಸಿದ್ದರಾಮಯ್ಯ ಅವರು ನಮ್ಮ ಕ್ಷೇತ್ರಕ್ಕೆ ಆಗಮಿಸಿದ್ದು ನಮ್ಮ ಭಾಗ್ಯ. ಈಗ ಇಡೀ ದೇಶ ನಮ್ಮತ್ತ ನೋಡುತ್ತಿದೆ ಎಂದು ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹೇಳಿದರು.
ಅವರು ಸಮೀಪದ ಕೋಟಿಕಲ್ಲ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ. ಸಿದ್ಧರಾಮಯ್ಯನವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿ, ಬಾದಾಮಿ ಮತಕ್ಷೇತ್ರದಿಂದ ಸಿದ್ಧರಾಮಯ್ಯವರು ಆಯ್ಕೆಯಾದರೆ ಬಾದಾಮಿ ಮತಕ್ಷೇತ್ರದೊಂದಿಗೆ ಇಡೀ ಉತ್ತರಕರ್ನಾಟಕ ಸಮಗ್ರ ಅಭಿವೃದ್ಧಿ ಯಾಗುತ್ತದೆ. ಸಿದ್ದರಾಮಯ್ಯವರನ್ನು ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮಲ್ಲರ ಮೇಲಿದೆ ಎಂದರು. ಡಾ. ಬಸವರಾಜ ಕೋಲಾರ, ಪ್ರಕಾಶ ಮೇಟಿ, ನಾಗಪ್ಪ ಗೌಡರ ಮಾತನಾಡಿದರು.

loading...