ವಸ್ತುಗಳನ್ನು ಬಳಸಿಕೊಳ್ಳುವ ಹವ್ಯಾಸ ರೂಢಿಸಿಕೊಳ್ಳಿ: ಸಾವಿತ್ರಿ

0
21
loading...

ಕನ್ನಡಮ್ಮ ಸುದ್ದಿ-ಕುಮಟಾ: ಕೆಲವೊಮ್ಮೆ ಬಂಗಾರದ ಆಭರಣಗಳನ್ನು ಅಧಿಕವಾಗಿ ಧರಿಸುವುದರಿಂದ ಕಳ್ಳತನವಾಗಬಹುದು. ಆದ್ದರಿಂದ ಕೃತ್ರಿಮ ಒಡವೆಗಳನ್ನು ಬಳಸುವುದು ಉತ್ತಮ ಎಂದು ಚೆನ್ನೈ ಮೂಲದ ಗ್ರಾಮೋತ್ಥಾನ ಸೇವಾ ಕೇಂದ್ರದ ಕರ್ನಾಟಕದ ಪ್ರಮುಖರಾದ ಹೊಸನಗರದ ದಿನಕರರಾವ್ ಜಾಧವ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಗ್ರಾಮೋತ್ಥಾನ ಸೇವಾ ಕೇಂದ್ರದ ಮೂರೂರು ಶಾಖೆಯ ವತಿಯಿಂದ ಕತಗಾಲ ಸಮೀಪದ ಸಾಗಡಿಬೇಣದ ಮಹಾಸತಿ ದೇವಸ್ಥಾನದ ಆವರಣದಲ್ಲಿ ಮೂರು ಪ್ರಾತ್ಯಕ್ಷಿಕೆಗಳನ್ನು ಉದ್ಘಾಟಿಸಿ ಮಾತನಾಡಿ, ಕತಗಾಲದಲ್ಲಿ ನಡೆಯುತ್ತಿರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ ಸುದ್ಧರಾಗುವ ಉದಯೋನ್ಮುಖ ಮಹಿಳಾ ಪ್ರತಿಭೆಗಳನ್ನು ದೇಶದ ವಿವಿಧ ಭಾಗಗಳಿಗೆ ಪರಿಚಯಿಸುವ ಕಾರ್ಯ ಮುಂದಿನ ದಿನಗಳಲ್ಲಿ ಆಗಲಿದೆ. ಸ್ವಉದ್ಯೋಗ ಮಾಡಲಿರುವವರಿಗೆ ಸೇವಾ ಕೇಂದ್ರದಿಂದ ಆರ್ಥಿಕ ಸಹಾಯ ಒದಗಿಸಲಾಗುವುದು ಎಂದರು.

ಸಾಬೂನು ತಯಾರಿಕೆಯನ್ನು ತೋರಿಸಿಕೊಟ್ಟ ಮೂರೂರಿನ ಸಾವಿತ್ರಿ ಮಧ್ಯಸ್ಥ ಮಾತನಾಡಿ, ಮನೆಯಲ್ಲಿ ಉಪಯೋಗಕ್ಕೆ ಬಾರದ ಎಣ್ಣೆ, ಹಿಟ್ಟು ಮುಂತಾದ ಎಷ್ಟೋ ವಸ್ತುಗಳನ್ನು ಬಳಸಿಕೊಳ್ಳುವ ಹವ್ಯಾಸವನ್ನು ಮಹಿಳೆಯರು ರೂಢಿಸಿಕೊಳ್ಳಬೇಕೆಂದು ಕರೆನೀಡಿದರು.
ಸಾಂತೂರಿನ ಸುಮಾ ಭಟ್ಟ ಆಭರಣ ತಯಾರಿಸುವ ವಿಧಾನವನ್ನು ತೋರಿಸಿಕೊಟ್ಟರು. ಸುಮಂಗಲಾ ಭಟ್, ಚಂದ್ರಕಲಾ ಅಂಬಿಗ, ಸವಿತಾ ಅಂಬಿಗ, ಪಲ್ಲವಿ ಮುಕ್ರಿ, ಶ್ರುತಿ ಶೇಟ್ ಹಾಗೂ ಭವಿಷ್ಯ ಶಾನಭಾಗ ಅವರು ತಮ್ಮ ತಮ್ಮ ಅನುಭವ ಹಂಚಿಕೊಂಡರು.

ರೋಹಿಣಿ ಭಟ್, ಗೀತಾ ಕಾಪಾಡಕರ, ಕವಿತಾ ಗೌಡ, ಜ್ಯೋತಿ ಮಡಿವಾಡ, ಸುಮಂಗಲಾ ಭಟ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು. ಹೊಲಿಗೆ ಶಿಕ್ಷಕಿ ವಿಜಯಾ ಗೌಡ ಸ್ವಾಗತಿಸಿದರು. ಸಂಯೋಜಕ ದಿನೇಶ ಭಟ್ ಚಂದಿಮನೆ ನಿರೂಪಿಸಿದರು. ಯಜಮಾನ ಗಜಾನನ ಗೌಡ ವಂದಿಸಿದರು.

loading...