ವಿದ್ಯಾರ್ಥಿಗಳ ಸಾಧನೆಯೇ ಕಾಲೇಜಿಗೆ ನೀಡುವ ಮಾನದಂಡ

0
16
loading...

ಜಮಖಂಡಿ: ಬದಲಾದ ಸನ್ನಿವೇಶದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಾಧನೆಯೇ ಆ ಕಾಲೇಜು ನೀಡುವ ಶಿಕ್ಷಣದ ಗುಣಮಟ್ಟ ಅಳೆಯುವ ಮಾನದಂಡವಾಗಿದೆ ಎಂದು ಬಿಎಲ್‍ಡಿಇ ಸಂಸ್ಥೆಯ ಪದವಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಟಿ.ಪಿ. ಗಿರಡ್ಡಿ ಅಭಿಪ್ರಾಯ ಪಟ್ಟರು.
ಸ್ಥಳೀಯ ಬಿಎಲ್‍ಡಿಇ ಸಂಸ್ಥೆಯ ವಾಣಿಜ್ಯ, ಬಿಎಚ್‍ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ 1995ನೇ ಬ್ಯಾಚಿನ ವಿದ್ಯಾರ್ಥಿಗಳು ಇಲ್ಲಿನ ಹುಲ್ಯಾಳ ಕ್ರಾಸ್ ಸಮೀಪ ಇರುವ ಬಾಗಲಕೋಟ ರೆಸಾರ್ಟ್‍ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪುನರ್ ಮಿಲನ ಹಾಗೂ ಪ್ರಾಧ್ಯಾಪಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಉನ್ನತ ಹುದ್ದೆ ಪಡೆಯುವ, ಉದ್ಯಮಪತಿಗಳಾಗಿ ರೂಪುಗೊಳ್ಳುವ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಹಾಗೂ ದಿನನಿತ್ಯ ಜೀವನದಲ್ಲಿ ಬರುವ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡುವ ಹೆಚ್ಚಿನ ಸಂಖ್ಯೆಯ ಹಳೆಯ ವಿದ್ಯಾರ್ಥಿಗಳ ಆಧಾರದ ಮೇಲೆ ಕಾಲೇಜು ವಿದ್ಯಾರ್ಥಿಗಳಲ್ಲಿ ತುಂಬುವ ಕ್ಷಮತೆಯ ಅಳತೆಗೋಲು ಎನಿಸಿದೆ ಎಂದರು.

ಹಳೆಯ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ, ಕೌಟುಂಬಿಕ ಜೀವನದಲ್ಲಿ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಯಶಸ್ಸು ಗಳಿಸಬೇಕು. ಕೈಗೊಂಡ ಉದ್ಯೋಗ ಅಥವಾ ಪಡೆದ ಹುದ್ದೆಯಲ್ಲಿ ಒಳ್ಳೆಯ ಹೆಸರು ಮಾಡಬೇಕು. ಕಲಿತ ಕಾಲೇಜಿನ ಬಗ್ಗೆ ಅಭಿಮಾನ ಇಟ್ಟುಕೊಳ್ಳಬೇಕು.
ಅಂದಾಗ ಮಾತ್ರ ಇಂದಿನ ವಿದ್ಯಾರ್ಥಿಗಳು ಹಳೆಯ ವಿದ್ಯಾರ್ಥಿಗಳಿಂದ ಸ್ಪೂರ್ತಿ ಮತ್ತು ಪ್ರೇರಣೆ ಪಡೆಯಲು ಸಾಧ್ಯವಾಗುತ್ತದೆ ಎಂದರು. ಪ್ರೊ.ಬಿ.ಐ. ಕರಲಟ್ಟಿ, ಉಪನ್ಯಾಸಕ ಟಿ.ಎಸ್. ಉಗಾರ, ಎನ್‍ಸಿಸಿ ಅಧಿಕಾರಿ ಡಾ.ಆರ್.ಟಿ.ಪತ್ತಾರ, ನಿವೃತ್ತ ಪ್ರಾಚಾರ್ಯ ಬಿ.ಕೆ. ಬಿರಾದಾರ, ಪ್ರೊ.ಎ.ಎಸ್. ಕಂದಗಲ್ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳಾದ ವೀಣಾ ಮೈತ್ರಿ, ಡಾ.ಪಿ.ಬಿ. ಬಾಗೇವಾಡಿ ತಮ್ಮ ಅನಿಸಿಕೆ ಹಂಚಿಕೊಂಡರು. ಶ್ರೀನಿವಾಸ ಅಪರಂಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ಎನ್.ಎಂ. ರೊಳ್ಳಿ, ಡಾ.ಎಂ.ಎಸ್. ಯಡವೆ, ಪ್ರೊ.ವೈ.ಬಿ. ಹೊಟ್ಟಿ, ಪ್ರೊ.ಎಲ್.ಎ. ಹಸರಡ್ಡಿ, ಪ್ರೊ.ಎಸ್.ಟಿ. ಮೈಗೂರ, ಪ್ರೊ.ಎಸ್.ಎಸ್. ಘಸ್ತಿ, ಪ್ರೊ.ಎಬಿ. ಖೋತ, ಪ್ರೊ.ಎಸ್.ಜಿ. ಹಿರೇಮಠ, ಪ್ರೊ.ಪಿ.ಬಿ. ಪಾಟೀಲ, ರಮೇಶ ಪಟ್ಟಣಶೆಟ್ಟಿ ಇದ್ದರು. ಗೋಪಾಲ ಬಿರಾದಾರ, ವಿನೋದ ದೇಶಪಾಂಡೆ, ಮಹಾಂತೇಶ ಮೂಡಲಗಿ ಸ್ವಾಗತಿಸಿದರು. ಶಿವಾನಂದ ನಂದೆಪ್ಪಗೋಳ, ಶಿವಲೀಲಾ ಹಿರೇಮಠ, ಜಗದೀಶ ಗವಳಿ, ಮಹೇಶ್ವರಿ ಬಿದರಿಮಠ ನಿರೂಪಿಸಿದರು. ಸಂಗೀತಾ ನಾಗರಾಜ ವಂದಿಸಿದರು.

loading...