ವಿದ್ಯೆಯಿಂದ ಮನುಷ್ಯನಿಗೆ ಯಶಸ್ಸು ಸಾಧ್ಯ: ಡಾ.ಆನಂದ ಗುರೂಜಿ

0
36
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ವಿದ್ಯೆ ಎಂಬ ಮಹಾನ ಜ್ಞಾನವನ್ನು ಪ್ರತಿಯೊಬ್ಬ ಮನುಷ್ಯನಿಗೆ ಉಣ ಬಡಿಸಿದಾಗ ಮಾತ್ರ ಯಶಸ್ಸು ದೊರೆಯುತ್ತದೆ ಎಂದು ಬೆಂಗಳೂರು ಬ್ರಹ್ಮಶ್ರೀ ಆನಂದ ಸಿದ್ಧಿ ಪೀಠದ ಡಾ.ಮಹರ್ಷಿ ಆನಂದ ಗುರೂಜಿ ಹೇಳಿದರು.

ಪಟ್ಟಣದ ಮುರಗೋಡ ರಸ್ತೆಯ ಬಸವ ನಗರದಲ್ಲಿರುವ ಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದ 10 ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ನಡೆದ ಧರ್ಮಸಭೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿ ವಿದ್ಯಾವಂತರನ್ನಾಗಿಸಬೇಕು. ವಿದ್ಯೆಗೆ ಹೆಚ್ಚು ಒತ್ತು ಕೊಟ್ಟಿರುವ ನಾಡು, ರಾಜ್ಯ, ದೇಶದಲ್ಲಿ ಪ್ರಗತಿ ಹೊಂದಿದೆ. ಅದಕ್ಕಾಗಿ ಸಮಾಜ, ಸರ್ಕಾರ ನಮಗೇನು ಕೊಟ್ಟಿದೆ ಎನ್ನುವದಕ್ಕಿಂತ ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎನ್ನುವದು ಬಹಳ ಮುಖ್ಯ. ನಾವು ಹೇಗೆ ಬದುಕಬೇಕೆಂಬ ಚಿಂತನೆ ಮಾಡಬೇಕು. ಆ ಚಿಂತನೆ ನಾವು ಮಾಡಿದಾಗ ಮಾತ್ರ ಯಶಸ್ಸಿನ ಫಲ ಖಂಡಿತವಾಗಿ ಸಿಗುತ್ತದೆ ಎಂದರು. ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿರುವ ರೋಗದ ಹೆಸರುಗಳು ನಾವು ಯಾರು ಕೇಳಿಲ್ಲ. ನೋಡಿಲ್ಲ. ಆದರೂ ಆ ರೋಗಗಳು ಹಾಗೆಯೇ ಬರುತ್ತಿವೆ. ಕರ್ನಾಟಕಕ್ಕೆ ಒಂದು ಬಾವುಲಿ ರೋಗ ಬಂದಿದೆ. ಆ ಬಾವುಲಿ ರೋಗ ಎಲ್ಲಿತ್ತೋ, ಯಾವಾಗ ಕರ್ನಾಟಕಕ್ಕೆ ಬಂತೂ ಗೊತ್ತಿಲ್ಲ. ಆದರೆ ರೋಗ ಬರುತ್ತಿದೆ. ಒಟ್ಟಾರೆ ರೋಗ, ರೂಜಿನಗಳು ಜಾಸ್ತಿ ಆಗುತ್ತಿವೆ. ಇದಕ್ಕೆ ಕಾರಣ ನಾವು ತಿನ್ನುವ ಆಹಾರದಲ್ಲಿ ಶಕ್ತಿ ಇಲ್ಲದ್ದರಿಂದ, ಕೆಮಿಕಲ್ಸ್ ಇರುವದರಿಂದ ಆರೋಗ್ಯ ಕೆಡುತ್ತಿದೆ. ಸಾಕಷ್ಟು ಬೆಳೆ ಬರದಿದ್ದರೂ ಪರವಾಗಿಲ್ಲ. ಬರುವ ಬೆಳೆ ಕಡಿಮೆ ಆದರೂ ಪರವಾಗಿಲ್ಲ. ರೈತರು ಆರೋಗ್ಯಕರವಾದ ಬೆಳೆ ಬೆಳೆಯಬೇಕಿದೆ. ಆರೋಗ್ಯಕರ ಬೆಳೆಯನ್ನು ಭೂಮಿ ತಾಯಿ ನಮಗೆ ಕೊಡಬೇಕಿದೆ. ರೈತರೂ ಆರೋಗ್ಯವಾಗಿದ್ದೂ, ನಾಡಿನ ಜನರನ್ನು, ರಾಜ್ಯವನ್ನು ಆರೋಗ್ಯದಿಂದ, ಆನಂದವಾಗಿಡಲು ದಾರಿ ಮಾಡಿಕೊಡಬೇಕಿದೆ. ಧರ್ಮ ಕಾರ್ಯಗಳಿಗೆ ವೇದಮೂರ್ತಿ ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಸಾಕಷ್ಟು ಶ್ರಮಿಸುತ್ತಿದ್ದಾರೆ. ಅವರಿಗೆ ಪ್ರತಿಯೊಬ್ಬರ ಸಹಾಯ, ಸಹಕಾರ ಅಗತ್ಯವಿದೆ ಎಂದರು. ಇದೇ ವೇಳೆ ಡಾ.ಮಹರ್ಷಿ ಆನಂದ ಗುರೂಜಿ ಅಮ್ಮನವರಿಗೆ ಅಭಿಷೇಕ, ಕುಂಕುಮಾರ್ಚನೆ, ಚಂಡಿಕಾ ಹೋಮ ನೆರವೇರಿಸಿದರು. ದೇವಿ ಆರಾಧಕ ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರಳಿಕಟ್ಟಿ ಶಿವಮೂರ್ತಿ ದೇವರು ಮಾತನಾಡಿದರು.

ಈ ಸಂದರ್ಭದಲ್ಲಿ ಕಿಲ್ಲಾತೋರಗಲ್ಲ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಕಮತಾನಟ್ಟಿ ಪ್ರಭುದೇವರು ಸಾನ್ನಿಧ್ಯವಹಿಸಿದ್ದರು. ರಾಮಚಂದ್ರ ಕಾಕಡೆ ದಂಪತಿ ನಿರೂಪಿಸಿದರು. ಸಹಸ್ರಾರು ಭಕ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.

loading...