ವಿಧಾನಸಭಾ ಕ್ಷೇತ್ರದಲ್ಲಿ ಶೇ.81.85 ರಷ್ಟು ಮತದಾನ

0
21
loading...

ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಶೇ 81.85 ರಷ್ಟು ಮತದಾನವಾಗಿದ್ದು , ಬೆಳಗ್ಗೆಯಿಂದ ನಿರಸವಾಗಿದ್ದ ಮತದಾನ ಮದ್ಯಹ್ನದನಂತರ ಚುರುಕಾಗಿದ್ದು ಜನರು ಸರತಿಯಲ್ಲಿ ನಿಂತು ಮತ ಚಲಾಯಿಸಿದರು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿ ಸೆಲ್ಫಿತೆಗೆದುಕೊಂಡು ಸಂಭ್ರಮಿಸಿದರು. ಹಾಗೂ ಪಟ್ಟಣದ ಕೆಜಿಎಸ್ ಹಿರಿಯ ಪ್ರಾಥಮಿಕ ಶಾಲೆಯ ಮಹಿಳಾ ಸ್ನೇಹಿ ಸಖಿ (ಗುಲಾಬಿ)ಮತಗಟ್ಟೆಗಳಿಗೆ ಮಹಿಳೆಯರು ಕೂತೂಹಲದಿಂದ ಭೇಟಿ ನೀಡಿ ಸೆಲ್ಫಿಕ್ಲೀಕ್ಕಿಸಿಕೊಳ್ಳುತ್ತಿರುವದು ವಿಶೇಷವಾಗಿತ್ತು. ಆದರೆ ಅಂಗವಿಕಲರಿಗೆ, ವಯೋವೃಧ್ಧರಿಗೆ ವಿಶೇಷ ಸೌಲಭ್ಯ ಕಲ್ಪಸಿದರೂ ಕೂಡಾ ಮತಗಟ್ಟೆ ಅಧಿಕಾರಿಗಳ ಸೂಕ್ತ ಕಾಲದಲ್ಲಿ ನೀಡಲಿಲ್ಲ. ಪಟ್ಟಣದಮಾದರಿಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಗೆ ನಡೆಯಲಾರದ ಸುಮಾರು 90 ವರ್ಷದ ವಯೋವೃದ್ಧ ಮಹಿಳೆಯೋರ್ವಳನ್ನು ಆಕೆಯ ಮೊಮ್ಮಗ ಎತ್ತಿಕೊಂಡು ಮತಗಟ್ಟೆಗೆ ಬಂದಿದ್ದು, ಮತಗಟ್ಟೆಯಲ್ಲಿ ವ್ಹೀಲ್ ಚೇರ್ ವ್ಯವಸ್ಥೆ ಮಾಡಬೇಕಿದ್ದ ಅಧಿಕಾರಿಗಳು ಅದನ್ನು ಸೂಕ್ತ ಕಾಲದಲ್ಲಿ ನೀಡಲಿಲ್ಲ ಎನ್ನಲಾಗಿದೆ. ಸ್ಥಳಿಯ ಕೆಲವು ಜನ ಅಧಿಕಾರಿಗಳೊಂದಿಗೆ ತಗಾದೆ ತೆಗೆದ ಕಾರಣಕ್ಕೆ ವ್ಹೀಲ್ ಚೇರ್ ಒದಗಿಸಿದ್ದು, ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ವೃದ್ದ ಮಹಿಳೆ ಬಿಸಿಲಿನಲ್ಲಿ ಕಾದು ಸುಸ್ತಾದ ಘಟನೆ ಪಟ್ಟಣದ 39 ನಂಬರ ಮತಗಟ್ಟೆಯಲ್ಲಿ ನಡೆದಿದೆ. ಇದೇ ಮತಗಟ್ಟೆಯಲ್ಲಿ ಬೆಳಿಗ್ಗೆ ಸರತಿಯಲ್ಲಿ ನಿಂತು ಮತ ಹಾಕುವವರಿಗೆ ಅಚ್ಚರಿ ಕಾದಿದ್ದು, ಮತಯಂತ್ರ ಕಾರ್ಯ ನಿರ್ವಹಿಸದೇ ಸುಮಾರು 20 ನಿಮಿಷ ತಡವಾಗಿ ಮತದಾನ ಪ್ರಾರಂಭವಾಗಿದೆ.ಅದೇ ರೀತಿ ಸೂಕ್ತ ಕಾಲದಲ್ಲಿ ವ್ಹೀಲ್ ಚೇರ್ ವ್ಯವಸ್ಥೆ ನೀಡದಿರುವದು ಸಬಗೇರಿ ಶಾಲೆ ಮತಗಟ್ಟೆಯಲ್ಲಿಯೂ ನಡೆದಿದೆ.ಉಳಿದಂತೆ ಕ್ಷೇತ್ರಾದಾದ್ಯಂತ ಶಾಂತಿಯುತ ಮತದಾನ ನಡೆದಿದೆ.
ಬಂದೂಕು ದಾರಿ ಭದ್ರತಾ ಸಿಬ್ಬಂದಿಗಳನ್ನು ಕೆಲವು ಮತಗಟ್ಟೆಗಳಲ್ಲಿ ನೇಮಿಸಿದ್ದು, ಕನ್ನಡ ಭಾಷೆ ಬಾರದ ಅವರ ಮಾತುಗಳು ಹಾಗೂ ವರ್ತನೆಗೆ ಬಹಳಷ್ಟು ಮತದಾರರಿಗೆ ಬೇಸರ ತರಿಸಿದೆ. ಮತಗಟ್ಟೆಗೆ ಪ್ರವೇಶಿಸಯುವವರನ್ನು ಮೈ ಕೈ ಮುಟ್ಟಿ ತಡೆಯಲು ಪ್ರಯತ್ನಿಸಿದ ಭದ್ರತಾ ಸಿಬ್ಬಂದಿಗಳನ್ನು ಮತದಾರರೆ ತರಾಟೆ ತೆಗೆದುಕೊಂಡರೆನ್ನಲಾಗಿದೆ.

ಒಟ್ಟಾರೆ ಶಿಸ್ತಿನ ಚುನಾವಣೆ ಎನ್ನುವಂತೆ ಸೀನ್ ಸೃಷ್ಠಿಸಿರುವ ಚುನಾವಣಾ ಆಯೋಗ ಸ್ಥಳೀಯ ಅಧಿಕಾರಿಗಳು ಮತದಾರರಿಗೆ ಮಾಧ್ಯಮದವರ ಮೇಲೆ ಹಲವಾರು ನಿರ್ಭಂದಗಳನ್ನು ಹೇರಿದ್ದು, ಇದೇ ರೀತಿ ಮುಂದಿನ ದಿನಗಳಲ್ಲಿ ಚುನಾವಣೆಗಳು ನಡೆದರೇ ಅತ್ಯಂತ ಸೌಮ್ಯ ಸ್ವಭಾವದ ತಾಲ್ಲೂಕಿನ ಮತದಾರರು ಮತಗಟ್ಟೆಗೆ ಬರಲು ಹಿಂಜರಿದು ಮತದಾನ ಬಹಿಷ್ಕರಿಸುವ ಅವಕಾಶಗಳಿವೆ.

loading...