ವಿಧಾನಸಭೆ ಚುನಾವಣೆ : ನಿಷೇಧಾಜ್ಞೆ ಜಾರಿ

0
4
loading...

ನರಗುಂದ: ವಿಧಾನಸಭೆ ಚುನಾವಣೆ ಮತದಾನವು ಮೇ. 12 ರಂದು ಜರುಗಲಿದ್ದು ಈ ಹಿನ್ನಲೆಯಲ್ಲಿ 68-ನರಗುಂದ ವಿಧಾನಸಭೆ ಮತಕ್ಷೇತ್ರದ ಮತದಾರರಲ್ಲದವರು ಮತದಾನ ಪ್ರಾರಂಭವಾಗುವ ಪೂರ್ವ 24 ಗಂಟೆ ಮುಂಚಿತವಾಗಿ ಮತಕ್ಷೇತ್ರ ಬಿಟ್ಟು ತೆರಳಬೇಕು. ಈ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ವಸತಿ ಗೃಹಗಳ ಮಾಲೀಕರು ತಮ್ಮ ವಸತಿ ಗೃಹದಲ್ಲಿರುವ ಅತಿಥಿಗಳು ಈ ವಿಧಾನಸಭೆ ಕ್ಷೇತ್ರದವರಾಗಿರದಿದ್ದಲ್ಲಿ ತೆರವುಗೊಳಿಸಬೇಕು.
ಮೇ. 11 ರಂದು ಮತಗಟ್ಟೆಗಳಿಗೆ ತೆರಳುವ ತಾಲೂಕಿನ ಮತಗಟ್ಟೆ ಅಧಿಕಾರಿಗಳು ಶ್ರೀ ವಿಶ್ವೇಶ್ವರಯ್ಯ ಪಾಲಿಟೆಕ್ನಿಕ್‌ ಕಾಲೇಜು ನರಗುಂದ ಈ ಸ್ಥಳದಲ್ಲಿ ಬೆಳಿಗ್ಗೆ 6 ಗಂಟೆಗೆ ಹಾಜರಿರಲು ತಿಳಿಸಿದೆ. ಸದರಿ ಮತಗಟ್ಟೆ ಅಧಿಕಾರಿಗಳು ಬೇರೆ ವಿಧಾನಸಭಾ ಕ್ಷೇತ್ರಕ್ಕೆ ತೆರಳಲು ಮೇಲ್ಕಾಣಿಸಿದ ಸ್ಥಳದಿಂದ ಬಸ್‌ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮತಗಟ್ಟೆ ಅಧಿಕಾರಿಗಳು ಸಹಾಯ ದೂರವಾಣಿ ಸಂಪರ್ಕ 08377-241343 ಇಲ್ಲಿಗೆ ಸಂಪರ್ಕಿಸಿ ಮಾಹಿತಿಪಡೆದುಕೊಳ್ಳಬಹುದಾಗಿದೆ ಎಂದು ಚುನಾವಣೆ ಅಧಿಕಾರಿ ಸದಾಶಿವ ಮರ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...