ವಿಧಾನಸಭೆ ಚುನಾವಣೆ: ಮತದಾನಕ್ಕೆ ಸಕಲ ಸಿದ್ಧತೆ

0
8
loading...

ಬಾಗಲಕೋಟೆ: ವಿಧಾನಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಮತದಾನಕ್ಕೆ ಎಲ್ಲ ಸಿದ್ದತೆ ಮಾಡಿಕೊಂಡಿದೆ. ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಕೆ.ಜೆ.ಶಾಂತಾ ರಾಮ ಅವರು ಪರಿಶೀಲನೆಯನ್ನು ನಡೆಸಿದ್ದಾರೆ.
ಜಿಲ್ಲೆಯ ಏಳು ಮತಕ್ಷೇತ್ರದಲ್ಲಿ ನಾಳೆ ದಿ.12 ರಂದು ಶನಿವಾರ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಒಟ್ಟು 15,01,020 ಮತ ದಾರರನ್ನು ಒಳಗೊಂಡಿದೆ. ಈಗಾಗಲೇ ಆಯಾ ಪಕ್ಷಗಳ ಕಾರ್ಯಕರ್ತರು ಹಾಗೂ ಚುನಾವಣೆ ಆಯೊ ೀಗದ ಸಿಬ್ಬಂದಿ ಅವರು ಮನೆಮನೆಗೆ ತೆರಳಿ ಗುರುತಿನ ಚೀಟಿ ಭಾವಚಿತ್ರವನ್ನು ಹಂಚಲಾಗಿದೆ. ಜಿಲ್ಲೆಯಲ್ಲಿ 1694 ಮತಗಟ್ಟೆಗಳು ಇದ್ದು, 10595 ಸಿಬ್ಬಂದಿಯನ್ನು ನೇಮಿಸ ಲಾಗಿದೆ. ಸುಮಾರು 700 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರು ತಿಸಲಾಗಿದೆ.

ಮುಧೋಳ 32, ತೇರದಾಳ 30, ಜಮ ಖಂಡಿ 58, ಬೀಳಗಿ 52, ಬದಾಮಿ35, ಬಾಗಲಕೋಟ 38 ಮತಗಟ್ಟೆಗಳು ಸೇರಿವೆ. ಇಂದು ಬೆಳಿಗ್ಗೆಯಿಂದ ಜಿಲ್ಲೆಯ ವಿವಿಧ ಮತಗಟ್ಟೆ ಕೇಂದ್ರಗಳಿಗೆ ತೆರಳಲು ಸಿಬ್ಬ ಂದಿಗೆ ಕೆ.ಎಸ್.ಆರ್. ಟಿ.ಸಿ ಬಸ್ ಹಾಗೂ ಖಾಸಗಿ ವಾಹನಗಳನ್ನು ಬಾಡಿಗೆ ತೆಗೆದುಕೊಳ್ಳಲಾಗಿತ್ತು. ಇನ್ನೂ ಪೆÇಲೀಸ್ ಸಿಬ್ಬಂದಿ, ಅರೆ ಸೇನಾ ಪಡೆಯವರು, ಹೋ ಮ್ ಗಾರ್ಡ್ಸ್ ಸಿಬ್ಬಂದಿ ಯನ್ನು ಸಹ ಮತಗಟ್ಟೆ ಭದ್ರತೆಗೆ ಕಳುಹಿಸಲಾಯಿತು.
ಮತದಾರರ ವಿವರ: ಮುಧೋಳ-1,96,094, ತೇರದಾಳ-2,20,340, ಜಮಖಂಡಿ-203681, ಬೀಳಗಿ-218214, ಬಾದಾಮಿ-217721, ಬಾಗಲ ಕೋಟೆ-230825, ಹುನ ಗುಂದ-214145 ಮತದಾ ರರು ಇದ್ದು ಜಿಲ್ಲೆಯಲ್ಲಿ ಒಟ್ಟು 15,01020 ಮತದಾರರು ಇದ್ದು ನಾಳೆ ಮತವನ್ನು ಚಲಾಯಿಸಲಿದ್ದಾರೆ.
ಸಂತೆ ನಿಷೇಧ : ಮೇ.12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಳು ವಿಧಾನ ಸಭಾ ಕ್ಷೇತ್ರದ 21 ಸ್ಥಳಗಳಲ್ಲಿ ನಡೆಯಲಿರುವ ಸಂತೆ, ಜಾತ್ರೆ, ಉರುಸುಗಳನ್ನು ಮತದಾನದ ಕಾರಣಕ್ಕೆ ನಿಷೇಧಿಸಲಾಗಿದೆ. ಈಗಾಗಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಎಸ್ ಪಿ, ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಿ ದ್ದಾರೆ. ಅವರ ಹಣೆಬರಹ ವನ್ನು ನಾಳೆ ಮತದಾರರು ಬರೆಯಲಿದ್ದಾರೆ.

loading...