ವಿಧಾನಸೌಧದ ಸುತ್ತಮುತ ರಾರಾಜಿಸುತ್ತಿವೆ ಹೆಚ್ಡಿಕೆ ಫ್ಲೆಕ್ಸ್‍ಗಳು

0
16
loading...

ಬೆಂಗಳೂರು – ರಾಜ್ಯದ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಶೇಷಾದ್ರಿರಸ್ತೆ, ಕೆ.ಜಿ.ರಸ್ತೆ ಸೇರಿದಂತೆ ಅಭಿನಂದನೆ ಸಲ್ಲಿಸುವ ಫ್ಲೆಕ್ಸ್, ಬಂಟಿಂಗ್ಸ್ ರಾರಾಜಿಸುತ್ತಿವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸವಿರುವ ಪದ್ಮನಾಭನಗರ, ಎಚ್.ಡಿ.ಕುಮಾರಸ್ವಾಮಿಯವರ ನಿವಾಸವಿರುವ ಜೆ.ಪಿ.ನಗರ ಸೇರಿದಂತೆ ನಗರದ ಹಲವು ಕಡೆಗಳಲ್ಲಿ, ರಸ್ತೆಗಳಲ್ಲಿ ಪಕ್ಷದ ಮುಖಂಡರು, ಅಭಿಮಾನಿಗಳು ಅಭಿನಂದನೆ ಸಲ್ಲಿಸಿರುವ ಫ್ಲೆಕ್ಸ್ಗಳು ರಾರಾಜಿಸುತ್ತಿದ್ದು, ಇದರೊಂದಿಗೆ ಪಕ್ಷದ ಬಾವುಟ ಕಂಡುಬರುತ್ತದೆ.
ಈಗಾಗಲೇ ಕುಮಾರಸ್ವಾಮಿಯವರು ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್ಗಳನ್ನು ಕಟ್ಟಬಾರದು, ಪಟಾಕಿ ಸಿಡಿಸಬಾರದು, ಪರಿಸರಸ್ನೇಹಿ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಆಚರಿಸಿ ಸಂಬ್ರಮಿಸಬೇಕೆಂದು ಕರೆ ನೀಡಿದ್ದರು. ಆದರೂ ಎಲ್ಲೆಡೆ ಫ್ಲೆಕ್ಸ್ಗಳದ್ದೇ ಕಾರುಬಾರು ಕಂಡುಬರುತ್ತಿದೆ.

loading...