ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರನ್ನು ಅಮಾನತ್ ಮಾಡುವಂತೆ ಒತ್ತಾಯ

0
15
loading...

ಕನ್ನಡಮ್ಮ ಸುದ್ದಿ-ಕುಮಟಾ: ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಬೆಂಬಲ ಸೂಚಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಕೈಗೊಂಡ ಪಕ್ಷದ ಪದಾಧಿಕಾರಿಗಳು ಸೇರಿದಂತೆ 17 ಕಾರ್ಯಕರ್ತರನ್ನು ಬಿಜೆಪಿ ಪಕ್ಷದಿಂದ ಅಮಾನತ್ ಮಾಡುವಂತೆ ಜಿಲ್ಲಾಧ್ಯಕ್ಷರಿಗೆ ಒತ್ತಾಯಿಸಲಾಗಿದೆ ಎಂದು ಕುಮಟಾ ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ ಹೇಳಿದರು.
ಅವರು ಭಾನುವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರಿಗೆ ಪಕ್ಷ ಟಿಕೆಟ್ ಘೋಷಣೆ ಮಾಡಿದ ಬಳಿಕ ಯಶೋಧರ ನಾಯ್ಕ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೆ, ಸೂರಜ ನಾಯ್ಕ ಸೋನಿ ಅವರು ಪಕ್ಷದ ಅಭ್ಯರ್ಥಿಯ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿದ್ದರು. ಈ ಬಂಡಾಯ ಅಭ್ಯರ್ಥಿಗೆ ಜಿಪಂ ಸದಸ್ಯೆ ವೀಣಾ ಸೂರಜ್ ನಾಯ್ಕ ಸೋನಿ, ಬಿಜೆಪಿಯ ನಿವೃತ್ತ ನೌಕರರ ಜಿಲ್ಲಾ ಪ್ರಕೋಷ್ಠಾದ ಸಹ ಸಂಚಾಲಕ ಸುಬ್ಬಯ್ಯ ನಾಯ್ಕ ಕೋನಳ್ಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜ ಡಿ ನಾಯ್ಕ, ಪ್ರಮುಖರಾದ ಸತೀಶ ಚಂದಾವರ, ವೀಣಾ ನಾಯಕ ತಲಗೇರಿ, ಸುದರ್ಶನ ಶಾನಭಾಗ, ರಾಜೇಶ ನಾಯ್ಕ ಬರ್ಗಿ, ಶ್ರೀನಾಗ ಪ್ರಭು ವಾಲಗಳ್ಳಿ, ಅಣ್ಣಪ್ಪ ನಾಯ್ಕ ವಕ್ನಳ್ಳಿ, ಮಹೇಶ ನಾಯ್ಕ ವಕ್ನಳ್ಳಿ, ಮಂಜುನಾಥ ನಾಯ್ಕ ಹೆಗಡೆ, ರಾಘು ನಾಯ್ಕ ಅಳವಳ್ಳಿ, ಕೇಶವ ನಾಯ್ಕ ದೇವಗಿರಿ, ಮಹೇಂದ್ರ ನಾಯ್ಕ ಕತಗಾಲ, ವಿಘ್ನೇಶ್ವರ ನಾಯ್ಕ ಬಾಡ, ಮಂಗಲದಾಸ ನಾಯ್ಕ ಬಾಡ, ದೀಪಕ ನಾಯ್ಕ ಕತ್ಗಾಲ ಹಾಗೂ ಪಕ್ಷದ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಕೆಲ ಪದಾಧಿಕಾರಿಗಳು ಮತ್ತು ಬೂತ್ ಅಧ್ಯಕ್ಷರುಗಳು ಸಾತ್ ನೀಡಿದ್ದಾರೆ. ಹಾಗಾಗಿ ಇವರೆಲ್ಲರನ್ನು ಈ ಕ್ಷಣದಿಂದ ಅಮಾನತ್ ಮಾಡುವಂತೆ ಪಕ್ಷದ ಜಿಲ್ಲಾಧ್ಯಕ್ಷರಿಗೆ ವರದಿ ಸಲ್ಲಿಸಿ, ಒತ್ತಾಯಿಸುತ್ತೇವೆ ಎಂದರು.

ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಹಾಗೂ ಮತದಾನದ ಸಂದರ್ಭದಲ್ಲಿ ಕಾರ್ಯಕರ್ತರು ಶ್ರಮವಹಿಸಿ ಕಾರ್ಯನಿರ್ವಹಿಸಿದ್ದರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಪ್ರಮುಖರಾದ ವಿನೋದ ಪ್ರಭು, ಅಶೋಕ ಪ್ರಭು, ವಿನಾಯಕ ಭಟ್, ತಿಮ್ಮಪ್ಪ ಮುಕ್ರಿ, ಹೇಮಂತಕುಮಾರ ಗಾಂವ್ಕರ್, ಪಿ ಎನ್ ಪಟಗಾರ, ಜಿ ಐ ಹೆಗಡೆ, ಹರಿಹರ ನಾಯ್ಕ, ಚೆತೇಶ ಶಾನಭಾಗ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

loading...