ವಿವಿಧೆಡೆ ಬಿ.ಶ್ರೀರಾಮುಲು ರೋಡ್‌ ಶೋ: ಮತಯಾಚನೆ

0
12
loading...

ಗದಗ: ಮಾತಿನಿಂದ ವಿಶ್ವವನ್ನೇ ಬೆರಗುಗೊಳಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವವನ್ನು ವಿಶ್ವದ ಹಿರಿಯಣ್ಣ ಅಮೇರಿಕಾ ಮೆಚ್ಚಿರುವ ಹಿನ್ನಲೆಯಲ್ಲಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ಕಮಲ ಅರಳಿಸಿ ಅವರ ಕೈಯನ್ನು ಬಲಪಡಿಸಬೇಕಾಗಿದೆ. ಸಮುದಾಯದ ಪ್ರತಿಯೊಬ್ಬರು ತಮ್ಮ ಪಾಲಿನ ಸವಲತ್ತು ಪಡೆದು ಸ್ವಾಭಿಮಾನ ಬದುಕು ನಡೆಸಬೇಕೆಂಬ ಅವರ ಗುರಿಗೆ ನಾವೆಲ್ಲರೂ ಬೆಂಬಲ ನೀಡೋಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಬದಾಮಿ ಮತಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹೇಳಿದರು.
ಗದಗ ಮತಕ್ಷೇತ್ರ ಬಿಜೆಪಿ ಅಭ್ಯರ್ಥಿ ಅನೀಲ ಮೆಣಸಿನಕಾಯಿ ಪರವಾಗಿ ಕಳಸಾಪೂರ, ಗದಗ ತಾಲೂಕಿನ ನಾಗಾವಿ, ಬೆಳದಡಿ, ಸೊರಟೂರ, ಮುಳಗುಂದ ಕುರ್ತಕೋಟಿ ಮಾರ್ಗವಾಗಿ ಮಂಗಳವಾರ ಮದ್ಯಾಹ್ನ ರೋಡಶೋ ನಡೆಸಿ, ಅವರು ಮಾತನಾಡಿದರು.
ನನ್ನ ತಮ್ಮನಂತಿರುವ ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನೀಲ ಮೆಣಸಿನಕಾಯಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಸಾರ್ವಜ£ಕ ಸೇವೆ ಸಲ್ಲಿಸಲು ಅವಕಾಶ ನೀಡಿರಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಹೇಳಿದರು.
ನಿಮ್ಮ ಬಿ.ಶ್ರೀರಾಮುಲು ಮತ್ತೇ ಗದಗ ಬಿಜೆಪಿ ಅಭ್ಯರ್ಥಿ ಅನೀಲ ಮೆಣಸಿನಕಾಯಿ ಅಣ್ಣ ತಮ್ಮಂದಿರಂತೇ, ಈ ಬಾರಿ ನನ್ನ ತಮ್ಮ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾನೆ. ಇಷ್ಟು ದಿನ ನನಗೆ ತೋರಿದ ಪ್ರೀತಿ ಇವರ ಮೇಲಿರಲಿ. ನಿಮ್ಮ ಆಶೀರ್ವಾದದ ಅವಶ್ಯಕತೆಯಿದೆ ಇದೆ. ಜಿಲ್ಲೆಯನ್ನು ಅಭಿವೃದ್ದಿ ಮಾಡುವ ಹಿನ್ನಲೆಯಲ್ಲಿ ಈ ಬಾರಿ ಬಿಜೆಪಿಗೆ ಮತ ನೀಡುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಿರಿ ಎಂದರು. ರೈತ ನಾಯಕ ಸಿಎಂ ಬಿ.ಎಸ್‌.ಯಡಿಯೂರಪ್ಪ ನೇತ್ರತ್ವದಲ್ಲಿ ಬಿಜೆಪಿ ಸರಕಾರ ರಚನೆಯಾಗುವ ವಿಶ್ವಾಸವಿದೆ. ರೈತ ಶಕ್ತಿಯನ್ನು ಪ್ರಬಲಗೊಳಿಸುವದರೊಂದಿಗೆ ಹಸಿರು ಕರ್ನಾಟಕ ನಿರ್ಮಿಸುವ ವಚನ ನಮ್ಮದಾಗಿದೆ. ಜಿಡ್ಡು ಹಿಡಿದ ಶಿಕ್ಷಣ ಕ್ಷೇತ್ರವನ್ನು ನೀರು ಹರಿಯುವಂತೆ ಹರಿಸಲಾಗುವದು. ಯುವ ಹಾಗೂ ಮಹಿಳಾ ಸಮುದಾಯ ಭವಿಷ್ಯದ ಹಿತದೃಷಿಯಿಂದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುವದು ಎಂದು ಬದಾಮಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹೇಳಿದರು.
ಬದಾಮಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಗದಗ ಮತಕ್ಷೇತ್ರ ಬಿಜೆಪಿ ಅಭ್ಯರ್ಥಿ ಅ£ೕಲ ಮೆಣಸಿನಕಾಯಿ ಪರವಾಗಿ ಅಪಾರ ಜನಸಸ್ತೋಮದ ಮಧ್ಯೆದಲ್ಲಿ ಕಳಸಾಪೂರ, ನಾಗಾವಿ, ಬೆಳದಡಿ, ಸೊರಟೂರ, ಮುಳಗುಂದ, ಕುರ್ತಕೋಟಿ ಗ್ರಾಮದಲ್ಲಿ ರೋಡಶೋ ನಡೆಸಿ ಮತಯಾಚಿಸಿದರು.
ಗ್ರಾಮದಲ್ಲಿ ರೋಡಶೋ ನಡೆಸುವ ಸಂದರ್ಭದಲ್ಲಿ ಬಿ.ಶ್ರೀರಾಮುಲು ಅವರನ್ನು ನೋಡಿದ ಯುವಕರು ಕೈ ಮಾಡುವ ಮೂಲಕ ಪದೇ ಪದೇ ರಾಮುಲು, ರಾಮುಲು ಎಂಬ ಹೆಸರನ್ನು ಪ್ರಸ್ತಾಪಿಸುವ ಮೂಲಕ ತಮ್ಮ ಅಭಿಮಾನ ತೋರಿದರು.
ಈ ಸಂದರ್ಭದಲ್ಲಿ ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನೀಲ ಮೆಣಸಿನಕಾಯಿ, ಚುನಾವಣಾ ಉಸ್ತುವಾರಿ ಎಂ.ಎಸ್‌.ಕರಿಗೌಡ್ರ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮೋಹನ ಮಾಳಶೆಟ್ಟಿ, ರಾಜು ಕುರಡಗಿ, ಅರವಿಂದ ಹುಲ್ಲೂರ, ಛಗನ ರಾಜಪುರೋಹಿತÀ, ಎಸ್‌.ಎಚ್‌.ಶಿವನಗೌಡ, ಕಿರಣ ಭೂಮಾ, ನಗರಸಭಾ ಸದಸ್ಯ ಸಂತೋಷ ಮೇಲಗಿರಿ, ಮಂಜುನಾಥ ಮ್ಯಾಗೇರಿ, ಬಸವರಾಜ ಬೆಳದಡಿ, ಚಂದ್ರು ಗುಡ್ಡಿಮಠ, ರಮೇಶ ಮುಳಗುಂದ ಸೇರಿದಂತೆ ಸಾವಿರಾರು ಕಾರ್ಯಕರ್ತರು ಹಾಜರಿದ್ದರು.

loading...