ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಪ್ರತಿಭಟನೆ

0
24
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: 2017-18ನೇ ಸಾಲಿನ ರೈತರ ಕಬ್ಬಿನ ಬಾಕಿ ಬಿಲ್ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಕಬ್ಬಿನ್ ಬಾಕಿ ಬಿಲ್ ನೀಡಿಲ್ಲ.ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.
ನೂತನ ಸರಕಾರ ರೈತರ ಸಾಲಮನ್ನಾ ಮಾಡಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ರೈತರಿಗೆ ದಿನಕ್ಕೆ 10ಗಂಟೆ ವಿದ್ಯುತ್ ಒದಗಿಸಬೇಕು. ಘಟಪ್ರಭಾ, ಮಲ್ಲಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಹರಿಸಬೇಕು. ರೈತರಿಗೆ ಬೀಜ ಮತ್ತು ರಸಗೊಬ್ಬರವನ್ನು ಉಚಿತವಾಗಿ ವಿತರಿಸಬೇಕು. ಪ್ರೆಟೊಲ್ ಮತ್ತು ಡಿಸೇಲ್ ಜಿಎಸ್‍ಟಿ ವ್ಯಾಪ್ತಿಗೆ ಸೇರಿಸಬೇಕು ಎಂದು ರೈತರು ಸರಕಾರವನ್ನು ಒತ್ತಾಯಿಸಿದರು. ಅಲ್ಲದೆ ಮಹಾರಾಷ್ಟ್ರ ಮತ್ತು ಗುಜರಾತ್‍ನಲ್ಲಿ ಕಬ್ಬಿಗೆ ನೀಡಲಾಗುತ್ತಿರುವ ಬೆಲೆಯನ್ನು ರಾಜ್ಯದಲ್ಲಿ ನೀಡಬೇಕು ಆಗ್ರಹಿಸಿದರು.

ಚುನಪ್ಪಾ ಪೂಜೇರಿ, ಅಶೋಕ ಯಮಕನಮರಡಿ, ಯಲ್ಲಪ್ಪಾ ದೊಡಮನಿ ಕುಮಾರ ಮರದಿ, ಶಿವಪುತ್ರಪ್ಪಾ ಗುರುಸಿದ್ದಣ್ಣವರ, ಈರಣ್ಣಾ ಸಸಾಲಟ್ಟಿ, ಜಗದೀಶ ದೇವರಡ್ಡಿ, ಶಿವಾನಂದ ದೊಡವಾಡ, ಮಲ್ಲಪ್ಪಾ ಅಂಗಡಿ, ರಮೇಶ ಕಲಹಾರ, ಸತ್ಯೆಪ್ಪಾ ಮಲ್ಲಾಪುರಿ, ಮುಂತದಾವರು ಇದ್ದರು.

loading...