ವಿವಿಪ್ಯಾಟ್ ತಾಂತ್ರಿಕ ತೊಂದರೆ: ಕೆಲ ನಿಮಿಷ ಮತದಾನ ಸ್ಥಗಿತ

0
10
loading...

ವಿವಿಪ್ಯಾಟ್ ತಾಂತ್ರಿಕ ತೊಂದರೆ: ಕೆಲ ನಿಮಿಷ ಮತದಾನ ಸ್ಥಗಿತ

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ತೆಗ್ಗಿನಕೇರಿ ಗಲ್ಲಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಹೆಣ್ಣು ಮಕ್ಕಳ ಶಾಲೆ ಸಂ.೨ರಲ್ಲಿ ಮತಗಟ್ಟೆಯಲ್ಲಿ ವಿವಿ ಪ್ಯಾಟ್ ತೊಂದರೆಯಿಂದ ೫೦ನಿಮಿಷಗಳ ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು.

ಶನಿವಾರ ಬೆಳ್ಳಿಗೆ ೭ ಗಂಟೆಯಿಮದಲೇ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡವು.ಅದೇ ರೀತಿ ತೆಗ್ಗಿನಕೇರಿ ಗಲ್ಲಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಹೆಣ್ಣು ಮಕ್ಕಳ ಶಾಲೆ ಸಂ.೨ರಲ್ಲಿ ಪ್ರಾರಂಭವಾಗಿದ್ದು.ನಂತರ ವಿವಿಪ್ಯಾಟ್ ತಾಂತ್ರಿಕ ದೋಶದಿಂದ ೫೦ ನಿಮಿಷಗಳ ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ಬೆಳಗ್ಗೆ ಯಿಂದಲೆ ಸರದಿ ಸಾಲಿನಲ್ಲಿ ನಿಂದ ಮತದಾರರು ಬಿಸಿಲಿನಲ್ಲಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ನಂತರ ವಿವಿಪ್ಯಾಟ್ ಸರಿ ಪಡಿಸಿದಂದ ನಂತರ ಮತದಾನ ಪ್ರಕ್ರಿಯೆ ಮುಂದುವರೆಯಿತು.

loading...