ವೀರಶೈವ ಲಿಂಗಾಯತರೆಲ್ಲರು ಲಿಂಗವಂತರಾಗಬೇಕು: ಬೆದವಟ್ಟಿ ಶ್ರೀ

0
12
loading...

ಕುಕನೂರ: ಕೇವಲ ವೀರಶೈವ ಲಿಂಗಾಯತ ಧರ್ಮ ನಮ್ಮದು ಎಂದರೇ ಸಾಲದು ಧರ್ಮದಲ್ಲಿರುವ ಆಚರಣೆಗಳನ್ನ ನಮ್ಮಲ್ಲಿ ತಂದಾಗ ಮಾತ್ರ ವೀರಶೈವ ಲಿಂಗಾಯತರಾಗಲು ಸಾಧ್ಯ, ನಮಗೆ ಧರ್ಮ ಏನು ಕೊಟ್ಟಿದೆ ಎಂಬುವುದಕ್ಕಿಂತ ಧರ್ಮಕ್ಕೆ ನಾವೇನು ನೀಡಿದ್ದೇವೆ ಎಂಬುದು ಮುಖ್ಯ ಎಂದು ಕೊಪ್ಪಳ ಜಿಲ್ಲಾ ವೀರಶೈವ ಲಿಂಗಾಯತ ಮಠಾದೀಶರ ಒಕ್ಕೂಟದ ಗೌರವಾಧ್ಯಕ್ಷರಾದ ಬೆದವಟ್ಟಿ ಹಿರೇಮಠದ ಪೂಜ್ಯ ಷ ಬ್ರ ಶಿವಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಅವರು ಬೆದವಟ್ಟಿಯ ಹಿರೇಮಠದಲ್ಲಿ ನಡೆದ ಕೊಪ್ಪಳ ಜಿಲ್ಲಾ ವೀರಶೈವ ಲಿಂಗಾಯತ ಮಠಾದೀಶರ ಒಕ್ಕೂಟದ ರಚನೆಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಇಂದಿನ ದಿನಗಳಲ್ಲಿ ಹಲವಾರು ಸಂಘ ಸಂಸ್ಥೆಗಳು ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತೇವೆ ಅದರಂತೆಯೇ ಮಠಾದೀಶರ ಒಕ್ಕೂಟ ಕೂಡ ವೀರಶೈವ ಲಿಂಗಾಯತ ಧರ್ಮದ ಅಭಿವೃದ್ಧಿಗೆ ತನ್ನದೆ ಆದ ಕೊಡುಗೆ ನೀಡಲಿದೆ ಇದರ ಮುಖ್ಯ ಉದ್ದೇಶ ಎಲ್ಲಾರು ಲಿಂಗಾವಂತರಾಗಿ ಧರ್ಮದ ಆಚರಣೆಯನ್ನ ಪಾಲಿಸಬೇಕು ಅದಕ್ಕಾಗಿ ಜಿಲ್ಲೆಯಾದ್ಯಂತ ಪ್ರತಿ ತಿಂಗಳು ನಾಲ್ಕನೇ ಸೋಮವಾರ ಲಿಂಗಾದಾರಣ, ರುದ್ರಾಕ್ಷೀದಾರಣ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ದರಿಸಲಾಗಿದೆ ಇಂತಹ ಕಾರ್ಯಕ್ಕೆ ಸಮಾಜದ ಸರ್ವರ ಸಹಕಾರ ಅಗತ್ಯ ಎಂದರು.
ಅಧ್ಯಕ್ಷರಾಗಿ ಆಯ್ಕೆಯಾದ ಯಲಬುರ್ಗಾ ಸಿದ್ದಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಒಕ್ಕೂಟದ ಪದಾದಿಕಾರಿಗಳ ಅವದಿ 2 ವರ್ಷ ಆಗಿರುತ್ತದೆ, ಒಕ್ಕೂಟದ ಕಾರ್ಯಗಳಿಗೆ ಎಲ್ಲಾರ ಸಹಕಾರ ಅವಶ್ಯ ಸಮಾಜದ ಅಭಿವೃದ್ಧಿಯಾಗಿ ನಾವೇಲ್ಲಾ ಉತ್ತಮ ಕಾರ್ಯ ಮಾಡಬೇಕಾಗಿದೆ, ಸಮಾಜದ ಜನರಿಗೆ ಧರ್ಮದ ಸಂದೇಶಗಳು ತಲುಪಬೇಕು ಎಲ್ಲಾರು ಲಿಂಗಧರಿಸಿ ಲಿಂಗಾವಂತರಾಗಬೇಕು ಕೇವಲ ಬಾಯಲ್ಲಿ ನಾವು ವೀರಶೈವ ಲಿಂಗಾಯತರು ಎಂದು ಹೇಳಿಕೊಂಡರೆ ಸಾಲದು, ಧರ್ಮದ ಪ್ರತಿಯೊಬ್ಬರು ದರ್ಮದ ಮಹತ್ವ ಅರಿತು ಅದನ್ನ ಸಮಾಜದ ಎಲ್ಲಾರಿಗೂ ತಿಳಿಸಬೇಕು. ನಾವು ಅಷ್ಟೇ ಲಿಂಗಪೂಜೆ ಮಾಡಿದರೆ ಸಾಲದು ಬೇರೆಯವನ್ನು ಲಿಂಗಾಪೂಜೆ ಮಾಡಲು ಪ್ರೇರೆಪಿಸಬೇಕು ಮತ್ತು ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಬಸವಣ್ಣನವರು ವೀರಶೈವ ಲಿಂಗಾಯದ ಧರ್ಮದ ಎರಡು ಕಣ್ಣುಗಳು ಇದ್ದಂತೆ ಎಂದರು. ಕುಷ್ಟಗಿಯ ಕರಿಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿದರು.
ಈ ಸಂಧರ್ಭದಲ್ಲಿ ಜಿಲ್ಲೆಯ ಬೆದವಟ್ಟಿಯ ಹಿರೇಮಠದ ಶ್ರೀಗಳು, ಯಲಬುರ್ಗಾ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠದ ಶ್ರೀಗಳು, ಕುಕನೂರ ಶ್ರೀ ಜ ಅನ್ನದಾನೀಶ್ವರ ಶಾಖಾಮಠದ ಶ್ರೀಗಳು, ಮೈನಹಳ್ಳಿ ಹಿರೇಮಠದ ಶ್ರೀಗಳು, ಕುಷ್ಟಗಿ ಶ್ರೀ ಮದ್ದಾನೇಶ್ವರ ಮಠದ ಶ್ರೀಗಳು, ಯಲಬುರ್ಗಾದ ಶ್ರೀ ಧರಮುರಡಿ ಹಿರೇಮಠ ಶ್ರೀಗಳು, ಚಿಕ್ಕಮ್ಯಾಗೇರಿ ಭೂ ಕೈಲಾಸ ಮೇಲು ಗದ್ದುಗೆ ಹಿರೇಮಠ ಶ್ರೀಗಳು, ಜಿಗೇರಿ ಹಿರೇಮಠದ ಶ್ರೀಗಳು, ಸುಳೇಕಲ್ ಶರಣರು, ಅರಳಿಹಳ್ಳಿ ಶರಣರು ಮತ್ತು ಜಿಲ್ಲೆಯ ಎಲ್ಲಾ ಶ್ರೀಗಳು ಪಾಲ್ಗೊಂಡಿದ್ದರು.

loading...