ಶಾಲಾ ಕಾಲೇಜುಗಳ ಅನುದಾನ ಕಡಿತಕ್ಕೆ ಸಂಕನೂರ ಖಂಡನೆ

0
18
loading...

ಗದಗ: ಎಸ್ಎಸ್ಎಲ್’ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿಜಿಲ್ಲಾ ಸರಾಸರಿಗಿಂತಕಡಿಮೆ ಬಂದಿರುವ ಖಾಸಗಿ ಅನುದಾನಿತ ಶಾಲೆ, ಕಾಲೇಜುಗಳ ಅನುದಾನ ತಡೆಹಿಡಿಯಲು, ಕಡಿಮೆ ಮಾಡಲು ಅಥವಾ ಹಿಂತೆಗೆದುಕೊಳ್ಳಲು ಇತ್ತೀಚಿಗೆ ಸರಕಾರ ಗಂಭೀರವಾಗಿ ಚಿಂತನೆ ನಡೆಸಿದ್ದನ್ನು ವಿಧಾನ ಪರಿಷತ್ ಸದಸ್ಯಎಸ್.ವ್ಹಿ. ಸಂಕನೂರ ಅವರು ಉಗ್ರವಾಗಿ ಖಂಡಿಸಿದ್ದಾರೆ.

ಇತ್ತೀಚಿಗೆ ಬೆಂಗಳೂರು ಗ್ರಾಮಾಂತರದ ಒಂದು ಪ್ರೌಢಶಾಲೆಗೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ. ಫಲಿತಾಂಶ ಜಿಲ್ಲಾ ಸರಾಸರಿಗಿಂತ ಕಡಿಮೆ ಬಂದಿರುವ ಕಾರಣಕ್ಕೆ ಸಂಬಂಧಪಟ್ಟ ಉಪನಿರ್ದೇಶಕರು ಅನುದಾನ ಹಿಂಪಡೆಯಲು ಆದೇಶ ಹೊರಡಿಸಿರುವರು.
ಈ ಆದೇಶವನ್ನು ಸಂಬಂಧಪಟ್ಟ ಶಾಲೆಯವರು ನ್ಯಾಯಾಲಯದಲ್ಲಿ ಪ್ರಶ್ನಿಸಿ ಜಿಲ್ಲಾ ಸರಾಸರಿಗಿಂತ ಫಲಿತಾಂಶ ಕಡಿಮೆಯಾದ ಉಳಿದ ಶಾಲೆಗಳಿಗೆ ಈ ರೀತಿಯ ಕ್ರಮ ಏಕೆ ಕೈಗೊಂಡಿರುವುದಿಲ್ಲ ? ಮತ್ತು ಈ ರೀತಿ ತಾರತಮ್ಯ ಮಾಡಿರುವುದನ್ನು ಪ್ರಶ್ನಿಸಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ ಅವರು ರಾಜ್ಯದ ಎಲ್ಲಾ ಉಪನಿರ್ದೇಶಕರಿಗೆ ಪತ್ರ ಬರೆದು ಕಳೆದ 5 ವರ್ಷಗಳಲ್ಲಿ, ಜಿಲ್ಲಾ ಸರಾಸರಿಗಿಂತ ಫಲಿತಾಂಶ ಕಡಿಮೆಯಾದ ಶಾಲೆ, ಕಾಲೇಜುಗಳ ಪಟ್ಟಿಯನ್ನು ಸಿದ್ದಪಡಿಸಿ ಅನುದಾನ ತಡೆ ಹಿಡಿಯಲು ಅಥವಾ ಹಿಂಪಡೆದುಕೊಳ್ಳಲು ಕ್ರಮ ಜರುಗಿಸಲು ಸರಕಾರಕ್ಕೆ ಕಳುಹಿಸಲು ಸೂಚನೆ ನೀಡಿರುವರು. ಇದಕ್ಕೆ ತಪ್ಪಿದಲ್ಲಿ ಆಯಾ ಉಪನಿರ್ದೆಶಕರುಗಳೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿರುವರು.

ಕರ್ನಾಟಕ ಶಿಕ್ಷಣ ಕಾಯ್ದೆಅಧಿನಿಯಮ 1983 ಕಲಂನ 53ರ ಪ್ರಕಾರ ಖಾಸಗಿ ಅನುದಾನಿತ ಶಾಲೆ, ಕಾಲೇಜುಗಳಿಗೆ ನೀಡಿದ ಅನುದಾನವನ್ನು ತಡೆ ಹಿಡಿಯುವ, ಕಡಿಮೆ ಮಾಡುವ ಅಥವಾ ಹಿಂಪಡೆಯುವ ಅಧಿಕಾರವಿರುವುದು. ಆದರೆ ಈ ಅಧಿಕಾರವನ್ನು ಬಳಸಿಕೊಂಡು ಸರಕಾರ ಶಾಲೆ, ಕಾಲೇಜುಗಳ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಫಲಿತಾಂಶ ಸಂಬಂಧಪಟ್ಟ ಜಿಲ್ಲಾ ಸರಾಸರಿಗಿಂತ ಕಡಿಮೆ ಇರತಕ್ಕದ್ದಲ್ಲ ಎಂಬ ನಿಯಮ ರೂಪಿಸಿ ಆಜ್ಞೆ ಹೊರಡಿಸಿರುವದು ಅವೈಜ್ಞಾನಿಕ ಹಾಗೂ ಅಮಾನವೀಯ ಕ್ರಮವಾಗಿದೆ.
ಆದ್ದರಿಂದ ಫಲಿತಾಂಶ ಜಿಲ್ಲಾ ಸರಾಸರಿಗಿಂತ ಕಡಿಮೆಯಾದಲ್ಲಿ ಏಕಾಎಕಿಯಾಗಿ ಅನುದಾನ ತಡೆ ಹಿಡಿಯುವ ಅಥವಾ ಹಿಂಪಡೆಯಬೇಕೆಂಬ ನಿಯಮಾವಳಿ ರೂಪಿಸಿದ್ದನ್ನು ರದ್ದುಪಡಿಸಬೇಕು ಮತು ್ತಯಾವ ಕಾರಣಕ್ಕೂ ರಾಜ್ಯದ ಶಾಲೆ, ಕಾಲೇಜುಗಳ ಅನುದಾನ ತಡೆ ಹಿಡಿಯುವ ಕ್ರಮ ಕೈಗೊಳ್ಳಬಾರದೆಂದು ಸರಕಾರದ ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಇವರಿಗೆ ವಿಧಾನ ಪರಿಷತ್ ಸದಸ್ಯಎಸ್.ವ್ಹಿ. ಸಂಕನೂರ ಅವರು ಪತ್ರ ಬರೆದು ಸರಕಾರವನ್ನು ಒತ್ತಾಯಿಸಿದ್ದಾರೆ. ಒಂದು ವೇಳೆ ಫಲಿತಾಂಶ ಕಡಿಮೆಯಾದ ಕಾರಣದ ಮೇಲೆ ಸರಕಾರ ಅನುದಾನ ತಡೆ ಹಿಡಿಯಲು ಮುಂದಾದಲ್ಲಿ ರಾಜ್ಯಾದ್ಯಂತ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಹಾಗೂ ಆಡಳಿತ ಮಂಡಳಿ ಹೋರಾಟಕ್ಕೆ ಮುಂದಾಗುವ ಅನಿವಾರ್ಯ ಪ್ರಸಂಗ ಬರುವುದೆಂದು ಎಸ್.ವ್ಹಿ.ಸಂಕನೂರ ಅವರು ಸರಕಾರವನ್ನು ಎಚ್ಚರಿಸಿದ್ದಾರೆ.

loading...