ಶಾಲಾ ಪ್ರಾರಂಭೋತ್ಸವ ಹಾಗೂ ಅಕ್ಷರಜಾತ್ರೆಯಲ್ಲಿ ಪಾಲ್ಗೊಳ್ಳಿ: ಗಂಗಾಧರ

0
32
loading...

ಕನ್ನಡಮ್ಮ ಸುದ್ದಿ- ಮೂಡಲಗಿ: 2018-19 ನೇ ಶೈಕ್ಷಣಿಕ ವರ್ಷಾರಂಭವಾಗಿದ್ದು ಮೂಡಲಗಿ ವಲಯ ವ್ಯಾಪ್ತಿಯಲ್ಲಿಯ ಶಾಲೆಗಳು ಸ್ವಚ್ಛತೆ, ಸಣ್ಣಪುಟ್ಟ ದುರಸ್ಥಿ, ಮಕ್ಕಳ ದಾಖಲಾತಿ, ಹಾಜರಾತಿ ಕುರಿತು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ಸಮುದಾಯ, ಎಸ್.ಡಿ.ಎಮ್.ಸಿ, ಚುನಾಯಿತ ಪ್ರತಿನಿಧಿಗಳು ಅಗತ್ಯಕ್ರಮ ಕೈಗೊಂಡು ಶಾಲಾ ಪ್ರಾರಂಭೋತ್ಸವ ಹಾಗೂ ಅಕ್ಷರಜಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಮೂಡಲಗಿ ಬಿ.ಇ.ಒ ಎ.ಸಿ ಗಂಗಾಧರ ತಿಳಿಸಿದ್ದಾರೆ.

ಅವರು ಪಟ್ಟನದ ಬಿ.ಆರ್.ಸಿ ಕಛೇರಿಯಲ್ಲಿ ಜರುಗಿದ ಬಿ.ಆರ್.ಪಿ, ಸಿ.ಆರ್.ಪಿ ಇ.ಸಿ.ಓ, ಐ.ಇ.ಆರ್.ಟಿಯವರ ಶಾಲಾ ಪ್ರಾರಂಭೋತ್ಸವ ಹಾಗೂ ಅಕ್ಷರ ಬಂಡಿ ಕಾರ್ಯಕ್ರಮದ ಕುರಿತ ಸಭೆಯಲ್ಲಿ ಮಾತನಾಡಿದರು.ಮೇ 28 ರಂದು ಶಾಲಾ ಸ್ವಚ್ಛತೆ ಹಾಗೂ ಅಗತ್ಯ ಪ್ರಾರಂಭೋತ್ಸವ ತಯಾರಿ ಕೈಗೋಳ್ಳ ಬೇಕು. ಮೇ 29 ರಂದು ಅಕ್ಷರ ಬಂಡಿ ಎಂಬ ವಿನೂತನ ಕಾರ್ಯಕ್ರಮವು ಚಿಕ್ಕೋಡಿ ಡಿಡಿಪಿಐ ಎಮ್. ಜಿದಾಸರ ಅವರ ಮಾರ್ಗದರ್ಶನದಂತೆ ರಾಜ್ಯದಲ್ಲಿಯೇ ಪ್ರಥಮವಾಗಿ ಮಕ್ಕಳನ್ನು ಶಾಲೆಗಳತ್ತ ಆಕರ್ಷಿಸುವ ಕಾರ್ಯ ಜರುಗುವದು.
ಪ್ರತಿಯೊಂದು ಶಾಲೆಗಳಲ್ಲಿ ಅಕ್ಷರಗಳಿಂದ ತುಂಬಿರುವ ಕಲಿಕಾ ವಾತಾವರಣ ನಿರ್ಮಿಸುವ ಕಾರ್ಯಕ್ರಮದ ಕುರಿತು ವಿವರಿಸಿದರು. ನೂತನ ಶೈಕ್ಷಣಿಕ ವಾರ್ಷಾರಂಭದಿಂದ ಮಿಂಚಿನ ಸಂಚಾರ, ಶಿಕ್ಷಕರ ಶೈಕ್ಷಣಿಕ ತಯಾರಿ, ಸೇತುಬಂಧ, ದಾಖಲೆಗಳ ತಯಾರಿಸಬೇಕು. ಪಠ್ಯಪುಸ್ತಕ, ಸಮವಸ್ತ್ರ ಸಕಾಲಕ್ಕೆ ತಲುಪಿಸಲು ಕ್ರಮ ಕೈಗೋಳ್ಳುವದು.ಶಾಲಾ ಸಂಘಗಳನ್ನು ರಚನೆ, ಖಡ್ಡಾಯವಾಗಿ ಶಾಲಾ ಅವಧಿಯಲ್ಲಿ ಮೊಬೈಲ್ ನಿಷೇಧಿಸಬೇಕು. ಶಾಲಾ ಹಂತದಲ್ಲಿ ಸ್ಥಳಿಯ ಎಸ್.ಡಿ.ಎಮ್.ಸಿ, ಚುನಾಯಿತ ಪ್ರತಿನಿಧಿಗಳು, ಶಿಕ್ಷಣ ಪ್ರೇಮಿಗಳ ಅಗತ್ಯ ಸಲಹೆ ಸೂಚನೆಯನುಸಾರ ಶೈಕ್ಷಣಿಕ ಉನ್ನತಿಗಾಗಿ ಕ್ರಮವಹಿಸುವಂತೆ ಹೇಳಿದರು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣಾಧಿಕಾರಿ ಎಸ್.ಎ ನಾಡಗೌಡರ, ಇ.ಸಿ.ಒ ಪಿ.ಎಸ್ ಮದಬಾವಿ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಚ್ ಮೋರೆ, ಬಿ.ಆರ್.ಪಿಗಳಾದ ಕೆ.ಎಲ್. ಮೀಶಿ, ಪಿ.ಜಿ ಪಾಟೀಲ್, ಎ.ಬಿ ಚವಡನ್ನವರ, ಬಿ.ಎಮ್ ನಂದಿ ಹಾಗೂ ವಲಯ ವ್ಯಾಪ್ತಿಯ ಸಿ.ಆರ್.ಪಿಗಳು ಉಪಸ್ಥಿತರಿದ್ದರು.

loading...