ಶಾಲೆಗೆ ಮಕ್ಕಳನ್ನು ದಾಖಲಿಸಲು ವಿಶೇಷ ಆಂದೋಲನ ಜಾಥಾ

0
15
loading...

ಸಿಂದಗಿ: ರಾಜ್ಯದ ಪ್ರತಿಯೊಂದು ಮಗು ಸಿಕ್ಷಣದಿಂದ ವಂಚಿತವಾಗಬಾರದು ಎನ್ನುವ ನಿಟ್ಟಿನಲ್ಲಿ ಸರ್ಕಾರ ಖಾಸಗಿ ಶಿಕ್ಷಣಗಳ ಜೊತೆಗೆ ಸವಾಲೊಡ್ಡುವ ರೀತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು, ಮಕ್ಕಳಿಗೆ ಗುಣಮಟ್ಟದ ಶೀಕ್ಷಣ ನೀಡಲು ಕಂಕಣ ಬದ್ಧವಾಗಿವೆ. ಹೀಗಾಗಿ ಪಾಲಕರು, ಅರ್ಹ ವಯಸ್ಸಿನ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಬೇಕು. ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-1 ಸಿಂದಗಿ ಶಾಲೆಯ ವತಿಯಿಂದ ನಡೆದ ವಿಶೇಷ ದಾಖಲಾತಿ ಆಂದೋಲನವನ್ನು ಉದ್ದೇಶಿಸಿ, ಪ್ರಭಾತಪೇರಿ ನಡೆಸಿ, ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಸಮವಸ್ತ್ರ, ಪಠ್ಯಪುಸ್ತಕ, ಬಿಸಿಊಟ, ಕ್ಷೀರ ಭಾಗ್ಯ, ಶೂ ಮತ್ತು ಸಾಕ್ಸ್ ಅಲ್ಲದೇ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದ್ದು, ಗುಣಮಟ್ಟದ ಶಿಕ್ಷಣಕ್ಕಾಗಿ ಇಲಾಖೆಯು ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಪ್ರಯುಕ್ತ ಪಾಲಕರು ಇದರ ಸದುಪಯೋಗ ಪಡೆಯಬೇಕೆಂದು ಸೂಚಿಸಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಬಿ. ಯಡ್ರಾಮಿ ಮಾತನಾಡಿದರು. ಜಾಥಾದಲ್ಲಿ ಬಿ.ಆರ್.ಪಿ.ಗಳಾದ ಎಸ್.ಕೆ. ಗುಗ್ಗರಿ, ಎಂ.ಎಂ. ದೊಡಮನಿ ಹಾಗೂ ಎಚ್.ಎಸ್. ನಾಗಣಸೂರ ಸಿ.ಆರ್.ಪಿ ಮತ್ತು ಎಂ.ಎಸ್. ಧರೇನವರ ಆಯ್.ಇ.ಆರ್.ಟಿ. ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ, ಸಾಯಬಣ್ಣ ದೇವರಮನಿ ದಲಿತ ಮುಖಂಡರು, ಪಾಲಕರು, ವಿದ್ಯಾರ್ಥಿಗಳು, ನೋಡಲ್ ಆರ್.ಬಿ. ರಾಠೋಡ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

loading...