ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಮಹತ್ವ ನೀಡಿ: ಯಾದವಾಡ

0
51
loading...

ಕನ್ನಡಮ್ಮ ಸುದ್ದಿ- ರಾಮದುರ್ಗ: ತಾಲೂಕಿನಲ್ಲಿ ಗುಣ ಮಟ್ಟದ ಶಿಕ್ಷಣ ಮಕ್ಕಳಿಗೆ ದೊರೆಯಬೇಕು ಹಾಗೂ ಶಿಕ್ಷಣ ಸುಧಾರಣೆಗಾಗಿ ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳಲು ತಮ್ಮ ಸಲಹೆಗಳನ್ನು ನೀಡಬೇಕು. ಮತ್ತು ಎಲ್ಲ ಶಿಕ್ಷಕರು ಸರ್ಕಾರದ ಯೋಜನೆಗಳನ್ನು ಮಕ್ಕಳಿಗೆ ಸಮರ್ಪಕವಾಗಿ ತಲುಪಿಸುವಂತಾ ಕಾರ್ಯವನ್ನು ಮಾಡಬೇಕು ಹಾಗೂ ರಾಜಕಾರಣಿಗಳ ಅಧಿಕಾರಾವಧಿ ಕೇವಲ ಐದು ವರ್ಷ ಆದರೆ, ಸರ್ಕಾರಿ ನೌಕರರ ಕೆಲಸ 60 ವರ್ಷ ಆದ್ದರಿಂದ ಎಲ್ಲರೂ ಪ್ರಾಮಾಣಕವಾಗಿ ಕಾರ್ಯ ನಿರ್ವಹಿಸಬೇಕೆಂದು ಎಂದು ಶಾಸಕ ಮಹಾದೇವಪ್ಪ ಯಾದವಾಡ ತಿಳಿಸಿದರು,

ತಾಲೂಕಿನ ತುರನೂರ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಸಕ್ತ ಸಾಲೀನ ವಿದ್ಯಾರ್ಥಿಳಿಗೆ ಪುಸ್ತಕ ವಿತರಣೆ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಬಾರಿ ಎಸ್ ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ರಾಜ್ಯಕ್ಕೆ 11 ನೇ ಸ್ಥಾನ ತಂದು ತಾಲೂಕಿಗೆ ಉತ್ತಮ ಫಲಿತಾಂಶವನ್ನು ತಂದುಕೊಟ್ಟಿದ್ದಾರೆ ಹೆಮ್ಮೆಯ ವಿಷಯ ಅದು ಎಲ್ಲ ಶಿಕ್ಷಕರಿಗೆ ಸಂದ ಗೌರವವಾಗಿದೆ.
ತಾಲೂಕಿನಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಕೊಠಡಿಯ ಸಮಸ್ಯೆ ಇದೆ ಹಾಗೂ 226 ಶಿಕ್ಷಕರ ಕೊರತೆ ಇದೆ ಅದನ್ನು ಬರುವ ದಿನಗಳಲ್ಲಿ ಪೂರೈಸುವಂತಾ ಕಾರ್ಯವನ್ನು ಮಾಡುತ್ತೇನೆ.

ಶಿಕ್ಷಕರು ವರ್ಗಾವಣೆಯಾದರೆ ಬೇರೊಬ್ಬ ಶಿಕ್ಷಕರು ಆ ಶಾಲೆಗೆ ಬರುವವರೆಗೂ ಅವರನ್ನು ಬಿಡುಗಡೆ ಗೊಳಿಸಬಾರದು ಎಂದು ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಶಿಕ್ಷಣ ಅಭಿವೃದ್ದಿಗೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ನಿಮ್ಮಗಳ ಸಹಕಾರ ನೋಡಬೇಕೆಂದು ಹೇಳಿದರು.

ಜಿಲ್ಲಾ ಪಂಚಾಯಯತ ಸದಸ್ಯ ಮಾರುತಿ ತುಪ್ಪದ ಮಾತನಾಡಿ ಸರ್ಕಾರ ಶೈಕ್ಷಣಿಕ ವರ್ಷ ಪ್ರಾರಂಭದಲ್ಲಿಯೇ ಪಠ್ಯೆ ಪುಸ್ತಕ ಇನ್ನಿತರ ಸೌಲಬ್ಯಗಳನ್ನು ವಿರತರಣೆ ಮಾಡುತ್ತಿದೆ. ಶಿಕ್ಷಣಕ್ಕೆ ಸಂಭದಿಸಿದ ಸೌಲಭ್ಯಗಳು ಮಕ್ಕಳಿಗೆ ಹಾಗೂ ಪಾಲಕರಿಗೆ ಸಮರ್ಪಕವಾಗ ತಲುಪಬೇಕು ಅಧಿಕಾರಿಗಳು ಹಾಗೂ ಶಿಕ್ಷಕರು ಪ್ರಾಮಾಣಿಕ ಕೆಲಸ ಮಾಡಿ ನಮ್ಮ ತಾಲೂಕಿ ರಾಜ್ಯದಲ್ಲಯೇ ಪ್ರಥಮ ಸ್ಥಾನ ಪಡದುಕೊಳ್ಳುಬೇಕು ಅದಕ್ಕೆ ನಮ್ಮ ಸಹಕಾರ ವಿರುತ್ತದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಬಿ ಆರ್.ದೊಡಮನಿ, ಅಕ್ಷರ ದಾಸೋ ಅಧಿಕಾರಿ ಎಂ.ಎ.ಮೋರಬ, ಬಿ.ಆರ್ ಜಮಖಾನೆ, ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ವಿ.ಪಾಟೀಲ, ಲಕ್ಷ್ಮಣ ಅಣ್ಣಿಗೇರಿ, ಕೆ.ಡಿ.ಅಚನೂರ, ಕೆ.ಎಚ್ ಹಂಪಿಹೊಳಿ, ಎಸ್.ಬಿ ಏಣಿ, ನಾಗರತ್ನಾ ಗಂಗಣ್ಣವರ,ಪಿ.ಪಿ ಮಹೇಂದ್ರಕರ, ಬಿ.ಆರ್ ಬಂತಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಪದಾಧಿಕಾರಿಗಳು ಶಿಕ್ಷಕರು ಉಪಸ್ಥಿತರಿದ್ದರು.

loading...