ಶಿರಾಳಡೋಣ: ಹಿರಿಯರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ

0
2
loading...

ಕನ್ನಡಮ್ಮ ಸುದ್ದಿ-ವಿಜಯಪುರ: ತಾಲೂಕಿನ ಶಿರಾಳಡೋಣ ಗ್ರಾಮದ ಹಿರಿಯರು ಯವಕರು ವಿವಿಧ ಪಕ್ಷಗಳನ್ನು ತೊರೆದು ನಾಗಠಾಣ ವಿಧಾಸನಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲ್‌ ಕಾರಜೋಳ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಪಕ್ಷ ಸೇರ್ಪಡೆಗೊಂಡವರನ್ನು ಆತ್ಮೀಯವಾಗಿ ಬರ ಮಾಡಿಕೊಂಡು ಮಾತನಾಡಿದ ಉಮೇಶ ಗೋ ಕಾರಜೋಳ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆ, ಯುವಶಕ್ತಿ ಸಬಲೀಕರಣಕ್ಕೆ ಪೂರಕವಾದ ಕಾರ್ಯಯೋಜನೆಗಳು, ಯುವಕರಿಗೆ ಉದ್ಯೋಗ ಒದಗಿಸಿ ಆರ್ಥಿಕ ಭದ್ರತೆ ಕಲ್ಪಿಸುವ ಮುದ್ರಾ ಮೊದಲಾದ ಯೋಜನೆಗಳನ್ನು ಜನತೆ ಮೆಚ್ಚಿಕೊಂಡಿದ್ದಾರೆ. ಬೇರೆ ಪಕ್ಷದಲ್ಲಿರುವವರು ಸಹ ಬಿಜೆಪಿ ತತ್ವ-ಸಿದ್ದಾಂತ, ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ’ ತತ್ವವನ್ನು ಸದಾ ನೆನಪಿನಲ್ಲಿರಿಸಿಕೊಳ್ಳಬೇಕಿದೆ. ನಾಗಠಾಣ ಮತಕ್ಷೇತ್ರದ ಜನತೆ ಅಭಿವೃದ್ಧಿಗೆ ಬೆಂಬಲಿಸಬೇಕು. ಮೋದಿ ಸರ್ಕಾರದ ಸಾಧನೆಗಳು ಡಾ. ಗೋಪಾಲ ಗೋ ಕಾರಜೋಳರ ಗೆಲುವಿನ ಶ್ರೀರಕ್ಷೆಯಾಗಲಿವೆ ಎಂದರು.
ಈ ಸಂದರ್ಬದಲ್ಲಿ ಗ್ರಾಮದ ಹಿರಿಯರಾದ ರಾಜು ಬಗಲಿ, ಸುಭಾಸ ಬಗಲಿ, ಮಲ್ಲಿಕಾರ್ಜುನ ಬಿರಾದಾರ, ಶರಣಪ್ಪ ಬಗಲಿ, ಗಂಗಣ್ಣ ಶರಣಪ್ಪ ಬಗಲಿ,ಹಣಂತ್ರಾಯ ಬಗಲಿ,ನಾಗೆಂದ್ರ ಬಗಲಿ, ಮಹಾದೇವ ಹತ್ತರಕಿ ಹಾಗೂ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

loading...