ಶೀಘ್ರದಲ್ಲಿ ಗಟಾರ ಸ್ವಚ್ಚಗೊಳಿಸುವಂತೆ ಸಾರ್ವಜನಿಕರ ಒತ್ತಾಯ

0
33
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಪ್ಲಾಸ್ಟಿಕ್ ಚೀಲ್, ಬಾಟಲಿಗಳು, ಸೇರಿದಂತೆ ಮನೆಯ ತ್ಯಾಜ್ಯ ವಸ್ತುಗಳು ಹಾಗೂ ಕೊಳಕು ನೀರು ತುಂಬಿ ನಿಂತು, ಸೊಳ್ಳೆಗಳ ಉತ್ಪತ್ತಿ ತಾಣವಾಗುತ್ತಾ, ಡೆಂಗ್ಯು ಮಲೇರಿಯಾ ಸೇರಿದಂತೆ ಇನ್ನಿತರ ರೋಗಕ್ಕೆ ಆಹ್ವಾನ ನೀಡುವ ವಾತಾವರಣದ ಸ್ಥೀತಿ, ಪಟ್ಟಣದ ತಾಲೂಕಾ ಆಸ್ಪತ್ರೆಗೆ ಹೊಗುವು ರಸ್ತೆಯ ಪಕ್ಷದ ಗಟಾರ (ಚರಂಡಿ) ಗಳಲ್ಲಿ ನಿರ್ಮಾಣವಾಗಿದೆ.
ಪ್ರಸಕ್ತ ವರ್ಷ ಬೇಸಿಗೆ ಕಾಲ ಪೂರ್ಣಗೊಂಡು, ಇನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗುವ ಹಂತಕ್ಕೆ ತಲುಪಿದ್ದೆವೆ. ಅದರಂತೆ ಈಗಾಗಲೇ ತಾಲೂಕಿನಲ್ಲಿ ಕಳೆದ 15 ದಿನಗಳಿಂದ ಮಳೆ ಬಿಳ್ಳುತ್ತಿದ್ದು. ಪಟ್ಟಣದ ಬಹುತೇಕ ವಾರ್ಡಗಳ ಗಟಾರಗಳಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್ ಚೀಲ್, ಬಾಟಲಿಗಳು, ಸೇರಿದಂತೆ ಮನೆಯ ತ್ಯಾಜ್ಯ ವಸ್ತುಗಳು ಹಾಗೂ ಕೊಳಕು ನೀರು ತುಂಬಿಕೊಂಡಿದ್ದು. ಅದರಿಂದ ಸೊಳ್ಳೆಗಳ ಉತ್ಪತ್ತಿಗೆ ದಾರಿ ಮಾಡಿಕೊಟ್ಟಂತಾಗಿದೆ. ಮತ್ತು ಮಳೆ ಆದರೆ ಸಾಕು ನೀರು ಗಟಾರದಲ್ಲಿ ಹರಿಯದೇ ರಸ್ತೆ ಮೇಲೆ ಹರಿಯುತ್ತದೆ. ಈ ಬಗ್ಗೆ ಪಟ್ಟಣ ಪಂಚಾಯತ ಶೀಘ್ರ ಸ್ವಚ್ಚಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಂಜುನಾಥ ಎಚ್ ಕಲಾಲ ಹೇಳಿಕೆ- ಪಟ್ಟಣದ ಕೆಲ ವಾರ್ಡುಗಳ ಗಟಾರಗಳಲ್ಲಿ ತ್ಯಾಜ್ಯ ಹಾಗೂ ಕೊಳಕು ನೀರು ತುಂಬಿ ನಿಂತಿದ್ದು. ಇದರಿಂದ ರೋಗಗಳು ಹರಡುವ ಲಕ್ಷಣಗಳು ಕಂಡುಬರುತ್ತಿವೆ. ಹಾಗಾಗಿ ಪ.ಪಂ, ನವರು ಮಳೆಗಾಲ ಆರಂಭವಾದ ಮೇಲೆ ಗಟಾರ ಸ್ವಚ್ಚಗೊಳಿಸುವ ಬದಲು ಮೊದಲೇ ಈ ಕಾರ್ಯವನ್ನು ಮಾಡಿದರೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳುತ್ತಾರೆ.
ಸಾರ್ವಜನಿಕರ ಹೇಳಿಕೆ- ಪಟ್ಟಣ ಪಂಚಾಯತದಲ್ಲಿ ಕೇವಲ 24 ಪೌರ ಕಾರ್ಮಿಕರಿದ್ದಾರೆ. ಆದರೆ ಪೌರ ಕಾರ್ಮಿಕರ ಸಂಖ್ಯೆಯೂ ಕಡಿಮೆ ಇರುವುದರಿಂದ, ಇದ್ದ ಪೌರ ಕಾರ್ಮಿಕರು ಮನೆ ಮನೆ ಕಸ ಸಂಗ್ರಹಣೆಗಾಗಿ ತೆರಳುತ್ತಾರೆ. ಹಾಗಾಗಿ ಗಟಾರ ಸವಚ್ಚಗೊಳಿಸುವು ಕಾರ್ಯಕ್ಕೆ ಮಳೆಗಾಲ ಪೂರ್ವದಲ್ಲಿ ಗುತ್ತಿಗೆದಾರರಿಗೆ ಗುತ್ತಿಗೆ ನೀಡಿ ಆದಷ್ಟು ಶೀಘ್ರದಲ್ಲಿ ಗಟಾರ ಸ್ವಚ್ಚಗೊಳಿಸುವ ಕಾರ್ಯ ನಡೆಯಬೇಕೆಂಬುವುದು ಪ್ರಜ್ಞಾವಂತ ಸಾರ್ವಜನಿಕರ ಆಗ್ರಹವಾಗಿದೆ.

loading...