ಶ್ರೀಮಂತ ಪಾಟೀಲರಿಗೆ ಅದ್ದೂರಿ ಸ್ವಾಗತ

0
29
loading...

ಕನ್ನಡಮ್ಮ ಸುದ್ದಿಕಾಗವಾಡ 16: 20 ವರ್ಷಗಳ ಬಳಿಕ ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಶ್ರೀಮಂತ ಪಾಟೀಲ ಇವರಿಂದ ಮರಳಿ ಕಾಗವಾಡಕ್ಕೆ, ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿ ಬಂದಿದ್ದರಿಂದ, ಕಾಗವಾಡ, ಶೇಡಬಾಳ, ಶಿರಗುಪ್ಪಿ, ಉಗಾರ, ಐನಾಪೂರ, ಮಂಗಸೂಳಿ ಗ್ರಾಮಗಳಲ್ಲಿ ನೂತನ ಶಾಸಕ ಶ್ರೀಮಂತ ಪಾಟೀಲರನ್ನು ಅದ್ದೂರಿಯಾಗಿ ಬರಮಾಡಿಕೊಂಡರು.ಶ್ರೀಮಂತ ಪಾಟೀಲರು ಉತ್ಸಾಹಿ ಕಾರ್ಯಕರ್ತರನ್ನು ಕಂಡು, ಪ್ರತಿಯೊಬ್ಬರಿಗೆ ಕೈ ಮುಗಿಯುತ್ತಾ, ನಿಮ್ಮ ಋಣ ತೀರಿಸಲು ಅಸಾಧ್ಯ. ನನ್ನದು ಒಂದೇ ಉದ್ದೇಶವಿದ್ದು, ಮತಕ್ಷೇತ್ರದಲ್ಲಿ ಶಾಂತಿ ಕಾಪಾಡುವದು ಮತ್ತು ಅಭಿವೃದ್ಧಿ ಮಾಡೊವುದು ಇಷ್ಟೇ ಮಾಡಿದರೆ ಜನರ ಸಮಸ್ಯೆಗಳಿಗೆ ಸ್ಪಂದಿಸಿದಂತಾಗುತ್ತದೆ. ಅವರೊಂದಿಗೆ ಅವರ ಸಹೋದರರಾದ ಉತ್ತಮ ಪಾಟೀಲ, ಸುಪುತ್ರರಾದ ಯೊಗೇಶ, ಸುಶಾಂತ, ಶ್ರೀನಿವಾಸ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

loading...