ಸದಸ್ಯರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ: ನ್ಯಾ. ಈಶಪ್ಪ

0
21
ಶಿಗ್ಗಾವಿ : ಪ್ರತಿಯೊಬ್ಬರೂ ನ್ಯಾಯಕ್ಕಾಗಿ ಬೇರೆ ಕಡೆಗೆ ಅಲೆದಾಡದೆ ಎಲ್ಲರಿಗೂ ಇಲ್ಲಿಯೇ ನ್ಯಾಯ ಸಿಗಬೆಕೆಂಬ ಉದ್ದೇಶದಿಂದ ಪಟ್ಟಣಕ್ಕೆ ಹಿರಿಯ ದಿವಾಣಿ ನ್ಯಾಯಾಲಯದ ಬೇಡಿಕೆ ಇತ್ತು ಅದನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿರುತ್ತೇನೆ ಎಂದು ಜಿಲ್ಲಾ ಹಿರಿಯ ದಿವಾಣಿ ನ್ಯಾಯಾಧೀಶ ಈಶಪ್ಪ ಬೂತೆ ಹೇಳಿದರು.
ಪಟ್ಟಣದ ಜೆ.ಎಮ್‌.ಎಫ್‌.ಸಿ ನ್ಯಾಯಾಲಯದ ಆವರಣದಲ್ಲಿ ಶಿಗ್ಗಾವ ಹಿರಿಯ ನ್ಯಾಯಾಲಯದ ನ್ಯಾಯಾಧಿಶ ವಿಜಯಕುಮಾರ ಕಣ್ಣೂರ ಇವರ ಉಪಸ್ಥಿತಿಯಲ್ಲಿ ನ್ಯಾಯವಾದಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಬಿಳ್ಕೊಡಿಗೆ ಸಮಾರಂಭದಲ್ಲಿ ಬಾವುಕರಾಗಿ ಮಾತನಾಡಿದ ಅವರು ಕಾಯಕದಲ್ಲಿ ನನ್ನನ್ನು ತೊಡಗಿಸಿಕೊಂಡು ಪ್ರಾಮಾಣಿಕ ಕಾರ್ಯ ನಿರ್ವಹಣೆ ಮಾಡಿದ್ದೇನೆ, ನನ್ನ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಣೆ ಮಾಡಿದ್ದೇನೆ ಶಿಗ್ಗಾವಿ ವಕೀಲರ ಸಂಘದ ಸರ್ವ ಸದಸ್ಯರು ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿರುತ್ತೇನೆ. ಪ್ರೀತಿ ವಿಶ್ವಾಸ ತೋರಿಸಿದ ಶಿಗ್ಗಾವ-ಸವಣೂರ ನ್ಯಾಯವಾದಿಗಳನ್ನು ಎಂದಿಗೂ ಮರೆಯುವುದಿಲ್ಲ ಎಂದರು. ಹಿರಿಯ ನ್ಯಾಯವಾದಿ ಎಸ್‌.ಕೆ.ಅಕ್ಕಿ ಮಾತನಾಡಿ ನ್ಯಾಯಾಧೀಶ ಈಶಪ್ಪ ಬೂತೆ ಅವರು ನ್ಯಾಯಯುತ ಸೇವೆ ಸಲ್ಲಿಸಿದ್ದಾರೆ, ನ್ಯಾಯಸಮ್ಮತ ಸೇವೆ ಇವರದು ಶಿಗ್ಗಾವಿ-ಸವಣೂರ ಹಿರಿಯ ದಿವಾಣಿ ನ್ಯಾಯಾಲಯಕ್ಕೆ ಸಹಾಯ ಸಹಕಾರ ನೀಡಿ ಶ್ರಮಿಸಿದವರು, ಇವರ ವರ್ಗಾವಣೆಯಿಂದ ನ್ಯಾಯಾಂಗ ವ್ಯವಸ್ಥೆಯ ವಿಷಯದಲ್ಲಿ ತುಂಬಾ ಸಹಾಯವಾಗಲಿದೆ ಎಂದರು.
ಹಿರಿಯ ನ್ಯಾಯವಾದಿ ಜಿ.ಆಯ್‌ ಸಜ್ಜನಗೌಡ್ರ ಮಾತನಾಡಿ ನ್ಯಾಯಾಧೀಶ ಈಶಪ್ಪ ಬೂತೆ ಅವರು ವಕೀಲರನ್ನು ಕಾಳಜಿ ಮತ್ತು ಪ್ರೀತಿಯಿಂದ ನೊಡಿದವರು, ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಿ ಉಚ್ಚ ನ್ಯಾಯಾಲಯದಿಂದ ಮೆಚ್ಚುಗೆಗೆ ಪಾತ್ರರಾದವರು, ವಕೀಲರ ಸಂಘಕ್ಕೆ ಕಟ್ಟಡದ ಅವಶ್ಯಕತೆ ಮತ್ತು ಕಿರಿಯ ನ್ಯಾಯಾಲಯಕ್ಕೆ ಒಳ್ಳೆಯ ಅಧಿಕಾರಿಯ ನೇಮಕವಾಗಬೇಕಿದೆ ಎಂದರು. ಹಿರಿಯ ನ್ಯಾಯವಾದಿ ಜಿ.ಎಸ್‌. ಅಂಕಲಕೋಟಿ , ವಕೀಲರ ಸಂಘದ ಅಧ್ಯಕ್ಷ ಎಸ್‌.ಬಿ.ಲಕ್ಕಣ್ಣವರು, ಮಾತನಾಡಿದರು. ಎಮ್‌.ಎಚ್‌.ಬೆಂಡಿಗೆರಿ ಸ್ವಾಗತಿಸಿದರು, ಎ.ಎ. ಗಂಜೇನವರು ನೀರೂಪಿಸಿದರು. ಬಿ.ಎ.ಬಾಲೇಹೋಸೂರ ವಂದಿಸಿದರು.
ಸಹಾಯಕ ಸರ್ಕಾರಿ ಅಭೀಯೋಜಕ ಜಿ.ಕೆ. ಕುರ್ಡಿಕೇರಿ, ಹಿರಿಯ ನ್ಯಾಯವಾದಿಗಳಾದ ಎಸ್‌.ಟಿ ಪಾಟೀಲ್‌, ಎ.ಎ. ಪರೋಖಿ, ಎಫ್‌.ಎಸ್‌.ಕೋಣವರ, ಕೆ.ಎಸ್‌.ಪಾಟೀಲ್‌, ಎನ್‌ ಎನ್‌ ಪಾಟೀಲ್‌, ಎಸ್‌.ಎಮ್‌ ಗಾಣಿಗೇರ, ಜಿ.ಎನ್‌ ಯಲಿಗಾರಿ, ಬಿ.ಎಮ್‌.ಸುಂಕದ, ಮುದಕಣ್ಣವರ, ಕೂಲಿ, ಸಿ.ಎಮ್‌,ಹರಕುಣಿ ಡಿ.ಬಿ ಚಿಕ್ಕೋಡಿ, ಕೆ,ಎನ್‌ ಭಾರತಿ, ನಾಲವಾಲ, ಹುತ್ತನಗೌಡ್ರ, ಬಿ.ಕೆ.ಮತ್ತಿಗಟ್ಟಿ, ಬಿ.ಪಿ ಗುಂಡಣ್ಣನವರ, ಸಂತೊಷಗೌಡ ಪಾಟೀಲ್‌, ಎಮ್‌ ಆರ್‌ ಕಮ್ಮಾರ, ಎಸ್‌.ಕೆ ಕಟ್ಟಿ, ಎಮ್‌.ಜಿ ವಿಜಾಪೂರ, ಎಸ್‌.ಎನ್‌ ಪಾಟೀಲ್‌, ಪಿ.ಆಯ್‌ ಬಡಿಗೆರ, ಕೋಣಪ್ಪನವರ, ಮಂಜು ವಡ್ಡರ, ಪ್ರದೀಪ ರಾಠೋಡ, ಪಿ.ಪಿ ಹೊಂಡದಕಟ್ಟಿ, ನ್ಯಾಯವಾದಿಗಳ ಸಂಘದ ಸದಸ್ಯರು ಮತ್ತು ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.
loading...