ಸಮಗ್ರ ಅಭಿವೃದ್ಧಿಗಾಗಿ ಮತ್ತೊಮ್ಮೆ ಬೊಮ್ಮಾಯಿ ಗೆಲ್ಲಿಸಿ

0
13
loading...

ಶಿಗ್ಗಾವಿ : ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಈ ಕ್ಷೇತ್ರದ ಶಾಸಕರಾದ ಬಸವರಾಜ ಬೊಮ್ಮಾಯಿಯವರು ಸಾಕಷ್ಟು ಅಭಿವೃದ್ಧಿಯನ್ನು ಮಾಡಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಾವು ಮತ್ತೊಮ್ಮೆ ಬೊಮ್ಮಾಯಿಯವರನ್ನು ಆಯ್ಕೆ ಮಾಡಬೇಕಾಗಿದೆ. ಅದಕ್ಕಾಗಿ ಎಲ್ಲರೂ ಬೊಮ್ಮಾಯಿಯವರ ಗೆಲುವಿಗಾಗಿ ಹಗಲಿರುಳು ಶ್ರಮಿಸಬೇಕೆಂದು ಬಿ.ಜೆ.ಪಿ. ಯುವ ಮುಖಂಡ ರಾಜು ಎಂ. ಕುನ್ನೂರ ಕರೆ ನೀಡಿದರು.
ಅವರು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರ ಪರ ಚುನಾವಣಾ ಪ್ರಚಾರಾರ್ಥವಾಗಿ ಬಂಕಾಪುರ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರಿಂದ ನಡೆದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡುತ್ತಾ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತವಾಗಿದ್ದು ಅಂತರವನ್ನು ಹೆಚ್ಚಿಸಲು ಕಾರ್ಯಕರ್ತರು ಶ್ರಮಪಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಬಂಕಾಪುರ ಪುರಸಭಾ ಸದಸ್ಯರಾದ ಹೊನ್ನಪ್ಪ ಹೂಗಾರ, ಉಮೇಶ ಕೋತಂಬರಿ, ಶಿವು ಅಂಗಡಿ ಮುಖಂಡರುಗಳಾದ ಅಂಬರೀಶ ಸರ್ವದೆ, ರಾಜು ಸುಲಾಖೆ, ಶಂಕ್ರಪ್ಪ ಕಟಗಿ, ಮಾಹದೇವಪ್ಪ ಗಡೆಪ್ಪನವರ, ಬಸವರಾಜ ನಾರಾಯಣಪುರ, ರವಿ ಕುರಗೋಡಿ, ಪರಶುರಾಮ ನರೇಗಲ್‌, ರಾಮಕೃಷ್ಣ ರಾಯ್ಕರ, ಲಲಿತಾ ಹಂಜಗಿ, ಬಾಪೂಗೌಡ ಪಾಟೀಲ, ಸತೀಶ ವನಹಳ್ಳಿ, ಚಂದನ ಕುನ್ನೂರ, ಶರಣಕುಮಾರ ಹಲಸೂರ ಮುಂತಾದವರು ಇದ್ದರು.

loading...